LOCAL NEWS : ಉತ್ತಮ ನಾಗರಿಕರಾಗಿ ಬಾಳಲು ಗುರುಗಳ ಮಾರ್ಗದರ್ಶನ ಅತ್ಯಂತ ಅವಶ್ಯಕ : ಶಿಕ್ಷಕ ಬಿ.ವಿ.ಕಟ್ಟಿ

You are currently viewing LOCAL NEWS : ಉತ್ತಮ ನಾಗರಿಕರಾಗಿ ಬಾಳಲು ಗುರುಗಳ ಮಾರ್ಗದರ್ಶನ ಅತ್ಯಂತ ಅವಶ್ಯಕ : ಶಿಕ್ಷಕ ಬಿ.ವಿ.ಕಟ್ಟಿ

ಕುಕನೂರು : ಪಟ್ಟಣದ ಶ್ರೀ ಗವಿಸಿದ್ಧೇಶ್ವರ ಪ್ರೌಢ ಮತ್ತು ಪ್ರಾಥಮಿಕ ಶಾಲೆಯಲ್ಲಿ ಭಾರತ ರತ್ನ, ಮಾಜಿ ರಾಷ್ಟ್ರಪತಿಯಾದ ಸರ್ವೆಪಲ್ಲಿ ರಾಧಾಕೃಷ್ಣನ್ ರವರ 135ನೇ ಜನ್ಮ ದಿನಾಚರಣೆಯನ್ನು ಇಂದು ಆಚರಿಸಲಾಯಿತು.

BIG BREAKING : ಹಾಲು ಉತ್ಪಾದಕ ರೈತರಿಗೆ 3 ಸಾವಿರ ರೂ. ಪ್ರೋತ್ಸಾಹ ಧನ ಹಾಗೂ ಮೇವಿನ ಬೀಜ ವಿತರಣೆ..!!

ಶಾಲೆಯಲ್ಲಿ ಬೆಳಿಗ್ಗೆ ವಿದ್ಯಾರ್ಥಿಗಳು ಶಿಕ್ಷಕರಾಗಿ ಪಾಠ ಬೋಧನೆ ಮಾಡಿವುದರ ಜೊತೆಗೆ ಶಿಕ್ಷಕ ವೃತ್ತಿ ಅನುಭವವನ್ನು ಸಂಭ್ರಮಿಸಿದರು.

ಜಾಹೀರಾತು

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ವಿ.ಕಟ್ಟಿ ಅವರು,”ಒಂದು ದೇಶದ ಭವಿಷ್ಯ ಅಡಗಿರುವದು ನಾಲ್ಕು ಗೋಡೆಗಳ ಮದ್ಯದಲ್ಲಿ ವಿದ್ಯಾರ್ಥಿಗಳು ಭವಿಷ್ಯತ್ತಿನಲ್ಲಿ ಉತ್ತಮ ನಾಗರಿಕರಾಗಿ ಬಾಳಲು ಗುರುಗಳ ಮಾರ್ಗದರ್ಶನ ಅತ್ಯಂತ ಅವಶ್ಯವಾದದು” ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

BREAKING : ಪಡಿತರ ಚೀಟಿದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ..!!

ನಂತರ ಮುಖ್ಯಗುರುಗಳಾದ ಬಿ. ಎಸ್. ಅರಳೆಲೆಮಠ ಮಾತನಾಡಿ, “ಒಬ್ಬ ರೋಗಿ ಸತ್ತರೆ ವೈದ್ಯ ಕಾರಣ. ಒಂದು ಕಟ್ಟಡ ಕೆಟ್ಟರೆ ಒಬ್ಬ ಇಂಜಿನಿಯರ್ ಕಾರಣ ಆದರೆ ಒಬ್ಬ ಶಿಕ್ಷಕ ಕೆಟ್ಟವನಾದರೆ ಇಡೀ ಸಮಾಜವೆ ಕೆಟ್ಟಂತೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕರಾದ ಶ್ರೀ ಗವಿಸಿದ್ಧಪ್ಪ ಕರಮುಡಿ ಹಾಗೂ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯ ರಾದ ಶ್ರೀ ಎಸ್ ಜೆ ಪಾಟೀಲ್ ಶಾಲೆಯ ಸರ್ವ ಶಿಕ್ಷಕ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರಾದ ಪದ್ಮಾವತಿ, ಈರಮ್ಮ,ಅಶ್ವಿನಿ ಕಾರ್ಯಕ್ರಮದ ನಿರೂಪಣೆ ಮಾಡಿದರು.

Leave a Reply

error: Content is protected !!