ಕುಕನೂರು : ಪಟ್ಟಣದ ಶ್ರೀ ಗವಿಸಿದ್ಧೇಶ್ವರ ಪ್ರೌಢ ಶಾಲೆಯಲ್ಲಿ 2023-24 ನೇ ಸಾಲಿನ ಕುಕನೂರ ಪೂರ್ವ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟ ಇಂದು ನಡೆಯುತ್ತಿದ್ದು, ಈ ಕ್ರೀಡಾ ಕೂಟದಲ್ಲಿ ಕುಕನೂರ ಪೂರ್ವ ವಲಯಕ್ಕೆ ಒಳಪಡುವ ಏಳು ಸರ್ಕಾರಿ ಹಾಗೂ ಅನುಧಾನಿತ, ಅನುಧಾನ ರಹಿತ ಪ್ರೌಢ ಶಾಲೆಗಳು ಭಾಗವಹಿಸಿವೆ.
ಮೊದಲಿಗೆ ಬಾಲಕಿಯರ ಗುಂಪು ಆಟಗಳ ಫಲಿತಾಂಶ ಹೀಗಿದೆ. ಬಾಲಕಿಯರ ಖೋ ಖೋ ಆಟದಲ್ಲಿ ಸರ್ಕಾರಿ ಪ್ರೌಢ ಶಾಲೆ ರಾಜೂರ-ಆಡೂರ ಪ್ರಥಮ ಸ್ಥಾನ ಪಡೆದಿದ್ದು, ದ್ವೀತಿಯ ಸ್ಥಾನವನ್ನು ಸರ್ಕಾರಿ ಪ್ರೌಢ ಶಾಲೆ ಮಸಬಹಂಚಿನಾಳ ಪಡೆದುಕೊಂಡಿದೆ. ಕಬ್ಬಡ್ಡಿ ಆಟದಲ್ಲಿ ಪ್ರಥಮ ಸರ್ಕಾರಿ ಪ್ರೌಢ ಶಾಲೆ ಬಳಗೇರಿ ಹಾಗೂ ಸರ್ಕಾರಿ ಪ್ರೌಢ ಶಾಲೆ ಮಸಬಹಂಚಿನಾಳ ದ್ವೀತಿಯ ಸ್ಥಾನದಲ್ಲಿದೆ. ವಾಲಿಬಾಲ ಆಟದಲ್ಲಿ ಪ್ರಥಮ ಸರ್ಕಾರಿ ಪ್ರೌಢ ಶಾಲೆ ರಾಜೂರ-ಆಡೂರ, ಎಸ್.ಎಫ್.ಎಸ್. ಶಾಲೆ ಕುಕನೂರ ದ್ವಿತೀಯ ಸ್ಥಾನದಲ್ಲಿ ತೃಪ್ತಿ ಪಟ್ಟಿದೆ. ಥ್ರೋ ಬಾಲ್ ಗೇಮ್‌ನಲ್ಲಿ ಪ್ರಥಮ ಶ್ರೀ ಗವಿಸಿದ್ಧೇಶ್ವರ ಪ್ರೌಢ ಶಾಲೆ ಕುಕನೂರ ಪಡೆದರೆ, ದ್ವಿತೀಯ ಸ್ಥಾನವನ್ನು ಸರ್ಕಾರಿ ಪ್ರೌಢ ಶಾಲೆ ಬಳಗೇರಿ ತೃಪ್ತಿ ಪಡೆದುಕೊಂಡಿದೆ.
ಈ ಕ್ರೀಡಾ ಕೂಟದಲ್ಲಿ ಬಾಲಕಯರ ಗುಂಪು ಆಟಗಳು ನಡೆದಿದ್ದು, ಖೋ ಖೋ ಆಟದಲ್ಲಿ ಸರ್ಕಾರಿ ಪ್ರೌಢ ಶಾಲೆ ಕುಕನೂರ ಪ್ರಥಮ ಸ್ಥಾನ ಪಡೆದಿದೆ. ದ್ವಿತೀಯ ಸ್ಥಾನದಲ್ಲಿ ಸರ್ಕಾರಿ ಪ್ರೌಢ ಶಾಲೆ ಮಸಬಹಂಚಿನಾಳ. ಕಬ್ಬಡ್ಡಿ ಆಟದಲ್ಲಿ ಎಸ್.ಎಫ್.ಎಸ್.ಕುಕನೂರ ಪ್ರಥಮ ಸ್ಥಾನದಲ್ಲಿದ್ದರೆ, ದ್ವಿತೀಯ ಸ್ಥಾನದಲ್ಲಿ ಸರ್ಕಾರಿ ಪ್ರೌಢ ಶಾಲೆ ಮಸಬಹಂಚಿನಾಳ ಹಾಗೂ ವಾಲಿಬಾಲ್‌ನಲ್ಲಿ ಪ್ರಥಮ ಸರ್ಕಾರಿ ಪ್ರೌಢ ಶಾಲೆ ರಾಜೂರ-ಆಡೂರ, ಎಸ್.ಎಫ್.ಎಸ್. ಶಾಲೆ ಕುಕನೂರ ದ್ವಿತೀಯ ಸ್ಥಾನದಲ್ಲಿದೆ. ಥ್ರೋ ಬಾಲ್ ಆಟದಲ್ಲಿ ಶ್ರೀ ಗವಿಸಿದ್ಧೇಶ್ವರ ಪ್ರೌಢಶಾಲೆ ಕುಕನೂರ ಪ್ರಥಮ ಸ್ಥಾನ ಪಡೆದರೆ, ಸರ್ಕಾರಿ ಪ್ರೌಢ ಶಾಲೆ ರಾಜೂರ-ಆಡೂರ ದ್ವಿತೀಯ ಸ್ಥಾನವನ್ನು ಅಲಂಕರಿಸಿದೆ.
ಈ ಸಂದರ್ಭದಲ್ಲಿ ಕುಕನೂರು ಪೊಲೀಸ್ ಠಾಣೆಯ ಪಿಎಸ್‌ಐ ಟಿ. ಗುರುರಾಜ್ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಣೆ ಮಾಡಿದರು. ಗವಿಸಿದ್ಧೇಶ್ವರ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ಎಸ್.ಜೆ. ಪಾಟೀಲ್ ಅವರು ಇದ್ದರು.