ಹಾವೇರಿ : ಜಿಲ್ಲೆಯ ಆಲದಕಟ್ಟೆಯಲ್ಲಿ ಪಟಾಕಿಗಳನ್ನು ಸಂಗ್ರಹಿಸಲಾಗಿದ್ದ ಉಗ್ರಾಣ ಸ್ಫೋಟಗೊಂಡಿದೆ. ಈ ಪರಿಣಾಮ ಸ್ಥಳದಲ್ಲಿ ಮೂರು ಶವಗಳು ಪತ್ತೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಹಾವೇರಿ ಜಿಲ್ಲಾ ಪೊಲೀಸ್ ಅಧಿಕ್ಷಕ ಡಾ. ಶಿವಕುಮಾರ್ ಮಾಹಿತಿ ನೀಡಿದ್ದು, ‘ಮುಂಬರುವ ಗಣೇಶ ಹಬ್ಬದಪ್ರಯುಕ್ತ ಬರೋಬ್ಬರಿ 65 ಕ್ವಿಂಟಾಲ್ ಪಟಾಕಿಯನ್ನು ಸಂಗ್ರಹಿಸಲಾಗಿತ್ತು. ಪಟಾಕಿಗಳಿಗೆ ಬೆಂಕಿ ತಗುಲಿದ ಪರಿಣಾಮ ಆಹುತಿಯಾಗಿದೆ ಹಾಗೂ ಮೂವರ ಶವಗಳು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಆದರೆ, ಪಟಾಕಿ ಗೋಡೌನ್ ಗೆ ಬೆಂಕಿ ಬಿದ್ದ ಪರಿಣಾಮ, ಕ್ಷಣ ಮಾತ್ರದಲ್ಲಿ ಪಟಾಕಿಗಳು ಸುಟ್ಟು ಭಸ್ಮವಾಗಿದೆ. ಲಕ್ಷ ಗಟ್ಟಲೆ ರೂಪಾಯಿ ಪಟಾಕಿ ನಾಶವಾಗಿದೆ ಎಂದು ತಿಳಿದು ಬಂದಿದೆ. ಕೇವಲ ಅರ್ಧ ಗಂಟೆಯಲ್ಲೇ ಆಕಾಶದೆತ್ತರಕ್ಕೆ ಸಿಡಿದು ಮೂರು ಕ್ವಿಂಟಾಲ್ ಪಟಾಕಿಗಳು ಸಿಡಿದು ಹೋಗಿರೋದಾಗಿ ತಿಳಿದು ಬಂದಿದೆ.