ಗಾಂಧೀಜಿಯವರ ತತ್ವ ಹಾಗೂ ಆದರ್ಶಗಳನ್ನು ಮೈಗಡಿಸಿಕೊಳ್ಳೋಣ,

You are currently viewing ಗಾಂಧೀಜಿಯವರ ತತ್ವ ಹಾಗೂ ಆದರ್ಶಗಳನ್ನು ಮೈಗಡಿಸಿಕೊಳ್ಳೋಣ,

ಗಾಂಧೀಜಿಯವರ ತತ್ವ ಹಾಗೂ ಆದರ್ಶಗಳನ್ನೂ ಮೈಗೊಡಿಸಿಗೊಳ್ಳೋಣ.
ನರೇಗಲ್ಲ : ಪಟ್ಟಣದ ಶ್ರೀ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಜಯಂತಿ ಆಚರಣೆ ಮಾಡಲಾಯಿತು‌‌.
ಮುಖ್ಯೋಪಾದ್ಯಾಯನಿಯರಾದ ಶ್ರೀಮತಿ ಬಿ ಜಿ ಶಿರ್ಶಿ ಅವರು ಗಾಂಧೀಜಿಯವರ ಭಾವಚಿತ್ರ ಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ಗಾಂಧೀಜಿಯವರ ಕೇವಲ ಸ್ವಾತಂತ್ರ್ಯ ಕ್ಕಾಗಿ ಹೋರಾಡಿದವರಲ್ಲ ಸಮಾಜದಲ್ಲಿ ಸಮಾನತೆಗಾಗಿ ಹೋರಾಡಿದವರು. ಗಾಂಧೀಜಿಯವರು ಶಾಂತಿ, ಅಹಿಂಸೆಯಿಂದ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಹೀಗಾಗಿ ಕೇವಲ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿದರೆ ಸಾಲದು ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮಕ್ಕಳು ಹಾಡು ಮತ್ತು ಭಾಷಣ ಮಾಡಿ ಗಮನ ಸೆಳೆದರು.
ಈ ವೇಳೆ ಶಿಕ್ಷಕಿಯರಾದ ಎಸ್ ವಿ ಹಿರೇಮಠ,ವ್ಹಿ ಪಿ ಗ್ರಾಮಪೂರೋಹಿತ,ಎಸ್ ಕೆ ಕುಲಕರ್ಣಿ, ಶ್ರೀ ಎಮ್ ವೀ ಕಡೆತೋಟದ, ಶ್ರೀಮತಿ ವಿ ಎಸ್ ಜಾದವ್,ಎಸ್ ಎಚ್ ಮಾನ್ವಿ, ಶ್ರೀ ಕೆ ಆಯ್ ಕೋಳಿವಾಡ, ಆಯ್ ಬಿ ಒಂಟೇಲಿ, ಶ್ರೀ ಮತಿ ಎನ್ ಜೆ ಸಂಗನಾಳ,ಜೆ ವಿ ಕೆರಿಯವರ್ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.

Leave a Reply

error: Content is protected !!