ಬೆಂಗಳೂರು : ರಾಜ್ಯದಲ್ಲಿನ ಗುತ್ತಿಗೆ ಕಾಮಗಾರಿ ಬಾಕಿ ಬಿಲ್ ತಡೆ ಹಿಡಿದಿದ್ದ ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರರು ಸೆಟೆದು ನಿಂತದ್ದರು. ಇದೀಗ ರಾಜ್ಯ ಗುತ್ತಿದಾರರನ್ನು ಸಮಾಧಾನ ಮಾಡೋದಕ್ಕೆ ರಾಜ್ಯ ಸರ್ಕಾರ 80:20ರ ಅನುಪಾತದಲ್ಲಿ ಬಾಕಿ ಬಿಲ್ ಪಾವತಿಯ ಸೂತ್ರವನ್ನು ಅನುಸರಿಸುವುದಕ್ಕೆ ಮುಂದಾಗಿದೆ ಎನ್ನಲಾಗಿದೆ. ಈ ಹಿಂದಿನ ಸರ್ಕಾರ ಬಾಕಿ ತಡೆ ಹಾಕಿದ್ದ ಹೊಸ ಸರ್ಕಾರದ ವಿರುದ್ಧ ಸಿಟ್ಟುಗೊಂಡಿದ್ದಂತ ಗುತ್ತಿಗೆದರರನ್ನು ಸಮಾಧನಾಪಡಿಸುವ ಕಾರ್ಯವನ್ನು ಕಾಂಗ್ರೆಸ್ ಸರ್ಕಾರ ಆರಂಭಿಸಿದೆ. ಅದಕ್ಕಾಗಿ ಗುತ್ತಿಗೆದಾರರ ಹಣ ಬಿಡುಗಡೆ ಮಾಡಲು ಎರಡು ಪರಿಹಾರ ಸೂತ್ರವನ್ನು ಕಂಡುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
IMPT NEWS : ಇಂದಿನಿಂದ ಶೈಕ್ಷಣಿಕ ವರ್ಷಾರಂಭ..!!

BIG BREAKING : ರಾಜ್ಯಾದ್ಯಂತ 5 ದಿನಗಳು ಭಾರೀ ಮಳೆ..!!
ಎಒಸಿ ಬಿಡುಗಡೆಯಾದ ಪ್ರಕರಣಗಳಲ್ಲಿ ಶೇ.75ರಷ್ಟು ಹಣ ಬಿಡುಗಡೆ ಮಾಡುವುದು. ಉಳಿದ ಶೇ.25ರಷಅಟು ಬಳಿಕ ಬಿಡುಗಡೆ ಮಾಡುವುದು. ಲಭ್ಯ ಅನುದಾನದಲ್ಲಿ ಶೇ.80 ಜೇಷ್ಠತೆ ಆಧಾರದಲ್ಲಿ ಶೇ.20ರಷ್ಟು ಸಚಿವರ ವಿವೇಚನಾ ಕೋಟಾದಡಿಯಲ್ಲಿ ಬಿಡುಗಡೆ ಮಾಡಲು ಪಾವತಿ ಸೂತ್ರಕ್ಕೆ ಬಂದಿದೆ ಎನ್ನಲಾಗುತ್ತಿದೆ.