ಅಧಿಕಾರಿಗಳಿಗೆ ಕ್ಲಾಸ್ ತಗೆದುಕೊಂಡ ಸಚಿವ ಶಿವರಾಜ್ ತಂಗಡಗಿ
ಕೊಪ್ಪಳ : “ನೀವು ಬದ್ಧತೆಯಿಂದ ಕೆಲಸ ಮಾಡಿ ಇಲ್ಲವೇ ಮನೆಗೆ ಹೋಗಿ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು, ಅಧಿಕಾರಿಗಳಿಗೆ ತರಾಟೆ ತಗೆದುಕೊಂಡರು.
ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಆಹ್ವಾಲು ಸ್ವೀಕರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ತಂಗಡಗಿ, ‘ಈ ತರ ನೀವು ಕೆಲಸ ಮಾಡುವುದಾದರೆ, ಸರಕಾರಿ ಕೆಲಸ ಮಾಡಬೇಡಿ, ಸಾರ್ವಜನಿಕರಿಗೆ ತೊಂದರೆ ಆಗದ ನೋಡಿಕೊಳ್ಳಬೇಕು. ನಿಮ್ಮ ಕರ್ತವ್ಯ ಹಾಗೂ ಬದ್ಧತೆ ಎಂದು ಅಧಿಕಾರಿಗಳಿಗೆ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಲಿನ ಅತುಲ್, ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಹುಲ್ ರತ್ನನ್ ಪಾಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಿ ಒಂಟಿಗೋಡಿ, ಜಿಲ್ಲಾಮಟ್ಟ ಅಧಿಕಾರಿಗಳು ಹಾಗೂ ತಾಲೂಕು ತಹಶೀಲ್ದಾರರು ಸಾರ್ವಜನಿಕರು ಮತ್ತು ಭಾಗವಹಿಸಿದ್ದರು.