ಕೂಕನೂರು : ಕುಕನೂರು ಪಟ್ಟಣದ ಗುದ್ನೆಪ್ಪನಮಠದಲ್ಲಿ ಸರಕಾರಿ ಕಟ್ಟಡಗಳ ನಿರ್ಮಾಣಕ್ಕೆ ಸ್ಥಳ ವೀಕ್ಷಣೆಗೆ ಬಂದ ಶಾಸಕ ಬಸವರಾಜ ರಾಯರಡ್ಡಿ ಹಾಗೂ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರಿಗೆ ಸ್ಥಳ ವೀಕ್ಷಣೆ ಮಾಡುತ್ತಿರುವಾಗ ಸ್ಥಳೀಯರು ತೀವ್ರ ವಿರೋಧ ವ್ಯಕ್ತ ಪಡೆಸಿದರು.
ಇಂದು ಮದ್ಯಾಹ್ನ 12 ಗಂಟೆಗೆ ಕುಕನೂರಿನ ತಹಸೀಲ್ದಾರ ಕಛೇರಿ, ತಾಲೂಕ ಕ್ರೀಡಾಂಗಣ ಮತ್ತು ಬುದ್ಧ-ಬಸವ-ಅಂಬೇಡ್ಕರ್ ಭವನ ಹಾಗೂ ತಾಲೂಕಾ ನ್ಯಾಯಾಲಯ ನಿರ್ಮಾಣಕ್ಕೆ ಪಟ್ಟಣದ ಗುದ್ನೆಪ್ಪನಮಠದಲ್ಲಿ ಸ್ಥಳ ಪರಿಶೀಲನೆ ನಡೆಸಿದರು.
ಈ ವೇಳೆಯಲ್ಲಿ ಗುದ್ನೆಪ್ಪನಮಠದ ಗ್ರಾಮಸ್ಥರು ಇಲ್ಲಿ ಯಾವುದೇ ಸರ್ಕಾರಿ ಕಟ್ಟಡದ ನಿರ್ಮಾಣ ಮಾಡಕೂಡದು ಎಂದು ಶಾಸಕರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ವೇಳೆಯಲ್ಲಿ ಒಂದು ಹೈಡ್ರಾಮವೇ ನಡೆಯಿತು.