SPECIAL STORY : ಕಣ್ಣಿನ ವೈದ್ಯ ಎಂದು ಹೆಸರುವಾಸಿ ಆದ ಚಿಕ್ಕಬಗನಾಳ ಗ್ರಾಮದ ಆನಂದಪ್ಪ..!

You are currently viewing SPECIAL STORY : ಕಣ್ಣಿನ ವೈದ್ಯ ಎಂದು ಹೆಸರುವಾಸಿ ಆದ ಚಿಕ್ಕಬಗನಾಳ ಗ್ರಾಮದ ಆನಂದಪ್ಪ..!

ಸ್ವಾರ್ಥಿಗಳೇ ತುಂಬಿರುವ ಕಾಲದಲ್ಲಿ ಕರುಣೆ, ಅನುಕಂಪ, ಸಹಾನುಭೂತಿ, ಸಹಾಯಕ್ಕೆ ಸಮಯ ಮತ್ತು ಸ್ಥಾನ ಎರಡೂ ಇರಲಾರವು, ಇಂತಹ ಪ್ರಪಂಚದಲ್ಲಿ ಸಮಾಜಸೇವೆಗಾಗಿ ಇಲ್ಲೊಬ್ಬ ವ್ಯಕ್ತಿ ತಮ್ಮ ಜೀವನವನ್ನೇ ಮೂಡಿಪಾಗಿಟ್ಟಿದ್ದಾರೆ. ಕೊಪ್ಪಳ ಜಿಲ್ಲೆಯ ಅದೇ ತಾಲೂಕಿನ ಚಿಕ್ಕಬಗನಾಳ ಗ್ರಾಮದ ಆನಂದಪ್ಪನಿಗೆ ಒಂದು ಹ್ಯಾಟ್ಸಾಪ್ ಹೇಳಲೇಬೇಕು. ಯಾಕಂದ್ರೆ ಇವರು ತಮ್ಮ ಗ್ರಾಮದ ಸುತ್ತಮೂತ್ತಲಿನ ಗ್ರಾಮಗಳ ಜನತೆಗೆ ಬಹಳ ಅಚ್ಚುಮೆಚ್ಚು ಕಾರಣ ಇವರು ಕಣ್ಣೀರು ವರೆಸುವ ಕಾಯಕ ಮಾಡುತ್ತಾರೆ.

ಸಹಜವಾಗಿ ಕಣ್ಣಲ್ಲಿ ಅರಳು ಮತ್ತು ಧೂಳನ್ನ ಬಿಳುತ್ತದೆ. ಆದರೇ ಅದು ಸಾಕಷ್ಟು ಸಮಸ್ಯೆ ತಂದೊಡ್ಡುತ್ತದೆ. ಇಂತಹ ಸಮಸ್ಯೆ ಬಾರದ ಹಾಗೇ ನೋಡಿಕೊಳ್ಳುವ ಜವಾಬ್ದಾರಿ ಇವರದ್ದು, ಕಣ್ಣಿನಲ್ಲಿ ಬಿದ್ದಿರುವ ಅರಳು ಯಾವುದೇ ಸೂಕ್ಷ್ಮ ತ್ಯಾಜ್ಯವನ್ನು ಸರಾಗವಾಗಿ ಹುಡುಕಿ ಕೊಡುವ ಕೆಲಸ ಮಾಡುತ್ತಾರೆ. ಇವರು ತಮ್ಮ ಬಳಿ ಕಣ್ಣಿನ ನೊವು ಅಂತ ಬಂದವರಿಗೆ ಅದನ್ನು ನಿವಾರಣೆ ಮಾಡಿಯೇ ಕಳಿಹಿಸುತ್ತಾರೆ. ಈ ಸಮಾಜ ಸೇವೆ ಮಾಡುತ್ತಿರುವುದು ನಿಜಕ್ಕೂ ತುಂಬಾ ಒಳ್ಳೆಯ ಕಾರ್ಯವಾಗಿದೆ.

ಆನಂದಪ್ಪನವರು ನಿರಂತರವಾಗಿ ಈ ಸೇವೆ ನೀಡುವುದು ವಿಶೇಷ ಸುತ್ತಮುತ್ತಲಿನ ಹಳ್ಳಿಗಳಿಗೆ ಹೆಸರುವಾಸಿ ಚಿಕ್ಕಬಗನಾಳ ಈ ಸಮಾಜ ವ್ಯಕ್ತಿ ಸಮಾಜ ಸೇವೆಯ ಜೊತೆಗೆ ಪಕ್ಕ ರೈತ ಹಾಗೂ ಕೋಳಿ ಫಾರಂನಲ್ಲಿ ಕಾರ್ಮಿಕ. ಬಡತನದಲ್ಲಿ ಬಳಲುತ್ತಿರುವವರ ಆರ್ಥಿಕ ಪರಿಸ್ಥಿತಿ ದುರಸ್ತಿ ಇದರ ಮಧ್ಯೆ ಸಮಾಜ ಸೇವೆಗೆ ಕಟ್ಟಿ ಬಂದ ಈ ಆನಂದಪ್ಪನಿಗೆ ನಮ್ಮದೊಂದು ಸಲಾಂ.

ಕೆಲವರು ಸಮಾಜ ಸೇವೆ ಮಾಡುವುದಕ್ಕಾಗಿ ರಾಜಕೀಯವನ್ನು ಆಯ್ಕೆ ಮಾಡುತ್ತಾರೆ. ಆನಂದಪ್ಪ ತಮ್ಮ ವೃತ್ತಿ ಕಾಯಕದ ಜೊತೆಗೆ ಹಳ್ಳಿಯ ಕಣ್ಣಿನ ವೈದ್ಯ ಎಂದು ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಇವರು ರೈತನಾಗಿ ತನ್ನ ಸ್ವಂತ 4 ಎಕರೆ ಭೂಮಿಯಲ್ಲಿ ಬಿತ್ತನೆ ಬಂದ ಹಣದಿಂದ ಜೀವನ ಸಾಗಿಸುತ್ತಿದ್ದಾರೆ. ಇದರ ಜೊತೆಗೆ ಜೀವನ ಸರಿದೂಗಿಸಲು ಕೋಳಿ ಫಾರಂನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಾರೆ ಹಾಗೂ ಕಣ್ಣಲ್ಲಿ ಬಿದ್ದಿರುವ ಅರಳು ಮತ್ತು ಧೂಳನ್ನು ಸರಾಗವಾಗಿ ನೋವಾಗದಂತೆ ತೆಗೆಯುತ್ತಾನೆ ಈ ಆನಂದಪ್ಪ ಹಾಗೂ ಕಾಲು ತಿಕ್ಕುವುದು ಬಟ್ಟೆ ಬಿದ್ದಾಗ ಬಟ್ಟಿ ತಿಕ್ಕುವುದು ಹಲವಾರು ರೀತಿಯ ಆರೋಗ್ಯದ ಸಮಸ್ಯೆ ಕಂಡು ಬಂದಾಗ ಸೇವೆಗಳನ್ನು ಮಾಡುತ್ತಾ ಬರುವ ಆನಂದಪ್ಪ ಸುತ್ತು 10 ಹಳ್ಳಿಗೂ ಹೆಸರುವಾಸಿಯಾಗಿದ್ದಾರೆ.

*ಕಣ್ಣಿನಲ್ಲಿ ಬಿದ್ದಿರುವ ಅರಳನ್ನು ಸುಲಭವಾಗಿ ತಗೆಯುವ ಕಲೆ ಕರಗತ*

ಸೂಕ್ಷ್ಮವಾಗಿ ಕಣ್ಣಲ್ಲಿ ಬಿದ್ದಿರುವ ಅರಳನ್ನು ಸುಲಭವಾಗಿ ಮತ್ತು ಸರಳವಾಗಿ ತೆಗೆಯುತ್ತಾರೆ ಈ ರೀತಿ ಕೊಬ್ಬರಿ ಎಣ್ಣೆ ಹಾಕಿ ತೆಗೆಯುವುದರಿಂದ ಕಣ್ಣಿಗೆ ಯಾವುದೇ ರೀತಿ ಸಮಸ್ಯೆ ಬರುವುದಿಲ್ಲ ಹತ್ತಿ ಮತ್ತು ಕೊಬ್ಬರಿ ಎಣ್ಣೆಯಿಂದ ಸುಲಭವಾಗಿ ತೆಗೆಯುತ್ತಾರೆ. ಈ ರೀತಿ ಕೊಬ್ಬರಿ ಎಣ್ಣೆಯಿಂದ ಅರಳು ಮತ್ತು ಧೂಳನ್ನು ತೆಗೆಯುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಕಣ್ಣು ಕೂಡ ಆರೋಗ್ಯಕರವಾಗಿರುತ್ತದೆ. ಹೀಗೆ ಸಮಾಜ ಸೇವೆಗಳಿಗೆ ನಾಲ್ಕು ಐದು ಹಳ್ಳಿ ಜನರು ಇವರನ್ನು ತುಂಬ ಗೌರವಿಸುತ್ತಾರೆ ಆನಂದಪ್ಪನವರು ಯಾರೇ ಬಂದರೂ ಅವರನ್ನ ಸಮಾನ ರೀತಿಯಲ್ಲಿ ಕಾಣುತ್ತಾರೆ. ಕಣ್ಣಲ್ಲಿ ಅರಳುಗಳು ತೆಗೆಸಿಕೊಳ್ಳಲು ಬಂದಾಗ ಏನು ಕೆಲಸವಿದ್ದರೂ ಸಹ ಅದನ್ನು ಬಿಟ್ಟು ಬಂದವರಿಗೆ ಹೆಚ್ಚು ಆದ್ಯತೆಯನ್ನು ಕೊಡುವ ಆನಂದಪ್ಪ ಸರಳ ಜೀವಿಯಾಗಿ ಸರಳ ಜೀವನವನ್ನು ನಡೆಸುತ್ತಿದ್ದಾರೆ. ಇವರು ಸಹ ಬಡಕುಟುಂಬದವರು ಈ ಕುಟುಂಬದಲ್ಲಿ ಜೀವನವನ್ನು ನಡೆಸುತ್ತಿದ್ದಾರೆ ಕುಟುಂಬದ ಜೊತೆಗೆ ತುಂಬಾ ಸುಖಮಯ ಜೀವನವನ್ನು ನಡೆಸುತ್ತಿದ್ದಾರೆ.

ವಿಶೇಷ ವರದಿ : ರಾಧಿಕಾ ಕರ್ಕಿಹಳ್ಳಿ

Leave a Reply

error: Content is protected !!