ಕುಕನೂರು : ತಾಲೂಕಿನ ತಳಕಲ್ ಗ್ರಾಮದ ಕೌಶಲ್ಯ ಅಭಿವೃದ್ಧಿ ಕೇಂದ್ರ ಹಾಗೂ ಪಿಜಿ ಸೆಂಟರ್‌ಗೆ ಶಾಸಕ ಬಸವರಾಜ ರಾಯರೆಡ್ಡಿ ಇಂದು ಭೇಟಿ ನೀಡಿದರು.
ಈ ವೇಳೆ ಶಾಸಕ ರಾಯರೆಡ್ಡಿ ಕೌಶಲ್ಯ ಅಭಿವೃದ್ಧಿ ಕೇಂದ್ರ, ಹಾಗೂ ಪಿಜಿ ಸೆಂಟರ್‌ಗೆ ಬೇಕಾಗುವ ಅಗತ್ಯ ಮೂಲಭೂತ ಸೌಕರ್ಯ ಹಾಗೂ ಇದಕ್ಕೆ ತಗಲುವ ಖರ್ಚುವೆಚ್ಚ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಲೀನ್ ಅತೂಲ್, ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿ ಫ್ರೋ. ಬಿ.ಕೆ. ರವಿ, ಕುಕನೂರು ತಾಲೂಕಿನ ತಹಶೀಲ್ದಾರ್ ಹೆಚ್. ಪ್ರಾಣೇಶ್, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಪ್ರಮುಖರಾದ ಯಂಕಣ್ಣ ಯರಾಶಿ, ಶರಣಪ್ಪ ಗಾಂಜಿ, ಡಾ. ದಾನರೆಡ್ಡಿ, ಡಾ. ಮಲ್ಲಿಕಾರ್ಜುನ್ ಬಿನ್ನಾಳ್, ಶಿವು ಆದಾಪೂರ್, ತಿಮ್ಮಣ್ಣ ಚೌಡಿ, ಸಂಗಮೇಶ್ ಗುತ್ತಿ ಹಾಗೂ ಇತರರು.
ವರದಿ : ಪ್ರಜಾವೀಕ್ಷಣೆ ಟೀಂ