LOCAL EXPRESS : “ಬರಪೀಡಿತ ತಾಲೂಕು” ಎಂದು ಘೋಷಣೆ ಮಾಡುವುದಕ್ಕೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ : ಶಾಸಕ ರಾಯರೆಡ್ಡಿ!!

You are currently viewing LOCAL EXPRESS : “ಬರಪೀಡಿತ ತಾಲೂಕು” ಎಂದು ಘೋಷಣೆ ಮಾಡುವುದಕ್ಕೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ : ಶಾಸಕ ರಾಯರೆಡ್ಡಿ!!

ಯಲಬುರ್ಗಾ : “ವಾಡಿಕೆಯಂತೆ ಈ ಬಾರಿ ಕುಕನೂರು-ಯಲಬುರ್ಗಾ ತಾಲೂಕಿನಲ್ಲಿ ಮಳೆ ಬಾರದ ಕಾರಣ ಬರದ ಛಾಯೆ ಮೂಡಿದೆ. ಹಾಗಾಗಿ ತಾಲೂಕಿನಾದ್ಯಂತ ರೈತರು ಹಾಗೂ ಜನರು ಬರಗಾಲದ ನೆರಳನಲ್ಲಿ ಇರುವ ಪರಿಸ್ತಿತಿ ಉಂಟಾಗಿದೆ. ಆದ್ದರಿಂದ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಕುಕನೂರು-ಯಲಬುರ್ಗಾ ತಾಲೂಕಗಳನ್ನು ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡಬೇಕೆಂದು ಪತ್ರ ಬರೆದಿದ್ದೇನೆ” ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

LOCAL NEWS : ಈ ಸರ್ಕಾರ ರೈತ ವಿರೋಧಿ ನಡೆ ಅನುಸರಿಸುತ್ತಿದೆ : ಮಾಜಿ ಸಚಿವ ಹಾಲಪ್ಪ ಆಚಾರ್‌ ಕಿಡಿ..!!

ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ರಾಯರೆಡ್ಡಿ, ” ಸರಿಯಾದ ಸಮಯದಲ್ಲಿ ಮಳೆ ಬಂದಿದ್ದರೆ, ಹೆಚ್ಚು ಬಿತ್ತನೆ ಕಾರ್ಯ ನಡೆಯುತ್ತಿತ್ತು, ಆದರೆ ಮಳೆ ಬಾರದ ಕಾರಣ ಈ ಬಾರಿ ಬಿತ್ತನೆ ಕಾರ್ಯದಲ್ಲಿ ಕಂಟಿತಗೊಂಡಿದ್ದು, ಬರಗಾಲ ಬಂದಿದೆ ಹಾಗೂ ತಾಲೂಕಿನ ಕೆಲ ಭಾಗದಲ್ಲಿ ಅತೀವ ಮಳೆ ಬಂದು ಯರೇಹಂಚಿನಾಳ, ತಿಮ್ಮಾಪೂರ, ಸೋಂಪುರ್‌ ಗ್ರಾಮಗಳ ಹಿರೇಹಳ್ಳದಲ್ಲಿ ಪ್ರವಾಹ ಉಂಟಾಗಿದ್ದು, ಹಳ್ಳದ ಸುತ್ತಮುತ್ತಲಿನ ಹೊಲಗಳಲ್ಲಿರುವ ಬೆಳೆ ನಾಶವಾಗಿದೆ. ಇದರಿಂದ ಬೆಳೆ ಹಾನಿ ಆಗಿದೆ. ಇದಕ್ಕೆ ಸೂಕ್ತ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದರು.

KOPPAL NEWS : ವಿಕಲಚೇತನರಿಗೆ ವಿವಿಧ ಯೋಜನೆ : ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ..!!

ಈ ಪ್ರವಾಹಕ್ಕೆ ಕಾರಣವೆಂದರೆ, ಮಳೆಗಾಲದಲ್ಲಿ ತುಂಬಿ ಹರಿಯುವ ಹಿರೇಹಳ್ಳದಲ್ಲಿ ಜಾಲಿ ಗಿಡಗಳು ಹಾಗೂ ಗಿಡಗಂಟಿಗಳು ಸಾಕಷ್ಟು ಬೆಳೆದುದರಿಂದ ಸರಿಯಾಗಿ ಮಳೆ ನೀರು ಹಳ್ಳದಲ್ಲಿ ಹರಿದು ಹೋಗುತ್ತಿಲ್ಲ. ಹಾಗಾಗಿ ಡ್ರೋನ್‌ ಸಮೀಕ್ಷೆಯ (DETAILED PROJECT REPORT-DPR) ಡಿಪಿಆರ್‌ ಮಾಡಿ, ಜಾಲಿ ಗಿಡಗಳು ಹಾಗೂ ಗಿಡಗಂಟಿಗಳು ಸ್ವಚ್ಚಗೊಳಿಸಿದರೆ, ಅತೀವ ಮಳೆ ಬಂದಾಗ ಹಳ್ಳದಲ್ಲಿ ಸರಾಗವಾಗಿ ನೀರು ಹರಿದುಹೋಗುತ್ತದೆ. ಈ ವಿಚಾರವಾಗಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರಿಗೆ ದೂರವಾಣಿ ಮುಖಾಂತರ ಮನವರಿಕೆ ಮಾಡಿದ್ದೇನೆ ಎಂದರು.

KOPPAL NEWS : ಬೆಳೆ ಸ್ಪರ್ಧೆಗೆ ನೋಂದಾಯಿಸಲು ಸೆಪ್ಟೆಂಬರ್ 15ರವರೆಗ ಅವಕಾಶ

ಈ ಸುದ್ದಿಗೋಷ್ಠಿಯಲ್ಲಿ ಕುಕನೂರು ತಾಲೂಕಿನ ತಹಶೀಲ್ದಾರ್‌ ಹೆಚ್‌. ಪ್ರಾಣೇಶ್‌ ಹಾಗೂ ಯಲಬುರ್ಗಾ ತಾಲೂಕಿನ ತಹಶೀಲ್ದಾರ್‌ ಬಸವರಾಜ ತೆನ್ನಳ್ಳಿ ಹಾಗೂ ಕುಕನೂರು-ಯಲಬುರ್ಗಾ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಂತೋಷ ಪಾಟೀಲ್‌ ಬಿರಾದಾರ್ ವಿವಿಧ ಇಲಾಖೆಯ ಅದಿಕಾರಿಗಳು ಹಾಜರಿದ್ದರು.

Leave a Reply

error: Content is protected !!