ಕೊಪ್ಪಳ : ಕುಣಿಕೇರಿ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳ ತಂಡ ಭೇಟಿ ನೀಡಿ, ಅರೋಗ್ಯ ತಪಾಸಣೆ ನಡೆಸಿದರು.
ಕೊಪ್ಪಳ ತಾಲೂಕಿನ ಕುಣಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಪರೀತ ಸೋಳ್ಳೆ ಕಾಟ ಹೆಚ್ಚಾಗಿದ್ದು, ಇದರಿಂದ ಮಲೇರಿಯ ಹಾಗೂ ಡೆಂಗ್ಯೂ ಹರಡುವಿಕೆಯ ಆತಂಕ ಹಾಗೂ ಈ ಭಾಗದಲ್ಲಿ ಸ್ಟೀಲ್ ಕೈಗಾರಿಕೆಗಳು ಇದು, ಇವುಗಳಿಂದ ಹೊರಸೂಸುವ ವಿಷಪೂರಿತ ದೂಳಿನಿಂದ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ವಿವಿಧ ರೋಗರೂಜನೆಗಳು ಹರಡುವ ಅತಂಕ ಮನೆಮಾಡಿದೆ. ಈ ಕುರಿತು ಕೆಲ ದಿನಗಳ ಹಿಂದೆ ಈ ಗ್ರಾಮಸ್ಥರು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮಲೇರಿಯಾ ಡೆಂಗ್ಯೂ ನಿಯಂತ್ರಣ ಘಟಕದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಆರೋಗ್ಯ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಕುಣಿಕೇರಿ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸೋಳ್ಳೆ ನಿಯಂತ್ರಣ ಫಾಗ್ ಸರಿಯಾದ ರೀತಿಯಲ್ಲಿ ಸಿಂಪಡಣೆ ಮಾಡುತ್ತಿಲ್ಲ ಹಾಗೂ ಸರಿಯಾದ ಸ್ಪಂದನೆ ಇಲ್ಲ ಎಂದು ಅಲ್ಲಿನ ಗ್ರಾಮಸ್ಥರು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕುಣಿಕೇರಿ ಗ್ರಾಮ ಹಾಗೂ ಕುಣಿಕೇರಿ ತಾಂಡಾಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ, ವಾಸ್ತವ ವಂಶವನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ರಮೇಶ್ ವಿಬಿಡಿ ಜಿಲ್ಲಾ ಸಲಗಾರರು , ಪ್ರಮೋದ್ ವಿಬಿಡಿ ತಾಲೂಕ ಮೇಲ್ವಿಚಾರಕರು, ಅಬ್ಬಾ ಸೀನಿಯರ್ ಡಿಎನ್ಓ ಆಫೀಸರ್, ಭೀಮೇಶ್ ಸೀನಿಯರ್ ಡಿಎನ್ಓ ಆಫೀಸರ್, ಡಾಕ್ಟರ್ ಗುರುಪ್ರಸಾದ್, ಎಲ್ ವಿ ಸರ್ಜನ್ ಹಿರಿಯ ಆರೋಗ್ಯ ನಿರಕ್ಷಣಾಧಿಕಾರಿಗಳು ಇದ್ದರು.