“ಫ್ರೀ ಟಿಕೆಟ್ ಎಫೆಕ್ಟ್, ಬಸ್ ಗಳಿಗಾಗಿ ವಿದ್ಯಾರ್ಥಿಗಳ ಪರದಾಟ “
ಕೊಪ್ಪಳ : ಸರಕಾರದ ಶಕ್ತಿ ಯೋಜನೆಯ ಅಡ್ಡ ಪರಿಣಾಮವೋ ಏನೋ ಫ್ರೀ ಟಿಕೆಟ್ ನಿಂದಾಗಿ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಬಸ್ ಬಸ್ ಪ್ರಯಾಣಕ್ಕೆ ನಿತ್ಯವೂ ತೊಂದರೆ ಯಾಗುತ್ತಿದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಇಲ್ಲಿದೆ.
ಕೊಪ್ಪಳ ತಾಲೂಕಿನ ಕರ್ಕಿಹಳ್ಳಿ ಗ್ರಾಮದಲ್ಲಿ ಬರುವಂತಹ ಬಸ್ ಗಳಿಗೆ ವಿದ್ಯಾರ್ಥಿಗಳ ದಿನನಿತ್ಯ ಪರದಾಟವಾಗಿದ್ದು ಮಹಿಳೆಯರಿಗೆ ಟಿಕೆಟ್ ಫ್ರೀ ಬಂದಾಗಿನಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು ನಿಗದಿತ ಸಮಯದಲ್ಲಿ ಶಾಲಾ ಕಾಲೇಜು ತಲುಪಲು ಆಗುತ್ತಿಲ್ಲ.
ಬಸ್ ಗಳಲ್ಲಿ ಹೆಚ್ಚಾಗಿ ಮಹಿಳಾ ಪ್ರಯಾಣಿಕರು ಓಡಾಡೋದ್ರಿಂದ ಬಸ್ಸುಗಳು ತುಂಬಿ ತುಳುಕುತ್ತಿದ್ದು ಶಾಲೆಗೆ ಹಾಗೂ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗಿದೆ, ಕೊಪ್ಪಳ ಕರ್ಕಿಹಳ್ಳಿ ರಸ್ತೆಯು ಹದಗೆಟ್ಟಿದ್ದು ಬಸ್ ಕೊಪ್ಪಳ ಮುಟ್ಟೋದರಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣ ಮಾಡುವ ಪರಸ್ಥಿತಿ ಪ್ರಯಾಣಿಕರದ್ದು.
BIG BREAKING : 8ನೇ ಬಾರಿಗೆ ಏಷ್ಯಾ ಕಪ್ ಗೆದ್ದು ಬಿಗಿದ ಭಾರತ!!
ಪ್ರಯಾಣಿಕರ ತೊಂದರೆ ಬಗ್ಗೆ ಯಾವ ಸಾರಿಗೆ ಅಧಿಕಾರಿಯು ಇತ್ತ ಗಮನ ಹರಿಸಿಲ್ಲ.ಇದೇ ಮಾರ್ಗದಲ್ಲಿ ಕರ್ಕಿಹಳ್ಳಿ ಚಿಕ್ಕಬಗನಾಳ, ಹಿರೇ ಬಗನಾಳ, ಮುಂತಾದ ಹಳ್ಳಿಗಳಿಗೆ ಸರಿಯಾದ ರಸ್ತೆ ಇಲ್ಲದೆ ಪ್ರತಿನಿತ್ಯ ಇದೆ ಗೋಳಾಟ. ಈ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಬಸ್ ಗಳು ಯಾವಾಗಲೂ ಫುಲ್ ರೇಸ್ ಆಗಿರುತ್ತವೆ. ಬರುವ ವಿದ್ಯಾರ್ಥಿಗಳು ಡೋರಿನಲ್ಲಿ ನಿಂತು ಬಸ್ ನಿಲ್ದಾಣ ಬರೋವರೆಗೂ ಜೋತಾಡುತ್ತಾ ತಲುಪುತ್ತಿದ್ದಾರೆ ವಿದ್ಯಾರ್ಥಿಗಳು ನಿಂತುಕೊಂಡು ಹೋಗುವ ಸಂದರ್ಭದಲ್ಲಿ ಅಪಘಾತ ಆಗುವ ಸಂಭವ ಅತಿ ಹೆಚ್ಚು ಇರುತ್ತದೆ
ಇಂತಹ ಸಮಯದಲ್ಲಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಇದರಿಂದ ಸಾರ್ವಜನಿಕ ವಲಯಕ್ಕೂ ಹಾಗೂ ವಿದ್ಯಾರ್ಥಿಗಳಿಗೆ ಸಂಪೂರ್ಣ ನೆರವಾಗಲಿದೆ ಇದಕ್ಕೆ ಎಸ್ ಆರ್ ಟಿ ಸಿ ಇಲಾಖೆ ಗಮನಹರಿಸಿ ಎಲ್ಲರಿಗೂ ಅನುಕೂಲ ಮಾಡಿಕೊಡಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ.
ವರದಿ :- ರಾಧಿಕಾ ಕರ್ಕಿಹಳ್ಳಿ