ಕೊಪ್ಪಳ : ಕೊಪ್ಪಳ ನಗರಸಭೆಯ ಡೇ-ನಲ್ಮ್ ಯೋಜನೆಯಡಿ ಎರಡು ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ದೀನದಯಾಳ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ-ನಲ್ಮ್) ಯೋಜನೆಯಡಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳನ್ನು ಸೃಜಿಸಿ ಗೌರವಧನದ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಸ್ವ-ಸಹಾಯ ಸಂಘಗಳ ಅಥವಾ ಒಕ್ಕೂಟದ ಸದಸ್ಯರು ಅರ್ಜಿ ಸಲ್ಲಿಸಬಹುದಾಗಿದೆ.
CASH PRIZE : ಮಾಜಿ ಸೈನಿಕರ ಮಕ್ಕಳಿಗೆ ಜನರಲ್ ಕೆ.ಎಸ್ ತಿಮ್ಮಯ್ಯ ನಗದು ಪ್ರಶಸ್ತಿ: ಅರ್ಜಿ ಆಹ್ವಾನ
ಸಮುದಾಯ ಸಂಪನ್ಮೂಲ ವ್ಯಕ್ತಿ ಹುದ್ದೆಗೆ ಮಾಸಿಕ ಗೌರವಧನ 8000 ರೂ. ಹಾಗೂ ಗರಿಷ್ಟ 2000 ರೂ.ಟಿ.ಎ ನೀಡಲಾಗುವುದು. ಈ ಹುದ್ದೆಯು ಕಡ್ಡಾಯವಾಗಿ ಮಹಿಳೆಯರಿಗೆ ಮಾತ್ರ ಇದ್ದು, ಅಭ್ಯರ್ಥಿಗಳು 18 ರಿಂದ 45 ವರ್ಷದೊಳಗೆ ಮತ್ತು ಕನಿಷ್ಠ ಪಿ.ಯು.ಸಿ ಅಥವಾ ಅದಕ್ಕಿಂತ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರಬೇಕು. ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು (ಪ್ರಮಾಣ ಪತ್ರ ಹೊಂದಿರಬೇಕು). ಪಟ್ಟಣದ ವ್ಯಾಪ್ತಿಯ ಸ್ವ ಸಹಾಯ ಸಂಘದಲ್ಲಿ ಕನಿಷ್ಟ ಮೂರು ವರ್ಷದಿಂದ ಸದಸ್ಯೆಯಾಗಿರಬೇಕು. ಪ್ರದೇಶ ಮಟ್ಟದ ಒಕ್ಕೂಟದ ಸದಸ್ಯೆಯಾಗಿರಬೇಕು. ಸ್ವ-ಸಹಾಯ ಸಂಘದಲ್ಲಿ ಆಂತರಿಕ ಸಾಲ ಪಡೆದು ಸಕಾಲದಲ್ಲಿ ಮರು ಪಾವತಿಸಿರಬೇಕು. ಸ್ವ-ಸಹಾಯ ಸಂಘದಲ್ಲಿ ಆಂತರಿಕ ಸಾಲ ಪಡೆದು ಕಟ್ ಬಾಕಿದಾರರಾಗಿರಬಾರದು. ಸರ್ಕಾರಿ, ಅರೆಸರಕಾರಿ, ಎನ್.ಜಿ.ಓ. ಗಳಲ್ಲಿ ಉದ್ಯೋಗಸ್ಥರಾಗಿರಬಾರದು. ಕಾರ್ಯನಿಮಿತ್ಯ ಅಗತ್ಯವಿದ್ದಲ್ಲಿ ಹೊರಸಂಚಾರಕ್ಕೆ ಸಿದ್ದರಿರಬೇಕು.
KOPPAL NEWS : ಅಕ್ರಮ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದವರ ಬಂಧನ..!
ಅರ್ಹ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಸಮಿತಿಯ ನಿರ್ಣಯವೇ ಅಂತಿಮವಾಗಿದ್ದು, ಆಸಕ್ತ ಅಭ್ಯರ್ಥಿಗಳು ನಗರಸಭೆ ಕಾರ್ಯಾಲಯದ ಡೇ-ನಲ್ಮ್ ಯೋಜನೆಯ ವಿಭಾಗದಲ್ಲಿ ಸಂಪರ್ಕಿಸಿ ನಿಗದಿಪಡಿಸಿದ ಅರ್ಜಿ ನಮೂನೆಯಲ್ಲಿ ದೃಢೀಕೃತ ದಾಖಲಾತಿಗಳೊಂದಿಗೆ ಸೆಪ್ಟೆಂಬರ್ 18ರ ಒಳಗಾಗಿ ಅರ್ಜಿ ಸಲ್ಲಿ¸ಬೇಕು. ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.