LOCAL EXPRESS : “ನಮಗೆ ಮದ್ಯದ ಅಂಗಡಿ ಬೇಕು” : ಗ್ರಾಮಸ್ಥರಿಂದ ಮನವಿ!

You are currently viewing LOCAL EXPRESS : “ನಮಗೆ ಮದ್ಯದ ಅಂಗಡಿ ಬೇಕು” : ಗ್ರಾಮಸ್ಥರಿಂದ ಮನವಿ!

ಕುಕನೂರು : ಕುಕನೂರು ತಾಲೂಕಿನ ಕುದುರೆಮೋತಿ ಗ್ರಾಮದ ಗ್ರಾಮಸ್ಥರಿಂದ ಗ್ರಾಮದಲ್ಲಿ ಮಧ್ಯದ ಅಂಗಡಿ ಪ್ರಾರಂಭಿಸುವಂತೆ ಮನವಿಯನ್ನು ಸಲ್ಲಿಸಲಾಯಿತು.

BIG NEWS : ಇಂದು ಹಾಗೂ 3 ದಿನ ಮದ್ಯ ಮಾರಾಟ ನಿಷೇಧ..!!

ತಾಲೂಕಿನ ಕುದುರಿಮೋತಿ ಗ್ರಾಮದಲ್ಲಿ ಕಾರಟಗಿ ಪಟ್ಟಣದ ಶ್ರೀ ಲಿಕ್ಕರ್ ಸನ್ನದು 2 ಎಂಬ ಮಧ್ಯದ ಅಂಗಡಿಯು ಕುದುರೆಮೋತಿ ಗ್ರಾಮದಲ್ಲಿ ಮಧ್ಯದ ಅಂಗಡಿ ಸ್ಥಾಪಿಸಲು ಸಂಬಂಧಪಟ್ಟ ಇಲಾಖೆ ಸೇರಿದಂತೆ ಧಾರವಾಡದ ಸಂಚಾರಿ ಹೈಕೋರ್ಟ್ ಪೀಠ ಆಹಾರ ಮತ್ತು ಸುರಕ್ಷಿತ ಇಲಾಖೆ, ಗ್ರಾಮ ಪಂಚಾಯಿತಿ ಕಾರ್ಯಾಲಯದಿಂದ ಪರವಾನಿಗೆ ಪಡೆದು ಮಧ್ಯದ ಅಂಗಡಿ ಸ್ಥಾಪಿಸಲು ಮುಂದಾಗಿರುತ್ತಾರೆ ಆದರೆ ಸ್ಥಳೀಯ ಕೆಲವು ಹೋಟೆಲ್ ಹಾಗೂ ಪಾನ್ ಶಾಪುಗಳಲ್ಲಿ ಅಂದರೆ ಹತ್ತಿರದ ಮಂಗಳೂರು ಗ್ರಾಮದ ಮಧ್ಯದ ಅಂಗಡಿಯಿಂದ ಮಧ್ಯವನ್ನು ತಂದು ಗ್ರಾಮದ 30 ರಿಂದ 40 ಚಿಲ್ಲರೆ ಅಂಗಡಿಗಳಲ್ಲಿ ಈಗಾಗಲೇ ಅಕ್ರಮವಾಗಿ ಹಾಗೂ ಹೆಚ್ಚಿನ ದರಕ್ಕೆ ಮಧ್ಯ ಮಾರಾಟ ಮಾಡುತ್ತಿದ್ದು ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ರಾಜಸ್ವ ಸೋರಿಕೆಯಾಗುತ್ತಿರುವದಲ್ಲದೆ ಗ್ರಾಹಕರ ಜೇಬಿಗೂ ಸಹ ಹೊರೆಯಾಗುತ್ತಿದೆ.

BIG NEWS : “ಕರ್ನಾಟಕಕ್ಕೆ 50ರ ಸಂಭ್ರಮ” : “ಲೋಗೋ” ಕಳುಹಿಸಿ 25 ಸಾವಿರ ರೂ.ಬಹುಮಾನ ಗೆಲ್ಲಿ..!!

ಗ್ರಾಮದಲ್ಲಿ ಮಧ್ಯದ ಅಂಗಡಿ ಪ್ರಾರಂಭಿಸಲು ಕಾರ್ಯಕರ್ತರಿಗೆ ಸಂದರ್ಭದಲ್ಲಿ ಹೆಚ್ಚಿನ ಲಾಬಿಗೆ ಮಧ್ಯ ಮಾರಾಟ ಮಾಡುತ್ತಿರುವ ವ್ಯಾಪಾರಿಗಳು ಜನರನ್ನು ಎತ್ತಿಗಟ್ಟಿ ಮಧ್ಯದ ಅಂಗಡಿ ಪ್ರಾರಂಭವಾಗದಂತೆ ಹುನ್ನಾರ ಮಾಡುತ್ತಿದ್ದಾರೆ ಇದನ್ನೆಲ್ಲಾ ತಹಶೀಲ್ದಾರರು ಕೋಲಂಕುಶವಾಗಿ ಪರಿಶೀಲಿಸಿ ಗ್ರಾಮದಲ್ಲಿ ಮಧ್ಯದ ಅಂಗಡಿ ತೆರೆಯಲು ಅನುವು ಮಾಡಿಕೊಳ್ಳುವುದರ ಜೊತೆಗೆ ಸ್ಥಳೀಯ ಕಿಡಿಗೇಡಿಗಳಿಂದ ರಕ್ಷಣೆ ಒದಗಿಸಬೇಕು ಎಂದು ಕುದುರೆಮೋತಿ ಗ್ರಾಮದ ಹಲವರು ತಹಸಿಲ್ದಾರ್ ಕಾರ್ಯಾಲಯಕ್ಕೆ ಮನವಿ ಸಲ್ಲಿಸಿರುತ್ತಾರೆ.

LOCAL NEWS : ಇಟಗಿ ಆದರ್ಶ ವಿದ್ಯಾಲಯದ ಮಕ್ಕಳು ಯೋಗ ಹಾಗೂ ಚದುರಂಗದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ..!

ಕುದುರೆಮೋತಿ ಗ್ರಾಮಸ್ಥರಿಂದ ಮನವಿ ಸ್ವೀಕರಿಸಿದ ಗ್ರೇಡ್2 ತಹಸಿಲ್ದಾರ ಮುರಳೀಧರ ರಾವ್ ಕುಲಕರ್ಣಿ ಮಾತನಾಡುತ್ತಾ ಕುದುರೆಮತಿ ಗ್ರಾಮಸ್ಥರಿಂದ ಮನವಿಯನ್ನು ಸ್ವೀಕರಿಸಿದ್ದು ಸೂಕ್ತ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕುದುರೆಮೋತಿ ಗ್ರಾಮಸ್ಥರಾದ ವಿಜಯಕುಮಾರ್ ದಾಸರ್, ಮಂಜು ಕೆಂಗಾರ, ಆನಂದ ಚೌಡ್ಕಿ, ಪಕೀರಪ್ಪ ಕುಂಬಾರ, ದೇವಪ್ಪ ನೆಲಜೇರಿ, ಮರಿಯಪ್ಪ ಕೆಂಗರ, ದುರ್ಗೇಶ್ ಕಾಳಿ, ಮುತ್ತು ಕಾಳಿ, ಹನುಮಂತಪ್ಪ ನೆಲಗೇರಿ, ಶರಣು ಕಾಳಿ, ದೇವಪ್ಪ ಬೊಮ್ಮನಹಳ್ಳಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Leave a Reply

error: Content is protected !!