Conscious Mind : ನಿಮ್ಮ ಮನಸ್ಸಿನ ಕೇಂದ್ರೀಕೃತಕ್ಕೆ ಇಲ್ಲಿದೆ ಪರಿಹಾರ, ತಪ್ಪದೇ ಇದನ್ನು ಓದಿ…

You are currently viewing Conscious Mind : ನಿಮ್ಮ ಮನಸ್ಸಿನ ಕೇಂದ್ರೀಕೃತಕ್ಕೆ ಇಲ್ಲಿದೆ ಪರಿಹಾರ, ತಪ್ಪದೇ ಇದನ್ನು ಓದಿ…

ನೆನಪಿಡಲು ಯೋಗ್ಯವಾದ ವಿಚಾರಗಳು

1. ಒಳ್ಳೆಯದನ್ನು ಯೋಚಿಸಿದರೆ ಒಳ್ಳೆಯದಾಗುತ್ತದೆ. ಕೆಟ್ಟದ್ದನ್ನು ಯೋಚಿಸಿದರೆ, ಕೆಟ್ಟದ್ದಾಗುತ್ತದೆ. ನೀವು ದಿನನಿತ್ಯ ಏನನ್ನು ಯೋಚಿಸುತ್ತೀರೋ ಅದೇ ಆಗುತ್ತೀರಿ.

2. ನಿಮ್ಮ ಸುಪ್ತಪ್ರಜ್ಞೆಯ ಮನಸ್ಸು ನಿಮ್ಮೊಂದಿಗೆ ವಾದಕ್ಕಿಳಿಯುವುದಿಲ್ಲ. ಅದು ನಿಮ್ಮ ಪ್ರಜ್ಞಾಮನಸ್ಸಿನ ಆದೇಶವನ್ನು ಮರುಮಾತಿಲ್ಲದೆ ಒಪ್ಪಿಕೊಳ್ಳುತ್ತದೆ.ನಿಮ್ಮ ಮನಸ್ಸು ಹೇಗೆ ಕೆಲಸ ಮಾಡುತ್ತದೆ. ನೀವು ಹೇಳುತ್ತೀರಿ, “ನನಗೆ ಇದರ ಖರ್ಚು ನಿಭಾಯಿಸಲು ಸಾಧ್ಯವಾಗದು”, ಎಂದಾಗ ನಿಮ್ಮ ಸುಪ್ತಪ್ರಜ್ಞೆ ಅದನ್ನು ನಿಜವಾಗಿಸಲು ಕೆಲಸ ಮಾಡುತ್ತದೆ. ಬೇರೆ ಒಳ್ಳೆಯ ವಿಚಾರ ಆಯ್ದುಕೊಳ್ಳಿ. ಹೀಗೆ ಆದೇಶ ಕೊಡಿ, “ನಾನು ಇದನ್ನು ಖರೀದಿಸುತ್ತೇನೆ. ಇದನ್ನು ನಾನು ನನ್ನ ಮನಸ್ಸಿನಲ್ಲಿ ಸ್ವೀಕರಿಸುತ್ತೇನೆ.”

3. ನಿಮ್ಮ ಬಳಿ ಆಯ್ಕೆ ಮಾಡುವ ಶಕ್ತಿ ಇದೆ. ಆರೋಗ್ಯ ಮತ್ತು ಆನಂದವನ್ನು ಆಯ್ಕೆ ಮಾಡಿ, ನೀವು ಗೆಳೆತನ ಅಥವಾ ಶತ್ರುತ್ವವನ್ನು ಆಯ್ದುಕೊಳ್ಳಲು ಸಾಧ್ಯ. ಸಹಯೋಗ. ಆನಂದ, ಗೆಳೆತನ, ಪ್ರೀತಿಸಲು ಯೋಗ್ಯರೆನಿಸಿದವರನ್ನು ಆಯ್ಕೆ ಮಾಡಲು ಸಾಧ್ಯ. ಆಗ ಇಡೀ ಜಗತ್ತು ಪ್ರತಿಕ್ರಿಯಿಸುತ್ತದೆ. ಅದ್ಭುತ ವ್ಯಕ್ತಿತ್ವವನ್ನು ವಿಕಸನಗೊಳಿಸಲು ಇದೊಂದು ಅತ್ಯುತ್ತಮ ವಿಧಾನ.

4. ನಿಮ್ಮ ಪ್ರಜ್ಞಾ ಮನಸ್ಸು “ದ್ವಾರ ಪಾಲಕನಂತಿರುತ್ತದೆ. ಅದರ ಪ್ರಮುಖ ಕೆಲಸವೆಂದರೆ ಸುಳ್ಳು ಪ್ರಭಾವದಿಂದ ನಿಮ್ಮ ಸುಪ್ತಪ್ರಜ್ಞಾ ಮನಸ್ಸನ್ನು ರಕ್ಷಿಸುವುದು. ಯಾವುದೇ ಒಳ್ಳೆಯ ವಿಷಯ ಆಗಲಿದೆ ಮತ್ತು ಆಗುತ್ತಿದೆ ಎಂದು ವಿಶ್ವಾಸ ಪಡಲು ಆರಿಸಿಕೊಳ್ಳಿ. ಆಯ್ಕೆಯ ಕ್ಷಮತೆ ನಿಮ್ಮ ಅತ್ಯಂತ ದೊಡ್ಡ ಶಕ್ತಿ ಎನ್ನಬಹುದು. ಆನಂದ ಮತ್ತು ಸಮೃದ್ಧಿಯ ಆಯ್ಕೆ ಮಾಡಿಕೊಳ್ಳಿ.

5. ಬೇರೆಯವರ ಸೂಚನೆ ಮತ್ತು ಮಾತಿನಿಂದ ನಿಮಗೆ ಸ್ವಲ್ಪವೂ ನೋವಾಗದಂತೆ ಮಾಡುವ ಶಕ್ತಿ ಅವುಗಳಲ್ಲಿರುವುದಿಲ್ಲ. ಏಕಮಾತ್ರ ಶಕ್ತಿ ನಿಮಗೆ ನಿಮ್ಮ ವಿಚಾರದಲ್ಲೇ ಇರುತ್ತದೆ. ನೀವು ಬೇರೆಯವರ ವಿಚಾರ ಅಥವಾ ಸಲಹೆಯನ್ನು ಸ್ವೀಕರಿಸಲೊಲ್ಲೆ ಎಂದು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಒಳ್ಳೆಯ ವಿಚಾರಗಳನ್ನು ದೃಢತೆಯಿಂದ ಹೇಳಿಕೊಳ್ಳಬಹುದು. ನೀವು ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ಆಯ್ದುಕೊಳ್ಳುವ ಶಕ್ತಿ ನಿಮ್ಮಲ್ಲಿದೆ.

6. ನೀವು ಬಳಸುವ ಶಬ್ದಗಳ ಬಗ್ಗೆ ಎಚ್ಚರ ವಹಿಸಿ, ನೀವು ಪ್ರತಿಯೊಂದು ನಿಜವಾದ ಶಬ್ದದ ಕಾರಣ ಕೊಡುವುದಿದೆ. ಹೀಗೆ ಹೇಳದಿರಿ, “ನಾನು ವಿಫಲನಾಗುವೆ; ನನ್ನ ಕೆಲಸ ಹೊರಟು ಹೋಗಬಹುದು; ನಾನು ಬಾಡಿಗೆಯನ್ನು ತೀರಿಸಲು ಸಾಧ್ಯವಾಗದು. ನಿಮ್ಮ ಸುಪ್ತಪ್ರಜ್ಞೆ ಹಾಸ್ಯವನ್ನು ತಿಳಿಯುವುದಿಲ್ಲ. ಅದು ಈ ವಿಷಯಗಳನ್ನು ವಾಸ್ತವದಲ್ಲಿ ಬದಲಾಯಿಸಿಬಿಡುತ್ತದೆ.

7. ನಿಮ್ಮ ಮನಸ್ಸು ಕೆಟ್ಟದ್ದಲ್ಲ. ಪ್ರಕೃತಿಯ ಯಾವುದೇ ಶಕ್ತಿ ಕೆಟ್ಟದ್ದಲ್ಲ. ನೀವು ಪ್ರಕೃತಿಯ ಶಕ್ತಿಯನ್ನು ಹೇಗೆ ಬಳಸುತ್ತೀರಿ ಎಂಬುದರ ಮೇಲೆ ಅದು ಅವಲಂಬಿಸಿರುತ್ತದೆ. ನಿಮ್ಮ ಮನಸ್ಸಿನ ಶಕ್ತಿಯನ್ನು ಎಲ್ಲಾ ಕಡೆಯಲ್ಲೂ ಪ್ರತಿಯೊಬ್ಬ ವ್ಯಕ್ತಿಗೂ ವರಪ್ರದಾನ ಮಾಡಲು, ಉಪಚರಿಸಲು ಮತ್ತು ಪ್ರೇರಣೆ ನೀಡಲು ಬಳಸಿ.

8. “ನಾನು ಮಾಡಲು ಸಾಧ್ಯವಿಲ್ಲ”, ಎಂದು ಯಾವತ್ತೂ ಹೇಳಬೇಡಿ. ಈ ವಾಕ್ಯದ ಜಾಗದಲ್ಲಿ ಮುಂದೆ ಹೇಳುವ ವಾಕ್ಯವನ್ನು ಇರಿಸಿ, ಈ ಭಯವನ್ನು ವಾಟೆ, “ನಾನು ನನ್ನ ಸುಪ್ತ ಪ್ರಜ್ಞಾ ಮನಸ್ಸಿನ ಶಕ್ತಿಯಿಂದ ಯಾವುದೇ ಕಲಸವನ್ನು ಮಾಡಲು ಸಿದ್ದನಿದ್ದೇನೆ.”

9. ಹೆದರಿಕೆ, ಅಜ್ಞಾನ ಮತ್ತು ಅಂಧ ವಿಶ್ವಾಸಗಳ ಬದಲು ಶಾಶ್ವತವಾದ ಸತ್ಯ ಮತ್ತು ಜೀವನದ ಸಿದ್ಧಾಂತಗಳ ದೃಷ್ಟಿಕೋನದಿಂದ ಯೋಚಿಸಲು ಶುರು ಮಾಡಿ, ಬೇರೆಯವರಿಗೆ ನಿಮ್ಮ ಬಗ್ಗೆ ಯೋಚಿಸಲು ಅವಕಾಶ ನೀಡಬೇಡಿ, ನಿಮ್ಮ ವಿಚಾರಗಳನ್ನು ಸ್ವತಃ ಆರಿಸಿಕೊಳ್ಳಿ ಮತ್ತು ನಿಮ್ಮ ನಿರ್ಣಯಗಳನ್ನು ನವ ಮಾಡಿ.

10. ನೀವು ನಿಮ್ಮ ಆತ್ಮದ(ಸುಪ್ತಪ್ರಜ್ಞೆಯ) ಕಪ್ತಾನರಿದ್ದೀರಿ ಮತ್ತು ನಿಮ್ಮ ಅದೃಷ್ಟದ ಮಾಲೀಕರಿದ್ದೀರಿ. ನೆನಪಿರಲಿ, ನಿಮ್ಮಲ್ಲಿ ಆಯ್ಕೆ ಮಾಡುವ ಶಕ್ತಿ ಇದೆ. ಬದುಕನ್ನು ಆರಿಸಿಕೊಳ್ಳಿ! ಪ್ರೇಮವನ್ನು ಆಯ್ದುಕೊಳ್ಳಿ! ಆರೋಗ್ಯವನ್ನು ಆಯ್ಕೆ ಮಾಡಿ! ಆನಂದವನ್ನು ಆರಿಸಿ!

II. ನಿಮ್ಮ ಪ್ರಜ್ಞಾ ಮನಸ್ಸು ಯಾವುದನ್ನು ಸತ್ಯವೆಂದು ತಿಳಿಯುತ್ತದೋ, ನಿಮ್ಮ ಸುಪ್ತಪ್ರಜ್ಞಾ ಮನಸ್ಸು ಅದನ್ನು ಸ್ವೀಕರಿಸುತ್ತದೆ ಮತ್ತು ಅದನ್ನು ವಾಸ್ತವವಾಗಿಸುತ್ತದೆ.

ಪುಸ್ತಕದ ಹೆಸರು : ನಿಮ್ಮ ಸುಪ್ತಪ್ರಜ್ಞಾ ಮನಸ್ಸಿನ ಶಕ್ತಿ

ಲೇಖಕರು : ಡಾ. ಜೋಸೆಫ್‌ ಮರ್ಫಿ

ಅನುವಾದಕರು : ಡಾ. ಶಿವಾನಂದ ಬೇಕಲ್‌

Leave a Reply

error: Content is protected !!