ಕುಕುನೂರು : ತಾಲೂಕಿನ ಗುದ್ನೆಪ್ಪನಮಠ ಗ್ರಾಮದಲ್ಲಿ ಕೊಪ್ಪಳ ಜಿಲ್ಲಾ ಆಡಳಿತದಿಂದ ನೂತನ ಕುಕನೂರು ತಹಸಿಲ್ದಾರ್ ಕಾರ್ಯಾಲಯ ಹಾಗೂ ಕೋರ್ಟ್ ಮತ್ತು ಬುದ್ಧ ಬಸವ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಗ್ರಾಮದಲ್ಲಿರುವ ದೇವಸ್ಥಾನದ ಜಮೀನನ್ನು ವಶಪಡಿಸಿಕೊಳ್ಳಲು ಮುಂದಾಗಿರುವುದನ್ನು ಖಂಡಿಸಿ ಗ್ರಾಮಸ್ಥರು ಪೂಜ್ಯಶ್ರೀ ಪ್ರಭುಲಿಂಗ ದೇವರ ನೇತೃತ್ವದಲ್ಲಿ ದೇವಸ್ಥಾನದ ಜಮೀನಿನ ಉಳಿವಿಗಾಗಿ ಕೊಪ್ಪಳ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
FLASH NEWS : ಹಿಂದೂ ಕಾರ್ಯಕರ್ತೆ ಚೈತ್ರ ಕುಂದಾಪುರಳ ಮತ್ತೊಂದು ಕರ್ಮಕಾಂಡ ಬಯಲು..!!
ಇಂದು (ಸೆಪ್ಟೆಂಬರ್ 19) ಶ್ರೀಗಳ ನೇತೃತ್ವದಲ್ಲಿ ಸುಮಾರು 200ಕ್ಕೂ ಹೆಚ್ಚು ಜನ ಸೇರಿಕೊಂಡು ದೇವಸ್ಥಾನದ ಜಮೀನಲ್ಲಿ ಯಾವುದೇ ಸರ್ಕಾರಿ ಕಟ್ಟಡಗಳನ್ನು ನಿರ್ಮಾಣ ಮಾಡದಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆ.