LOCAL EXPRESS : ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಭೇಟಿ..!!

You are currently viewing LOCAL EXPRESS : ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಭೇಟಿ..!!

ಕೊಪ್ಪಳ : ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಅವರು (ಸೆಪ್ಟೆಂಬರ್ 04) ಇಂದು ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಭೇಟಿ‌ ನೀಡಿದರು.

ಪೂರ್ವ ನಿಗದಿಯಂತೆ, ಇಂದು ಮಧ್ಯಾಹ್ನ ವೇಳೆಗೆ ಕೊಪ್ಪಳ ನಗರಕ್ಕೆ ಆಗಮಿಸಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ, ಶಾಸಕ ರಾಘವೇಂದ್ರ ಕೆ. ಹಿಟ್ನಾಳ ಅವರೊಂದಿಗೆ ಗಂಗಾವತಿ ರಸ್ತೆಯಲ್ಲಿನ ಕಿಮ್ಸ್ ಗೆ ಭೇಟಿ ನೀಡಿ ನೂತನ ಕಟ್ಟಡ ಕಾಮಗಾರಿಯ ಸ್ಥಿತಿಗತಿಯನ್ನು ಖುದ್ದು ಪರಿಶೀಲಿಸಿದರು.

GOOD NEWS : ಗುತ್ತಿಗೆದಾರರಿಗೆ ಶುಭ ಸುದ್ದಿ..!!

*ಶೀಘ್ರ ಪೂರ್ಣ:* ಇದೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ, “ಈ ಕಿಮ್ಸ್ ನೂತನ ಕಟ್ಟಡದ ಕಾಮಗಾರಿಯು ಈಗಾಗಲೇ ಶೇ.90ರಷ್ಟು ನಡೆದಿದೆ. ಬಾಕಿ ಉಳಿದ ಕಟ್ಟಡ ಕಾಮಗಾರಿಗೆ ಅಂದಾಜು 47 ಕೋಟಿ ರೂ. ಅನುದಾನದ ಬೇಡಿಕೆ ಇಡಲಾಗಿದೆ ಎನ್ನುವ ಮಾಹಿತಿ ಇದೆ. ಕೊಪ್ಪಳ ಜಿಲ್ಲೆಯಲ್ಲಿ ವಿಶೇಷವಾಗಿ 450 ಹಾಸಿಗೆಯ ಸಾಮರ್ಥ್ಯದಲ್ಲಿ ಈ ವೈದ್ಯಕೀಯ ಸಂಸ್ಥೆಯು ನಿರ್ಮಾಣವಾಗುತ್ತಿದೆ. ಇದಕ್ಕೆ ಬಾಕಿ ಉಳಿದ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಲಾಗುವುದು. ಸಚಿವ ಸಂಪುಟದಲ್ಲಿ ಈ ಬಗ್ಗೆ ಅನುಮೋದನೆ ಪಡೆದುಕೊಂಡ ಬಳಿಕ ಈ ಕಾರ್ಯ ಪ್ರಕ್ರಿಯೆ ನಡೆಸಲಾಗುವುದು. ಈ ನೂತನ ಆಸ್ಪತ್ರೆಯಲ್ಲಿ ಆರ್ಥೋ, ಸರ್ಜರಿ, ರೆಡಿಯಾಲಜಿ ಸೇರಿದಂತೆ ನಾನಾ ವಿಭಾಗಗಳನ್ನು ಹಂತಹಂತವಾಗಿ ಬಲಪಡಿಸಲಾಗುವುದು” ಎಂದು ಅವರು ತಿಳಿಸಿದರು.

ಜಾಹೀರಾತು

IMPT NEWS : ಇಂದಿನಿಂದ ಶೈಕ್ಷಣಿಕ ವರ್ಷಾರಂಭ..!!

ಈ ವೇಳೆ ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ,
ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ವಿಜಯನಾಥ ಇಟಗಿ, ಡಿವೈಎಸ್ಪಿ ಶರಣಬಸಪ್ಪ ಸುಬೇದಾರ, ತಹಸೀಲ್ದಾರ ವಿಠ್ಠಲ್ ಚೌಗಲಾ, ಕಿಮ್ಸ್ ವೈದ್ಯಕೀಯ ಅಧೀಕ್ಷಕರಾದ ವೇಣುಗೋಪಾಲ, ನಗರ ಠಾಣೆ ವೃತ್ತ ನಿರೀಕ್ಷಕರಾದ ಸಂತೋಷ ಹಳ್ಳೂರ ಸೇರಿದಂತೆ ಇನ್ನೀತರರು ಇದ್ದರು.

Leave a Reply

error: Content is protected !!