ಬೆಂಗಳೂರು : ರಾಜ್ಯದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ವ್ಯಾಪ್ತಿಯ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಇಂದಿನಿಂದ (ಸೆಪ್ಟೆಂಬರ್.4-ಸೋಮವಾರ) 2023-24ನೇ ಸಾಲಿನ ಶೈಕ್ಷಣಿಕ ವರ್ಷಾರಂಭವಾಗಲಿದೆ ಎಂದು ತಿಳಿದು ಬಂದಿದೆ.
ಈ ಕುರಿತು VTU ಮಾಹಿತಿ ನೀಡಿದ್ದು, ಇಂದಿನಿಂದ ಅಂದರೆ ಸೆಪ್ಟೆಂಬರ್.4 ರಿಂದ 14ರವರೆಗೆ ಪುನಶ್ಚೇತನ ತರಗತಿಗಳು ನಡೆಯಲಿವೆ. ಸೆಪ್ಟೆಂಬರ್ 15ರಿಂದ ಅಧಿಕೃತವಾಗಿ ಮೊದಲ ಸೆಮಿಸ್ಟರ್ ತರಗತಿಗಳು ಆರಂಭವಾಗುತ್ತದೆ ಎಂದು ತಿಳಿಸಿದೆ.
BIG BREAKING : ರಾಜ್ಯಾದ್ಯಂತ 5 ದಿನಗಳು ಭಾರೀ ಮಳೆ..!!

ಜನವರಿ.6, 2024ಕ್ಕೆ ಮೊದಲ ಸೆಮಿಸ್ಟರ್ ಕೊನೆಯ ದಿನವಾಗಿದೆ. ಜನವರಿ 8ರಿಂದ 19ರವರೆಗೆ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿದ್ದು, ಏಪ್ರಿಲ್ 22, 2024ರಿಂದ ಫೆ.17, 2024ರವರೆಗೆ ಲಿಖಿತ ಪರೀಕ್ಷೆಗಳು ನಡೆಯಲಿವೆ. ಫೆಬ್ರವರಿ 19ರಿಂದ ಎರಡನೇ ಸೆಮಿಸ್ಟರ್ ಪರೀಕ್ಷೆ ಆರಂಭವಾಗಲಿದೆ ಎಂದು VTU ತಿಳಿಸಿದೆ.
BIG UPDATE : ಸೂರ್ಯಯಾನ-1ರ ಕುರಿತು ಹೊಸದೊಂದು ಮಾಹಿತಿ ಹಂಚಿಕೊಂಡ ಇಸ್ರೋ..!!