BIG BREAKING : ಜಿಲ್ಲಾ ಮಟ್ಟದ “ಅತ್ಯುತ್ತಮ ಶಿಕ್ಷಕ ಪ್ರಶಸ್ತಿ”ಗೆ ಭಾಜನರಾದ ಮಹಿಳಾ ಶಿಕ್ಷಕಿಯರು..!!

You are currently viewing BIG BREAKING : ಜಿಲ್ಲಾ ಮಟ್ಟದ “ಅತ್ಯುತ್ತಮ ಶಿಕ್ಷಕ ಪ್ರಶಸ್ತಿ”ಗೆ ಭಾಜನರಾದ ಮಹಿಳಾ ಶಿಕ್ಷಕಿಯರು..!!

ಕುಕನೂರು-ಯಲಬುರ್ಗಾ : 2023-24ನೇ ಸಾಲಿನ ಕೊಪ್ಪಳ ಜಿಲ್ಲಾ ಮಟ್ಟದ “ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ಪ್ರಕಟಗೊಂಡಿದ್ದು, ಈ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಕುಕನೂರು ತಾಲೂಕಿನ ಸರಕಾರಿ ಕಿರಿಯ ಪ್ರಾಥಮೀಕ ಶಾಲೆ ಚನಪನಹಳ್ಳಿ ಶಾಲೆಯ ಕ್ರಿಯಾಶೀಲ ಶಿಕ್ಷಕಿ ಹಾಗೂ ಮುಖ್ಯೋಪಾಧ್ಯಾನಿಯಾದ ಶ್ರೀಮತಿ ಗಿರಿಜಾ ಧರ್ಮಸಾಗರ ಇವರಿಗೆ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಹಾಗೂ ಯಲಬುರ್ಗಾ ತಾಲೂಕಿನ ಕರ್ನಾಟಕ ಪಬ್ಲಿಕ್ ಬಂಡಿ ಶಾಲೆಯ ಕ್ರಿಯಾಶೀಲ ಶಿಕ್ಷಕಿ ಶ್ರೀಮತಿ ಜಯಶ್ರೀ ಕೊತಬಾಳ ಅವರಿಗೆ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಈ ಸಾಲಿನ ಕೊಪ್ಪಳ ಜಿಲ್ಲಾ ಮಟ್ಟದ “ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ಪಡೆದುಕೊಂಡಿದ್ದಾರೆ. ವಿಶೇಷ ಎಂದರೆ ಎರಡು ವಿಭಾಗದಲ್ಲಿ ಮಹಿಳಾ ಶಿಕ್ಷಕಿಯರದ್ದೇ ಮೇಲುಗೈಯಾಗಿದೆ.

BIG BREAKING : ಹಾಲು ಉತ್ಪಾದಕ ರೈತರಿಗೆ 3 ಸಾವಿರ ರೂ. ಪ್ರೋತ್ಸಾಹ ಧನ ಹಾಗೂ ಮೇವಿನ ಬೀಜ ವಿತರಣೆ..!!

ಜಾಹೀರಾತು

ಶ್ರೀಮತಿ ಗಿರಿಜಾ ಧರ್ಮಸಾಗರ ಅವರು ಶಿಕ್ಷಕರಾಗಿ ಸೇವೆ ಪ್ರಾರಂಭಿಸಿದಾಗಿನಿಂದ ಮಕ್ಕಳಿಗೆ ಬೋಧನೆಯ ಮೂಲಕ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜೊತೆಗೆ, ಮಕ್ಕಳಿಗೆ ಹಾಡು, ಕಥೆ, ನೃತ್ಯಗಳನ್ನು ಹೇಳಿಕೊಡುತ್ತಾರೆ. ಸತತವಾಗಿ 25 ವರ್ಷಗಳು ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರೇರೇಪಿಸುವ ಇವರು ಪ್ರತಿ ವರ್ಷ ಪ್ರತಿಭಾ ಕಾರಂಜಿಯಲ್ಲಿ ತಮ್ಮ ಶಾಲೆಯ ಮಕ್ಕಳನ್ನು ತಾಲೂಕಾ ಹಾಗೂ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆಯುವ ಮೂಲಕ ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದು ಕೊಟ್ಟಿದ್ದಾರೆ.

ಶ್ರೀಮತಿ ಗಿರಿಜಾ ಧರ್ಮಸಾಗರ ಅವರು ಶಾಲೆಯ ಹೊರತಾಗಿ ವಿವಿಧ ಸಂಘ ಸಂಸ್ಥೆಗಳು ನಡೆಸುವ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಗಳಾಗಿ, ನಿರ್ಣಾಯಕರಾಗಿ ಭಾಗವಹಿಸಿದ್ದಾರೆ. ಶಾಲೆಯಲ್ಲಿಯೂ ಮಕ್ಕಳಿಗೆ ಬೋಧನೆಯ ಜೊತೆಗೆ ಆಟೋಟ ಸ್ಪರ್ಧೆಗಳನ್ನು ನಡೆಸುವುದು, ವನಸಂಚಾರ, ಪ್ರವಾಸ ಕೈಗೊಂಡಿದ್ದಾರೆ. 25 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಇವರು ಅಪಾರ ಶಿಷ್ಯಂದಿರನ್ನು ಹೊಂದಿ ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳಿಗೆ ಅಚ್ಚು ಮೆಚ್ಚಿನ ಶಿಕ್ಷಕರಾಗಿದ್ದಾರೆ.

SPECIAL DAY : ಸಮಸ್ತ ಗುರುವೃಂದಕ್ಕೆ “ಶಿಕ್ಷಕರ ದಿನಾಚರಣೆ”ಯ ಹಾರ್ದಿಕ ಶುಭಾಶಯಗಳು

“ನನ್ನ ವೃತ್ತಿ ಜೀವನದಲ್ಲಿ ಈ ಕ್ಷಣವೂ ನನಗೆ ತುಂಬಾ ಮಹತ್ವದಾಗಿದ್ದು, ಈ ಪ್ರಶಸ್ತಿಗೆ ಆಯ್ಕೆ ಆಗಿದ್ದಕ್ಕೆ ನನಗೆ ಬಹಳ ಸಂತೋಷವಿದೆ. ನನ್ನ 25 ವರ್ಷ ಶಿಕ್ಷಕ ವೃತ್ತಿಗೆ ಲಭಿಸಿದ ಗೌರವ ಇದಾಗಿದೆ. ಇನ್ನಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡಲು ಪ್ರೇರೇಪಣೆಯಾಗಿದೆ”
:- ಶಿಕ್ಷಕಿ ಗಿರಿಜಾ ಧರ್ಮಸಾಗರ, “ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ” ಪುರಸ್ಕೃತೆ

ಶ್ರೀಮತಿ ಜಯಶ್ರೀ ಕೊತಬಾಳ ಅವರು ಯಲಬುರ್ಗಾ ತಾಲೂಕಿನ ಕರ್ನಾಟಕ ಪಬ್ಲಿಕ್ ಶಾಲೆಯ ಕ್ರಿಯಾಶೀಲ ಶಿಕ್ಷಕಿಯಾಗಿ 2007 ರಲ್ಲಿ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿದಾಗಿನಿಂದ ಮಕ್ಕಳಿಗೆ ಹಾಡು ಕಥೆಗಳ ಮೂಲಕ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಹಾಗೂ ಬಹುಮುಖ ಪ್ರತಿಭೆ ಹೊಂದಿರುವ ಇವರು ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳಿಗೆ ಅಚ್ಚು ಮೆಚ್ಚಿನ ಶಿಕ್ಷಕರಾಗಿದ್ದಾರೆ. ಇವರು ಬೋಧಿಸುವ ವಿಷಯವನ್ನು ವಿನೂತನ ತಂತ್ರಗಳನ್ನು ಪ್ರಯೋಗಗಳು ಅನುಸರಿಸಿ ಮಕ್ಕಳಿಗೆ ತಿಳಿಯುವಂತೆ ಮಾಡುವುದು ಇವರ ಕಾರ್ಯವೈಖರಿಯಾಗಿದೆ.

“ಈ ಪ್ರಶಸ್ತಿ ನನಗೆ ಲಭಿಸಿದ್ದು, ವಯಕ್ತಿವಾಗಿ ಖುಷಿ ತಂದಿದೆ. ಆದರೆ, ಈ ವೃತ್ತಿಯಲ್ಲಿ ನನಗಿಂತ ಹಿರಿಯರು ಹಾಗೂ ಅನುಭಿವಿ ಶಿಕ್ಷಕರು ಇದ್ದಾರೆ ಅಂತವರಿಗೆ ಈ ಪ್ರಶಸ್ತಿ ದೊರೆಯಬೇಕಿತ್ತು, ನನಗೆ “ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ” ಸಿಕ್ಕಿದ್ದು ನನ್ನ ಪ್ರಮಾಣಿಕ ಕಾರ್ಯವೈಖರಿಯಿಂದ ಎಂದು ನಾನು ಭಾವಿಸುತ್ತೇನೆ ಹಾಗೇ ನನ್ನ ವಿದ್ಯಾರ್ಥಿ ವೃಂದ ಹಾಗೂ ಗುರುಗಳು ಇದಕ್ಕೆಲ್ಲಾ ಕಾರಣ ಎಂದು ಹೇಳಬಯಸುತ್ತೇನೆ”
:- ಶಿಕ್ಷಕಿ ಜಯಶ್ರೀ ಕೊತಬಾಳ, “ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ” ಪುರಸ್ಕೃತೆ

ಈ ಇಬ್ಬರು ಶಿಕ್ಷಕಿಯರಿಗೆ ಶಾಲೆಯ ಸಹೋದ್ಯೋಗಿಗಳು ಕುಕನೂರು ಹಾಗೂ ಯಲಬುರ್ಗಾ ತಾಲೂಕಿನ ಶಿಕ್ಷಕರ ಸಂಘಟನೆಗಳು ಹಾಗೂ ತಾಲೂಕಿನ ಸಮಸ್ತ ಶಿಕ್ಷಕರು ಅಭಿನಂದನೆಗಳನ್ನು ತಿಳಿಸಿದ್ದಾರೆ.

Leave a Reply

error: Content is protected !!