ಗಂಗಾವತಿ : ನಗರದ ಕಿಲ್ಲಾ ಏರಿಯಾದ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಎರಡು ಸಮುದಾಯದ ಕೆಲ ಯುವಕರು ಹಿರಿಯ ಪೊಲೀಸ್ ಪೇದೆಯಾದ ಮರಿಯಪ್ಪ ಅವರಿಗೆ ಸ್ವತ ತಾವೇ ಎತ್ತಿಕೊಂಡು ಕುಣಿದಿದ್ದಾರೆ. ಇದೇ ವಿಚಾರವಾಗಿ ಕೆಲ ಯುವಕರು ಎತ್ತಿಕೊಂಡು ಕುಣಿದಿದ್ದ ವಿಡಿಯೋವನ್ನೂ ಚಿತ್ರೀಕರಿಸಿ ಇಲ್ಲಸಲ್ಲದ ಆರೋಪ ಮಾಡಿ. ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಹಿರಿಯ ಪೊಲೀಸ್ ಪೇದೆಯಾದ ಮರಿಯಪ್ಪ ಅವರು ಎಷ್ಟೇ ಮನವಿ ಮಾಡಿದ್ರು ಕೇಳದೆ ಬಲವಂತವಾಗಿ ಸಂತೋಷ ವ್ಯಕ್ತಪಡಿಸಿ. ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಎತ್ತಿಕೊಂಡು ಕುಣಿದಾಡಿದ್ದಾರೆ.
ಕಿಲ್ಲಾ ಎರಿಯಾ ಗಣೇಶ ವಿಸರ್ಜನೆ ವೇಳೆಯಲ್ಲಿ ಅಲ್ಲಿಯ ಸ್ನೇಹಿತರು. ತಾವೆ ಎತ್ತಿಕೊಂಡು ಕುಣಿದಾಡಿದ್ದಾರೆ. ಈ ಗಣೇಶ ವಿಷಯವಾಗಿದ್ದು ಇದರಲ್ಲಿ ಕಿಲ್ಲಾ ಎರಿಯಾದ ಮುಸ್ಲಿಂ ಸಹೋದರರು ಸಹ ಭಾಗಿಯಾಗಿ ಕುಣಿದಾಡಿದ್ದಾರೆ. ಅಲ್ಲದೆ ವಾರ್ಡಿನ ಕೌನ್ಸಿಲರ್ ಜಬ್ಬರ್ ಇದರ ನೇತೃತ್ವವನ್ನು ವಹಿಸಿದ್ದು ಅನ್ನ ಸಂತರ್ಪಣೆಯ ಕಾರ್ಯಕ್ರಮದಲ್ಲಿಯೂ ಸಹ ಮುಸ್ಲಿಂ ಮುಖಂಡರು ಹಾಗೂ ಕಿಲ್ಲಾ ಏರಿಯಾದ ಎಲ್ಲಾ ಯುವಕರು ಮುಂದಾಳತ್ವ ವಹಿಸಿ ವಿಜೃಂಭಣೆಯಿಂದ ಕಳಿಸಿಕೊಟ್ಟಿದ್ದಾರೆ. ಎಂದು ಗಂಗಾವತಿ ನಗರ ಠಾಣೆಯ ಹಿರಿಯ ಪೊಲೀಸ್ ಪೇದೆಯಾದ ಮರಿಯಪ್ಪ ಅವರು ಹೇಳಿಕೆ ನೀಡಿದ್ದಾರೆ. ನಗರ ಠಾಣೆಯ ಹಿರಿಯ ಪೊಲೀಸ್ ಪೇದೆ ಮರಿಯಪ್ಪ ಅವರ ಮೇಲೆ ಯಾವುದೆ ಕಾನೂನು ಕ್ರಮ ಜರುಗಿಸಿದಂತೆ ಸ್ಥಳೀಯ ಮುಖಂಡರು ಹಿರಿಯ ಅಧಿಕಾರಿಗಳಿಗೆ ಮಾಧ್ಯಮದ ಮುಖಾಂತರ ಮನವಿ ಮಾಡಿದ್ದಾರೆ.