ಕೊಪ್ಪಳ : ಗಂಗಾವತಿಯ ಆನೆಗುಂದಿ ರಾಜವಂಶಸ್ಥರು ಹಾಗೂ ಮಾಜಿ ಸಚಿವ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಶ್ರೀರಂಗದೇವರಾಯಲು (87)ವಯೋ ಸಹಜವಾಗಿವಾಗಿ ನಿಧನರಾಗಿದ್ದಾರೆ. ಮೃತರು ಪತ್ನಿ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು ಇಬ್ಬರು ಪುತ್ರರು ಪುತ್ರಿಯನ್ನು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಆನೆಗೊಂದಿಯಲ್ಲಿ ನಾಳೆ ಮಧ್ಯಾಹ್ನ ಸಂಪ್ರದಾಯದಂತೆ ನೆರವೇರಲಿದೆ. ಇವರು ಎರಡು ಬಾರಿ ಕನಕಗಿರಿ ಕ್ಷೇತ್ರದಿಂದ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ವೀರಪ್ಪ ಮೊಯ್ಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕಾಡ ಮತ್ತು ಅಚ್ಚುಕಟ್ಟು ಪ್ರದೇಶದ ಸಚಿವರಾಗಿ ಮತ್ತು ಅಖಂಡ ರಾಯಚೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
BREAKING: ರಾಜ್ಯದ ಮಾಜಿ ಸಚಿವ ಇನ್ನಿಲ್ಲ..!!

- Post author:Prajavikshane
- Post published:22/08/2023 6:42 pm
- Post category:Breaking News / ಕೊಪ್ಪಳ / ಗಂಗಾವತಿ
- Post comments:0 Comments
- Reading time:0 mins read