ಚಂದ್ರಯಾನ-3 ಯಶಸ್ಸಿಗೊಂಡ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಇಡೀ ದೇಶವೇ ಅವರ ಸಾದನೆಯನ್ನು ಕೊಂಡಾಡಿದೆ. ಇದೀಗ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ಮಾಧ್ಯಮದೊಂದಿಗೆ ಈ ಕುರಿತು ಪ್ರತಿಕ್ರಿಯಿಸಿದ್ದು, “ಭಾರತವು ಈಗ ಚಂದ್ರ, ಮಂಗಳ ಮತ್ತು ಶುಕ್ರಕ್ಕೆ ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದೆ.
ಆದರೆ, ನಮಗೆ ಇನ್ನಷ್ಟು ಆರ್ಥಿಕ ಬೆಂಬಲ ಬೇಕಾಗಿದೆ. ಇದರ ಜೊತೆಗೆ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕಾಗಿದೆ. ಭಾರತದ ಬಾಹ್ಯಾಕಾಶ ಕ್ಷೇತ್ರವು ಅಭಿವೃದ್ಧಿ ಹೊಂದಬೇಕು ಮತ್ತು ಇದರಿಂದ ಇಡೀ ರಾಷ್ಟ್ರವು ಅಭಿವೃದ್ಧಿ ಹೊಂದಲಿದೆ ಹಾಗೂ ಇಡೀಈ ಜಗತ್ತಿನಲ್ಲಿ ಯಾರು ಮಾಡಿರದ ಕಾರ್ಯ ನಮ್ಮಿಂದಾಗಿದೆ ಹಾಗೂ ಮುಂದೆ ಆಗಲಿದೆ. ಇದು ನಮ್ಮ ಧ್ಯೇಯವಾಗಿದೆ. ಪ್ರಧಾನಿ ಮೋದಿಯವರು ನಮಗೆ ನೀಡಿದ ಮುಂದಿನ ಕಾರ್ಯಯೋಜನೆಗಳು ಈಡೇರಿಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.