“ಚಂದ್ರಯಾನ-3” ಆರಂಭದ ಬಳಿಕ ಬಹುಬಾಷ ನಟ ಪ್ರಕಾಶ್ ರಾಜ್ ವಿವಾದಾತ್ಮಕ ಟ್ವಿಟ್ ಮಾಡಿದ್ದರು. ಅದು ಭಾರೀ ವೈರಲ್ ಆಗಿತ್ತು. ಅನೇಕರು ಇವರ ಟ್ವೀಟ್ ನೋಡಿ ತರಾಟೆ ತಗೆದುಕೊಂಡಿದ್ದರು. ಅದರಲ್ಲಿ ಮಲಯಾಳಿ ಚಾಯ್ ವಾಲಾ ಪೋಟೋ ಶೇರ್ ಮಾಡಿದ್ದರು. ಇದೀಗ ಚಂದ್ರಯಾನ ಯಶಸ್ವಿ ಬಳಿಕ, ಆತ ಎಲ್ಲೋದ ಎಂಬುದಾಗಿ ಅನೇಕರು ನಟ ಪ್ರಕಾಶ್ ರಾಜ್‌ಗೆ ಪ್ರಶ್ನಿಸಿದ್ದರು. ಈ ಮೂಲಕ ಅವರ ಪೋಸ್ಟ್ ಟ್ರೋಲ್ ಆಗಿತ್ತು. ಇದಕ್ಕೆ ಖಡಕ್ ಉತ್ತರವನ್ನು ಪ್ರಕಾಶ್ ರಾಜ್ ಇದೀಗ ನೀಡಿದ್ದಾರೆ.
ಈ ಕುರಿತು ಮತ್ತೊಂದು ಟ್ವಿಟ್ ಮಾಡಿರುವಂತ ನಟ ಪ್ರಕಾಶ್ ರಾಜ್, “ಮಲಯಾಳಿ ಚಾಯ್‌ವಾಲಾ ಎಲ್ಲಿ ಎಂದು ಇನ್ನೂ ಬಡಬಡಿಸುತ್ತಿರುವ… ಹಾಸ್ಯ ಅರ್ಥವಾಗದ ಹಾಸ್ಯಾಸ್ಪದರೆ.. ಅವನು ಬುದ್ದಿವಂತ… ಆತನೀಗ ಮಂಗಳ .. ಶುಕ್ರ ಗ್ರಹಗಳಲ್ಲಿ ಅಂಗಡಿಯಿಟ್ಟಿದ್ದಾನೆ .. ಸಾಧ್ಯವಾದರೆ ಹೋಗಿ #justasking ಎಂದು ಬರೆದುಕೊಂಡಿದ್ದಾರೆ.