ಇಂಡಿಯಾ ಮೈತ್ರಿಕೂಟ ಪಕ್ಷಗಳಿಂದ 14 ಪತ್ರಕರ್ತರ ಬ್ಯಾನ್
ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದಲ್ಲಿ ಹೊಸದಾಗಿ ಹುಟ್ಟಿಕೊಂಡಿರುವ ಇಂಡಿಯಾ (I. N. D. I. A ) ಮೈತ್ರಿಕೂಟವು 14 ಪತ್ರಕರ್ತರನ್ನು ಬ್ಯಾನ್ ಮಾಡಿದೆ.
ದೇಶದ ನಂಬರ್ 1 ರಾಷ್ಟ್ರೀಯ ವಾಹಿನಿ ರಿಪಬ್ಲಿಕ್ ಸುದ್ದಿ ಚಾನೆಲ್ ನ ಆರ್ನಬ್ ಗೊಸ್ವಾಮಿ ಸೇರಿ 14 ಪತ್ರಕರ್ತರ ಕಾರ್ಯಕ್ರಮಗಳಿಗೆ ಇಂಡಿಯಾ ಒಕ್ಕೂಟದ ಪ್ರತಿನಿಧಿಗಳನ್ನು ಕಳುಹಿಸುವುದಿಲ್ಲ ಎಂದು ಒಕ್ಕೂಟದ ಮಾಧ್ಯಮ ಘಟಕವು ಪ್ರಕಟಣೆ ಹೋರಡಿಸಿದ್ದನ್ನು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಸೆಪ್ಟೆಂಬರ್ 13 ರಂದು ಇಂಡಿಯಾ ಒಕ್ಕೂಟದ ಮಾಧ್ಯಮ ವಿಭಾಗದ ಸಭೆ ನಡೆದಿದ್ದು ದೇಶದ ಪ್ರಮುಖ ಸುದ್ದಿ ಸಂಸ್ಥೆ ಗಳ ಪತ್ರಕರ್ತರು, ಸಂಪಾದಕರು, ನಿರೂಪಕರು ನೆಡಸಿಕೊಡುವ ಡಿಬೇಟ್ ಶೋ, ಕಾರ್ಯಕ್ರಮಗಳಿಗೆ ಇಂಡಿಯಾ ಒಕ್ಕೂಟದ ಪಕ್ಷಗಳ ಪ್ರತಿನಿಧಿಗಳನ್ನು ಕಳುಹಿಸುವುದಿಲ್ಲ ಎಂದು ಪ್ರಕಟಣೆ ಹೊರಡಿಸಿದೆ.
ಎ ಐ ಸಿ ಸಿ ಮಾಧ್ಯಮ ಘಟಕದ ಪವನ್ ಖೇರಾ ಅವರು ಈ ಕುರಿತು ಎಕ್ಸ್ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಆರ್ನಬ್ ಗೊಸ್ವಾಮಿ ( ರಿಪಬ್ಲಿಕ್ ) ನಾವಿಕಾ ಕುಮಾರ್ ( ಟೈಮ್ಸ್ ನೌ ), ಅದಿತಿ ತ್ಯಾಗಿ ( ಜೀ ನ್ಯೂಸ್ ), ಅಮನ್ ಚೋಪ್ರಾ ( ನ್ಯೂಸ್ 18), ಅಶೋಕ್ ಶ್ರೀವಾತ್ಸವ ( ಡಿ ಡಿ ನ್ಯೂಸ್ ) ಸುಧೀರ್ ಚೌದರಿ ( ಆಜ್ ತಕ್ ) ಚಿತ್ರಾ ತ್ರಿಪಾಟಿ ( ಆಜ್ ತಕ್ ), ಗೌರವ ಸಾಮಂತ ( ಇಂಡಿಯಾ ಟುಡೇ ಸೇರಿಡಂತೆ 14 ಪತ್ರಕರ್ತರನ್ನು ಇಂಡಿಯಾ ಮೈತ್ರಿಕೂಟವು ನಿರ್ಬಂಧ ವಿಧಿಸಿದ್ದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ವರದಿ : ಈರಯ್ಯ ಕುರ್ತಕೋಟಿ