ತಾ.ಪಂ. ಕಚೇರಿಗೆ ಭೇಟಿ ಕಾರ್ಯಕ್ರಮ : ಜಿ.ಪಂ. ಸಿಇಓ ಆ. 23 ರಂದು ಕಾರಟಗಿಯಲ್ಲಿ ಲಭ್ಯ

You are currently viewing ತಾ.ಪಂ. ಕಚೇರಿಗೆ ಭೇಟಿ ಕಾರ್ಯಕ್ರಮ : ಜಿ.ಪಂ. ಸಿಇಓ ಆ. 23 ರಂದು ಕಾರಟಗಿಯಲ್ಲಿ ಲಭ್ಯ

ಕೊಪ್ಪಳ : ಜಿಲ್ಲಾ ಪಂಚಾಯತಗೆ ಸಂಬಂಧಿಸಿದಂತೆ ಕುಂದು ಕೊರತೆಗಳ ಕುರಿತು ಸಾರ್ವಜನಿಕರಿಂದ ಹಾಗೂ ಜನ ಪ್ರತಿನಿಧಿಗಳಿಂದ ಅಹವಾಲು ಆಲಿಸಲು ಪ್ರತಿ ಮಂಗಳವಾರ ಆಯಾ ತಾಲೂಕು ಪಂಚಾಯತ್ ಕಾರ್ಯಾಲಯಗಳಿಗೆ ಭೇಟಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆ ಅವರು ಬರುವ ಬುಧವಾರ ಆಗಸ್ಟ್ 23ರಂದು ಕಾರಟಗಿ ತಾಲೂಕಿಗೆ ಭೇಟಿ ನೀಡಲಿದ್ದಾರೆ.

ಅಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ನವಲಿ ರಸ್ತೆಯಲ್ಲಿರುವ ಕಾರಟಗಿ ತಾಲೂಕಿನ ತಾಪಂ ಕಾರ್ಯಾಲಯದಲ್ಲಿ ಹಾಜರಿದ್ದು ಕಾರಟಗಿ ತಾಲೂಕು ವ್ಯಾಪ್ತಿಯ ಸಾರ್ವಜನಿಕರಿಂದ ಹಾಗೂ ಜನಪ್ರತಿನಿಧಿಗಳಿಂದ ಅಹವಾಲುಗಳ ಕುರಿತು ಚರ್ಚಿಸಲಿದ್ದಾರೆ.

ಆದ್ದರಿಂದ ಕಾರಟಗಿ ತಾಲೂಕಿನ ವ್ಯಾಪ್ತಿಗೆ ಬರುವ ಸಾರ್ವಜನಿಕರು ಹಾಗೂ ಜನ ಪ್ರತಿನಿಧಿಗಳು ಜಿಪಂ ಸಿಇಓ ಅವರನ್ನು ಭೇಡಿ ಮಾಡಿ ತಮ್ಮ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಕೃಷ್ಣಮೂರ್ತಿ ಪಿ ಅವರು ತಿಳಿಸಿದ್ದಾರೆ.

Leave a Reply

error: Content is protected !!