ಹಾವೇರಿ : ಜಿಲ್ಲೆಯ ಆಲದಕಟ್ಟೆಯಲ್ಲಿ ಪಟಾಕಿಗಳನ್ನು ಸಂಗ್ರಹಿಸಲಾಗಿದ್ದ ಗೂಧಾಮಿನಲ್ಲಿ ಸ್ಫೋಟಗೊಂಡಿದೆ. ಮುಂಬರುವ ಗಣೇಶ ಹಬ್ಬದಪ್ರಯುಕ್ತ ಬರೋಬ್ಬರಿ 65 ಕ್ವಿಂಟಾಲ್ ಪಟಾಕಿಯನ್ನು ಸಂಗ್ರಹಿಸಲಾಗಿತ್ತು. ಇಂತಹ ಪಟಾಕಿಗಳಿಗೆ ಬೆಂಕಿ ತಗುಲಿದ ಪರಿಣಾಮ ಕ್ಷಣ ಮಾತ್ರದಲ್ಲಿ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದು ಬಂದಿದೆ.
ಆದರೆ, ಪಟಾಕಿ ಗೋಡೌನ್ ಗೆ ಬೆಂಕಿ ಬಿದ್ದ ಪರಿಣಾಮ, ಕ್ಷಣ ಮಾತ್ರದಲ್ಲಿ ಪಟಾಕಿಗಳು ಸುಟ್ಟು ಭಸ್ಮವಾಗಿದೆ. ಲಕ್ಷ ಗಟ್ಟಲೆ ರೂಪಾಯಿ ಪಟಾಕಿ ನಾಶವಾಗಿದೆ ಎಂದು ತಿಳಿದು ಬಂದಿದೆ. ಕೇವಲ ಅರ್ಧ ಗಂಟೆಯಲ್ಲೇ ಆಕಾಶದೆತ್ತರಕ್ಕೆ ಸಿಡಿದು ಮೂರು ಕ್ವಿಂಟಾಲ್ ಪಟಾಕಿಗಳು ಸಿಡಿದು ಹೋಗಿರೋದಾಗಿ ತಿಳಿದು ಬಂದಿದೆ.
ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು, ಸತತ ಅರ್ಧಗಂಟೆಯ ಪ್ರಯತ್ನದಿಂದಾಗಿ ಪಟಾಕಿ ಗೋಡೌನ್ ನಲ್ಲಿ ಕಾಣಿಸಿಕೊಂಡಿದ್ದಂತ ಬೆಂಕಿಯನ್ನು ನಿಯಂತ್ರಿಸಿದ್ದಾರೆ. ಈ ಘಟನೆಗೆ ಕಾರಣ ತಿಳಿದು ಬಂದಿಲ್ಲ.ಬಗ್ಗೆ ತನಿಖೆಯ ನಂತ್ರವಷ್ಟೇ ಗೊತ್ತಾಗಲಿದೆ.