BIG NEWS : ಇಂದು ನಡೆದ “TET” ಪರೀಕ್ಷೆಗೆ ಎಷ್ಟು ಮಂದಿ ಅಭ್ಯರ್ಥಿಗಳು ಹಾಜರಾಗಿದ್ದರು ಗೊತ್ತಾ?, ಇಲ್ಲಿದೆ ಮಾಹಿತಿ..!!

You are currently viewing BIG NEWS : ಇಂದು ನಡೆದ  “TET” ಪರೀಕ್ಷೆಗೆ ಎಷ್ಟು ಮಂದಿ ಅಭ್ಯರ್ಥಿಗಳು ಹಾಜರಾಗಿದ್ದರು ಗೊತ್ತಾ?, ಇಲ್ಲಿದೆ ಮಾಹಿತಿ..!!

ಬೆಂಗಳೂರು : ರಾಜ್ಯಾಧ್ಯಂತ ಇಂದು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಯಿತು. ಈ ಪರೀಕ್ಷೆಯನ್ನು ಎಷ್ಟು ಮಂದಿ ನೋಂದಾಯಿಸಿಕೊಂಡಿದ್ದರು? ಎಷ್ಟು ಅಭ್ಯರ್ಥಿಗಳು ಹಾಜರಾಗಿದ್ದರು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ…

ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯಿಂದ ಮಾಹಿತಿ ಬಿಡುಗಡೆಯಾಗಿದ್ದು, ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು ಇಂದು ರಾಜ್ಯದ 35 ಸ್ಥಳಗಳಲ್ಲಿ ಯಶಸ್ವಿಯಾಗಿ ನಡೆದಿದೆ ಎಂದು ತಿಳಿಸಿದೆ.

1 ರಿಂದ 5ನೇ ತರಗತಿಗಳಿಗೆ ಬೋಧಿಸುವ ಶಿಕ್ಷಕರಿಗಾಗಿ ನಡೆದ ಪತ್ರಿಕೆ-1ರ ಟಿಇಟಿ ಪರೀಕ್ಷೆಯನ್ನು ಒಟ್ಟು 544 ಕೇಂದ್ರಗಳಲ್ಲಿ ನಿಗದಿ ಪಡಿಸಲಾಗಿತ್ತು. ಈ ಪರೀಕ್ಷೆಗೆ 1,43,719 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಇವರಲ್ಲಿ ಇಂದಿನ ಪರೀಕ್ಷೆಗೆ 1,27,130 ಮಂದಿ ಹಾಜರಾಗಿದ್ದಾರೆ. ಅಂದರೇ ಶೇ.88.45ರಷ್ಟು ಮಂದಿ ಹಾಜರಾಗಿದ್ದಾರೆ ಎಂದು
ಇಲಾಖೆ ತಿಳಿಸಿದೆ.

ಇನ್ನೂ 6 ರಿಂದ 8ನೇ ತರಗತಿಗಳಿಗೆ ಬೋಧಿಸುವ ಶಿಕ್ಷಕರಿಗಾಗಿ ನಡೆದ ಪತ್ರಿಕೆ-2ರ ಪರೀಕ್ಷೆಯನ್ನು 711 ಕೇಂದ್ರಗಳಲ್ಲಿ ನಡೆಸಲಾಯಿತು. ಈ ಪರೀಕ್ಷೆಗೆ ಒಟ್ಟು 1,90,015 ಮಂದಿ ನೋಂದಣಿ ಮಾಡುಕೊಂಡಿದ್ದರು. ಇವರಲ್ಲಿ ಪರೀಕ್ಷೆಗೆ ಹಾಜರಾದವರು 1,74,834 ಮಂದಿ. ಶೇ.92.01ರಷ್ಟು ಅಭ್ಯರ್ಥಿಗಳು ಹಾಜರಾಗಿದ್ದಾರೆ ಎಂದು ಹೇಳಿದೆ. ಒಟ್ಟಾರೆಯಾಗಿ ಪತ್ರಿಕೆ-1ಕ್ಕೆ 16,589 ಮಂದಿ, ಪತ್ರಿಕೆ-2ರ ಪರೀಕ್ಷೆಗೆ 15,181 ಮಂದಿ ಗೈರು ಹಾಜರಾಗಿದ್ದಾರೆ ಎಂದು ತಿಳಿಸಿದೆ.

Leave a Reply

error: Content is protected !!