LOCAL NEWS : ಪ್ರತಿಭಾ ಕಾರಂಜಿಗಳು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ಸಹಕಾರಿಯಾಗಿವೆ : ಭೂತೆ!

You are currently viewing LOCAL NEWS : ಪ್ರತಿಭಾ ಕಾರಂಜಿಗಳು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ಸಹಕಾರಿಯಾಗಿವೆ : ಭೂತೆ!

ಕುಕನೂರು : ‘ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ಸಹಕಾರಿಯಾಗಿವೆ’ ಎಂದು ಮುಖಂಡರಾದ ಬಸಲಿಂಗಪ್ಪ ಭೂತೆ ಹೇಳಿದರು.

ತಾಲೂಕಿನ ಮಂಗಳೂರು ಗ್ರಾಮದಲ್ಲಿ ಶುಕ್ರವಾರ ಶಾಂತಿನಿಕೇತನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 2023-24ನೇ ಸಾಲಿನ ಮಂಗಳೂರು ಕ್ಲಸ್ಟರ್ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾಕಾರಂಜಿ ಹಾಗು ಕಲಾತ್ಸೋವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿಭಾಕಾರಂಜಿಯಾಗು ಖಲೋತ್ಸವಾದಂತ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಶೈಕ್ಷಣಿಕ ಅಭಿವೃದ್ಧಿ ಹಾಗೂ ಸಾರ್ವಜನಿಕ ಪ್ರದರ್ಶನ ಕಲೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಎಂದು ಹೇಳಿದರು.

ಶಿಕ್ಷಕರ ಸಂಘದ ಅಧ್ಯಕ್ಷರಾದ ಮಹೇಶ್ ಮಾತನಾಡಿ ‘ಪ್ರತಿಭಾ ಕಾರಂಜಿ ಅಂತಹ ಕಾರ್ಯಕ್ರಮಗಳ ಮೂಲಕ ಜಾನಪದ ಕಲೆಯನ್ನು ಉಳಿಸಿ ಬೆಳೆಸಲು ಶಿಕ್ಷಕರು ಮುಂದಾಗಬೇಕು. ಮಕ್ಕಳಲ್ಲಿ ಜನಪದ ಹಾಡು, ಜನಪದ ನೃತ್ಯ, ಭಾಷಣ ಕಲೆ, ಹಾಗೂ ವೇಷ ಭೂಷಣದಂತಹ ಕಲೆಗಳ ಕುರಿತು ಮನವರಿಕೆ ಮಾಡಿಕೊಡಬೇಕು’ ಎಂದು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಕೊಟ್ರಪ್ಪ ತೋಟ ವಹಿಸಿಕೊಂಡಿದ್ದರು. ಕಾರ್ಯಕ್ರಮದ ಪೂರ್ವದಲ್ಲಿ ಪ್ರತಿಭಾಕರಂಜಿಗೆ ಆಗಮಿಸಿದ ವಿವಿಧ ಶಾಲೆಗಳ ಮಕ್ಕಳ ವೇಷ ಭೂಷಣದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಉಪ ತಹಸಿಲ್ದಾರ್ ಬಸವರಾಜ್ ಕೆ, ಗ್ರಾ.ಪಂ ಅಧ್ಯಕ್ಷ ಸಕ್ರಪ್ಪ ಚಿನ್ನೂರು, ಉಪಾದ್ಯೆಕ್ಷೆ ಅನ್ನಪೂರ್ಣ ಮ್ಯಾಗಲಿಸಿ, ಡಾ ಸಿ ಎಂ ಹಿರೇಮಠ್, ರೋಟರಿ ಕ್ಲಬ್ನ ಜಿಲ್ಲಾಧ್ಯಕ್ಷ ಚಿನ್ನಪ್ಪ ಶಿರೂರ್, ವಿಶ್ವನಾಥ್ ಮರಿಬಸಪ್ಪನವರ್, ಎಸಿ ಖಾಲಿಮಿರ್ಚಿ, ಶರಣೇಗೌಡ ಯರದೊಡ್ಡಿ, ರೇವಣಸಿದ್ದಯ್ಯ ಅರಳಲೇ ಹಿರೇಮಠ, ವಿರುಪಾಕ್ಷಪ್ಪ ಮಾಳಗೌಡ್ರು, ಸಿ.ಆರ್.ಪಿ.ರವಿ ಮಳಿಗಿ ಹಾಗೂ ಇತರರಿದ್ದರು.

Leave a Reply

error: Content is protected !!