ಟೀಂ ಇಂಡಿಯಾ ಹಾಗೂ ಪಾಕಿಸ್ತಾನ್ ಏಷ್ಯ ಕಪ್ ಟೂರ್ನಿಯ ಮೊದಲ ಮುಖಾಮುಖಿಯಲ್ಲಿನ ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 48.5 ಓವರ್ಗಳಲ್ಲಿ 266 ರನ್ಗಳಿಸಿ ಆಲೌಟ್ ಆಗಿದೆ. ಇದೀಗ ಪಾಕಿಸ್ತಾನ ಗೆಲುವಿಗೆ 267 ರನ್ಗಳಿಸಬೇಕಾಗಿದೆ.
ಈ ಪಂದ್ಯದ ಆರಂಭದಲ್ಲಿ ಪಾಕಿಸ್ತಾನಿ ವೇಗಿಗಳ ವಿರುದ್ಧ ಭಾರತದ ಅಗ್ರ ಕ್ರಮಾಂಕ ಕುಸಿದ ಬಳಿಕ ಭಾರತ ಎಚ್ಚರಿಕೆಯಿಂದ ಹೆಜ್ಜೆ ಇಟ್ಟು ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯಾ ಟೀಂ ಆಶರೆಯಾದರು. ಭಾರತದ ಬ್ಯಾಟರ್‌ಗಳ ಸ್ಕೋರ್ ಹೀಗಿದೆ. ರೋಹಿತ್ ಶರ್ಮಾ 11 (22), ಗಿಲ್ 10 (32), ವಿರಾಟ್ ಕೊಹ್ಲಿ 4 (7), ಶ್ರೇಯಸ್ ಐಯ್ಯರ್ 14 (9), ಇಶಾನ್ ಕಿಶನ್ 82 (81), ಹಾರ್ದಿಕ್ ಪಾಂಡ್ಯಾ 87 (90), ರವೀಂದ್ರ ಜಡೇಜಾ 14 (22), ರ್ಶಾದೂಲ್ ಠಾಕೂರ್ 3 (3), ಜಸ್‌ಪ್ರಿತ್ ಬೂಮ್ರಾ 16 (14), ಮಹಮ್ಮದ್ ಸಿರಾಜ್ 1 (1).
ಪಾಕಿಸ್ತಾನ್ ಬೌಲರ್ಸ್:- ಶಾಹೀನ್ ಅಫ್ರಿದಿ 4 (10), ನಸೀಮ್ ಶಾ 3 (8.5), ಹ್ಯಾರಿಸ್ ರೌಫ್ 3 (9).