Rain alert : ರಾಜ್ಯದಲ್ಲಿ ಮತ್ತೆ ಮಳೆ, ಕೊಪ್ಪಳದಲ್ಲೂ ವರುಣನ ಆಗಮನ..!!

You are currently viewing Rain alert : ರಾಜ್ಯದಲ್ಲಿ  ಮತ್ತೆ ಮಳೆ, ಕೊಪ್ಪಳದಲ್ಲೂ ವರುಣನ ಆಗಮನ..!!

ಬೆಂಗಳೂರು : ರಾಜ್ಯದಲ್ಲಿ ಮರೆಯಾಗಿದ್ದ, ಮಳೆರಾಯ ಇದೀಗ ಮತ್ತೆ ಮಳೆ ಕಾಣಿಸಿಕೊಳ್ಳುತ್ತಿದ್ದು, ಈ ಮದ್ಯ ಹವಾಮಾನ ಇಲಾಖೆಯೂ ರಾಜ್ಯದ 9 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ.

ಇಂದಿನಿಂದ (ಸೆ.3 ಮತ್ತು ಸೆ.4ರಂದು) ಎರಡು ದಿನ ರಾಜ್ಯದ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ತಿಳಿಸಿದ್ದು, ಸೆ.3ರಂದು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಕೊಪ್ಪಳ, ಯಾದಗಿರಿ ಜಿಲ್ಲೆಗಳಿಗೆ ಹಾಗೂ ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್‌ ನೀಡಲಾಗಿದೆ. ಸೆ.4ರಂದು ಬೀದರ್, ಕಲಬುರಗಿ ಜಿಲ್ಲೆಗಳಿಲ್ಲಿ ಮಳೆ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದೆ.

Leave a Reply

error: Content is protected !!