ಕುಕನೂರು : ತಳಕಲ್ ಗ್ರಾಮದಲ್ಲಿ ಶ್ರೀ ವೀರಭದ್ರಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮ ಪ್ರಮುಖ ಬೀದಿಗಳಲ್ಲಿ ವೀರಭದ್ರೇಶ್ವರರ ಪಲ್ಲಕ್ಕಿ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ಸುಮಾರು ನೂರಕ್ಕೂ ಹೆಚ್ಚು ಜನ ಪುರವಂತರು ವೀರಭದ್ರೇಶ್ವರ ಒಡಪುಗಳನ್ನು ಹೇಳುತ್ತಾ. ಶಸ್ತ್ರವನ್ನು ಹಾಕಿಕೊಳ್ಳಲಾತು. 63 ಮಳದ 63ಗಂಟಿನ ದಾರದ ಶಸ್ತ್ರವನ್ನು ಸುಮಾರು 25ಜನ ಪುರವಂತರು ಹಾಕಿಕೊಂಡರು.
ಬಳಿಕ ಪಲ್ಲಕ್ಕಿ ಮೆರವಣಿಗೆ ದೇವಸ್ಥಾನದ ಆವರಣ ತಲುಪಿ ಮಂಗಳೂರಿನ ಅರಳೆಎಲೆ ಹಿರೇಮಠದ ಶ್ರೀ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಅಗ್ನಿ ಕೊಂಡ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ವೀರಭದ್ರಶ್ವರ ಕಡೇ ಕಡೇ ಘೋಷಣೆಗಳನ್ನು ಕೂಗುತ್ತ ಅಗ್ನಿಯನ್ನು ಹಾಯಲಾಯಿತು.ಇಂದು ಸಂಜೆ 5 ಗಂಟೆಗೆ ಶ್ರೀ ವೀರಭದ್ರಶ್ವರ ಜಾತ್ರಾ ಮಹೋತ್ಸವದ ರಥೋತ್ಸವ ನಡೆಯಲಿದೆ.