ಪ್ರಜಾವೀಕ್ಷಣೆಯ ವಿಶೇಷ ವರದಿ
ಯಲಬುರ್ಗಾ : ತಾಲೂಕಿನ ಬೇವೂರು ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿದ್ಯುತ್ ಇಲ್ಲಿದೆ ರೋಗಿಗಳು ಹಾಗೂ ಆರೋಗ್ಯ ಸಿಬ್ಬಂದಿಗಳು ಪರದಾಡುವ ಪರಿಸ್ಥಿತಿ ಉಂಟಾಗಿದೆ.
ಪ್ರಸ್ತುತವಾಗಿ ಬೇವೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರೆಂಟ್ ಹೊದಾಗ, ಯಾವುದೇ ಬ್ಯಾಟರಿ ಬ್ಯಾಕಪ್ ಹಾಗೂ ಜನರೇಟರ್ ಇಲ್ಲದೇ ಇರುವುದು, ಕೇವಲ ಸೋಲಾರ್ ಲೈಟ್‌ಗಳನ್ನು ಉಪಯೋಗಿಸಲಾಗುತ್ತಿರುವುದು ವಿಪರ್ಯಾಸ ಎನಿಸಿದೆ. ಇದೇ ವೇಳೆಯಲ್ಲಿ ಆರೋಗ್ಯ ಕೇಂದ್ರಕ್ಕೆ ರೋಗಿಗಳು ಅಥವಾ ತುರ್ತು ಪರಿಸ್ಥತಿಯಲ್ಲಿ ಗರ್ಭಿಣಿಯರು ಬಂದಾಗ ವಿದ್ಯುತ್ ಇಲ್ಲದಿರುವುದರಿಂದ ಸಾಕಷ್ಟು ಸಮಸ್ಯೆಗೆ ಒಳಗಾಗಬಹುದು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ರೀತಿಯಲ್ಲಿ ಈ ಭಾಗಕ್ಕೆ ವಿದ್ಯತ್ ಕಡಿತವಾದಾಗ ಪ್ರತಿ ದಿನವೂ ಇದೇ ಪರಿಸ್ಥಿತಿ ಉಂಟಾಗುತ್ತದೆ. ಈಗಾಗಲೇ ಕೆಲ ರೋಗಿಗಳಿಗೆ ಸ್ಕ್ಯಾನಿಂಗ್ ಅಥವಾ ವಿದ್ಯುತ್ ಆಧಾರಿತ ಚಿಕಿತ್ಸೆ ಮಾಡುವುದಕ್ಕೆ ಬಹಳಷ್ಟು ತೊಂದರೆ ಆಗಿದೆ. ಈ ಆರೋಗ್ಯ ಕೇಂದ್ರದ ಮೇಲ್ವೀಚಾರಕರು ಇಂತಹ ಸಮಸ್ಯೆಗಳನ್ನು ಬಗೆಹರಿಸಿದೆ ಸುಮ್ಮನೆ ಕಣ್ಣುಮುಚ್ಚಿ ಕುಳಿತುಕೊಂಡಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಬೇವೂರು ಗ್ರಾಮದ ಈ ಪ್ರಾಥಮಿಕ ಆರೋಗ್ಯ ಕೇಂದ್ರವು ಸುತ್ತಮುತ್ತಲಿನ ಹಲವಾರು ಹಳ್ಳಿಗಳ ಜನರಿಗೆ ಸಂಜೀವಿನ ಕೇಂದ್ರವಿದ್ದಂತೆ. ಆದರೆ, ವಿದ್ಯುತ್ ಇಲ್ಲದಿರುವುದರಿಂದ ರೋಗಿಗಳಿಗೆ ಹಾಗೂ ರಾತ್ರಿ ಹೊತ್ತಿನಲ್ಲಿರುವ ಆರೋಗ್ಯ ಸಿಬ್ಬಂದಿಗಳಿಗೂ ತೊಂದರೆ ಆಗಲಿದೆ. ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಿಬೇಕು”
ರವಿ ಕೇರಾರಿ
ಗ್ರಾಮಸ್ಥ, ಬೇವೂರು
“ನಾನು ತಾಲೂಕು ಆರೋಗ್ಯಾಧಿಕಾರಿ ಆಗಿ ಅಧಿಕಾರ ವಹಿಸಿಕೊಂಡಿದ್ದು, ಕೇವಲ 10 ದಿನ ಆಗಿದೆ. ಬೇವೂರು 10ಕೆವಿ ವಿದ್ಯುತ್ ಸಾಮರ್ಥ್ಯ ಹೊಂದಿರುವ ಜನರೇಟರ್ ಇದೆ. ಆದರೆ ರಿಪೇರಿ ಮಾಡಿಸಿಲ್ಲ, ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲ್ವೀಚಾರಕರಿಗೆ ತಿಳಿಸುತ್ತೇನೆ”
ಡಾ. ರಚನಾ
ತಾಲೂಕು ಆರೋಗ್ಯಾಧಿಕಾರಿ, ಯಲಬುರ್ಗಾ
“ನಮ್ಮಲ್ಲಿ ಡೀಸಲ್ ಜನರೇಟರ್ ಇದೆ. ಆದರೆ ಅದೂ ರಿಪೇರಿ ಬಂದಿದ್ದು, ಸದ್ಯದಲ್ಲೇ ಸರಿಪಡೆಸುತ್ತೇವೆ. ಪರ್ಯಾಯವಾಗಿ ನಮ್ಮಲ್ಲಿ ಸೋಲಾರ್ ಸಿಸ್ಟಂನ ಲೈಟ್‌ಗಳನ್ನು ಅಳವಡಿಸಿದ್ದೇವೆ”
ಡಾ. ನೇತ್ರಾ
ಆರೋಗ್ಯಾಧಿಕಾರಿ, ಬೇವೂರು ಪ್ರಾಥಮಿಕ ಆರೋಗ್ಯ ಕೇಂದ್ರ.