ಕುಕನೂರು : “ಕ್ರೀಡೆಯಲ್ಲಿ ತೊಡಗುವುದರಿಂದ ದೇಹ ಸದೃಡವಾಗಬಲ್ಲದು. ಹಾಗಾಗಿ ವಿದ್ಯಾರ್ಥಿಗಳು ಪ್ರತಿ ನಿತ್ಯ ಒಂದು ಗಂಟೆಯಾದರು ಕ್ರೀಡಾ ಚಟುವಟುಕೆಯಲ್ಲಿ ತೊಡಗಿಸಿಕೊಳ್ಳಬೇಕು” ಎಂದು ರೋಟರಿ ಕ್ಲಬ್ ಕೊಪ್ಪಳ ಅಧ್ಯಕ್ಷ ಚಿನ್ನಪ್ಪ ವಾಲ್ಮೀಕಿ ಹೇಳಿದರು.
ತಾಲೂಕಿನ ಶಿರೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾಯಲ್ಲಿ ಇಂದು (ಆಗಸ್ಟ್ 25) ಮಂಗಳೂರು-ಯಡಿಯಾಪೂರ ವಲಯ ಮಟ್ಟದ ಕ್ರೀಡಾಕೂಟ ನಡೆಯಿತು. ಈ ಕ್ರೀಡಾ ಕೂಟದ “ಕ್ರೀಡಾ ಜ್ಯೋತಿ ಬೆಳಗಿಸಿ” ಬಳಿಕ ಮಾತನಾಡಿದ ಅವರು, “ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಸಾದಕ ಕ್ರೀಡಾಪಟುಲಾಗಬಹುದು” ಎಂದು ತಿಳಿಸಿದರು.
“ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಸಹಕಾರಿಯಾಗಿದ್ದು, ಪ್ರತಿಯೊಬ್ಬರು ಭಾಗವಹಿಸಿ ಕ್ರೀಡಾ ಸ್ಫೂರ್ತಿ ಮೆರೆಯಬೇಕು ಎಂದು ಕ್ರೀಡಾ ಕೂಟದ ಉದ್ಘಾಟನೆ ನೆರವೇರಸಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಮಾರುತೇಶ ತಳವಾರ ಮಾತನಾಡಿದರು.
ಕ್ರೀಡಾ ಧ್ವಜಾರೋಹಣ ಮಾಡಿದ ವಿರುಪಾಕ್ಷಪ್ಪ ತಳಕಲ್ ಮಾಡಿದರು, “ಸೋಲು ಹಾಗೂ ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಿದಾಗ ಮಾತ್ರ ಯಶಸ್ವಿ ಕ್ರೀಡಾಪಟುವಾಗಲು ಸಾಧ್ಯ ಎಂದು ಕ್ರೀಡಾಪಟುಗಳಿಗೆ ಸ್ಫೂರ್ತಿಯ ನುಡಿಗಳನ್ನು ಹೇಳಿದರು.
ಈ ಸಂಧರ್ಭದಲ್ಲಿ ಲಿಂಗನಗೌಡ ಅಯ್ಯನಗೌಡ ಹಾಲಕೇರಿ ಶಾಲಾ ಮುಖ್ಯೋಪಾಧ್ಯಯರು, ವಿರುಪಾಕ್ಷಪ್ಪ ತಳಕಲ್ ಅಧ್ಯಕ್ಷರು ಗ್ರಾ.ಪಂ. ಶಿರೂರು, ಶರಣಪ್ಪ ವೀರಾಪೂರ್, ಉಮೇಶ್ ಕಂಬಳಿ,ನಾಗಭೂಷಣ್, ಪ್ರಾಶಂತ್ ಕಂದಗಲ್, ವಿರೇಂದ್ರ ಪಿ. ಮಾದಿನೂರು ಗ್ರಾ.ಪಂ.ಸದಸ್ಯರು, ಮಲ್ಲಪ್ಪ ಭೀಮಪ್ಪ ಬಂಗಾರಿ ಗ್ರಾ.ಪಂ.ಸದಸ್ಯರು, ಈರಪ್ಪ ನಡುವಿನಮನಿ ಗ್ರಾ.ಪಂ.ಸದಸ್ಯರು, ದೇವಕ್ಕ ವಾಲ್ಮೀಕಿ ಗ್ರಾ.ಪಂ.ಸದಸ್ಯರು, ಮತ್ತು ಸರ್ವಸದಸ್ಯರು, ಹೆಚ್.ಎನ್. ಶಿವರೆಡ್ಡಿ ಮುಖ್ಯೋಪಾಧ್ಯಾಯರು, ಸರ್ಕಾರಿ ಪ್ರೌಢ ಶಾಲೆ ಶಿರೂರು, ವೀರಭಧ್ರಪ್ಪ ಅಂಗಡಿ ತಾಲೂಕು ದೈಹಿಕ, ಶಿಕ್ಷಣಾಧಿಕಾರಿಗಳು ಯಲಬುರ್ಗಾ, ಸುರೇಶ್ ಮಡಿವಾಳರ, ಫೀರ್‌ಸಾಬ್ ದಫೇದಾರ್, ಸುರೇಶ್ ಆರಕೇರಿ, ಈರಪ್ಪ ಕಡಗತ್ತಿ, ಸುರೇಶ್ ಮಾದಿನೂರು, ಟಿ. ನಿರಂಜನ್ ಎಎಸ್‌ಐ ಹಾಗೂ ಕ್ರೀಡಾ ಪಟುಗಳು ಕ್ರೀಡಾಭಿಮಾನಿಗಳು ಇದ್ದರು.