CHANDRAYAAN-3 UPDATE : ಚಂದ್ರನ ಮೇಲ್ಮೈಯಲ್ಲಿನ ತಾಪಮಾನದ ಮಾಹಿತಿ ನೀಡಿದ ಇಸ್ರೋ..!!

You are currently viewing CHANDRAYAAN-3 UPDATE : ಚಂದ್ರನ ಮೇಲ್ಮೈಯಲ್ಲಿನ ತಾಪಮಾನದ ಮಾಹಿತಿ ನೀಡಿದ ಇಸ್ರೋ..!!

ಬೆಂಗಳೂರು : ಚಂದ್ರಯಾನ-3ರ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಸೇಫ್‌ ಲ್ಯಾಂಡಿಂಗ್‌ ಆಗಿದ್ದು, ಲ್ಯಾಂಡರ್‌ನಿಂದ ಹೊರಬಂದ ರೋವರ್‌ ತನ್ನ ಕಾರ್ಯವನ್ನೂ ಈಗಾಗಲೇ ಆರಂಭಿಸಿದೆ.

ಇದೀಗ ಮೊದಲ ಬಾರಿಗೆ ಚಂದ್ರನ ಮೇಲ್ಮೈನಲ್ಲಿನ ಮಣ್ಣಿನ ತಾಪಮಾನವನ್ನು ರೋವರ್‌ ಅವಲೋಕವನ್ನು ಮಾಡಲಾಗಿದ್ದು, ಇಸ್ರೊ ಈ ಬಗ್ಗೆ ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.10 ಸೆಂ.ಮೀ ಆಳದವರೆಗಿನ ತಾಪಮಾನದ ಮಾಹಿತಿ ಹಾಗೂ ತಾಪಮಾನದಲ್ಲಿ ವ್ಯತ್ಯಾಸ ಕಂಡುಬರುವ ಬಗ್ಗೆ ಗ್ರಾಫ್‌ವೊಂದನ್ನು ಹಂಚಿಕೊಂಡಿದೆ.


CHANDRAYAAN-3 UPDATE : ಚಂದ್ರನ ಮೇಲ್ಮೈಯಲ್ಲಿನ ತಾಪಮಾನದ ಮಾಹಿತಿ ನೀಡಿದ ಇಸ್ರೋ..!!
‘ಇಸ್ರೋ ಇಲ್ಲಿ ಹಂಚಿಕೊಂಡಿರುವ ಗ್ರಾಫ್‌ ಚಂದ್ರನ ಮೇಲ್ಮೈನಲ್ಲಿ ತಾಪಮಾನ ಬದಲಾವಣೆಯಾಗುವ ಬಗ್ಗೆ ತಿಳಿಸಲಾಗಿದೆ. ಇದರ ಬಗೆಗಿನ ಸಂಪೂರ್ಣ ಅಧ್ಯಯನವನ್ನು ನಡೆಸಲಾಗುತ್ತಿದೆ’ ಎಂದು ಇಸ್ರೊ ಈ ಬಗ್ಗೆ ಹೇಳಿದೆ. ಅಹಮದಾಬಾದ್‌ನ ಭೌತಿಕ ಅನುಸಂಧಾನ ಪ್ರಯೋಗಾಲಯದ (PRL) ಸಹಯೋಗದೊಂದಿಗೆ ಬಾಹ್ಯಾಕಾಶ ಭೌತಶಾಸ್ತ್ರ ಪ್ರಯೋಗಾಲಯ (SPL), ವಿಕ್ರಮ್‌ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ (VSSC)ನಲ್ಲಿ ಅಧ್ಯಯನವನ್ನು ನಡೆಸಲಾಗುತ್ತಿದೆ ಎಂದು ಇಸ್ರೊ ಮಾಹಿತಿ ಹಂಚಿಕೊಂಡಿದೆ.

Leave a Reply

error: Content is protected !!