BREAKING : ಮುರಾರ್ಜಿ ವಸತಿ ಶಾಲೆಯಲ್ಲಿ ಅವ್ಯವಸ್ಥೆ : ಕಳಪೆ ಗುಣಮಟ್ಟದ ಊಟ, ಬೇಸತ್ತ ಮಕ್ಕಳು!!

You are currently viewing BREAKING : ಮುರಾರ್ಜಿ ವಸತಿ ಶಾಲೆಯಲ್ಲಿ ಅವ್ಯವಸ್ಥೆ : ಕಳಪೆ ಗುಣಮಟ್ಟದ ಊಟ, ಬೇಸತ್ತ ಮಕ್ಕಳು!!

ಕಾರಟಗಿ : ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ-ಜಮಾಪುರದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಕ್ರೈಸ್ ಅಡಿಯಲ್ಲಿ ನಡೆಯುತ್ತಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪದವಿಪೂರ್ವ ವಿಭಾಗದಲ್ಲಿನ ವಿದ್ಯಾರ್ಥಿಗಳಿಗೆ ಸುಮಾರು ಎರಡು ತಿಂಗಳಿನಿಂದ ದಿನನಿತ್ಯ ಟಿಫನ್ ಹಾಗೂ ಊಟದಲ್ಲಿ ಹುಳಗಳು ಬರುತ್ತವೆ ಆ ಹುಳಗಳಿಂದ ಕೂಡಿದ ಆಹಾರವನ್ನೇ ಎಲ್ಲ ವಿದ್ಯಾರ್ಥಿಗಳು ಊಟ ಮಾಡುವ ಅನಿವಾರ್ಯತೆಯನ್ನು ಅಲ್ಲಿನ ಪ್ರಾಚಾರ್ಯರು ನಿರ್ಮಾಣ ಮಾಡಿದ್ದಾರೆ, ಹುಳಗಳು ಇರುವ ವಿಚಾರ ಇಲಾಖೆಯ ಗಮನಕ್ಕೆ ಇದ್ದರೂ ಮೌನ ವಹಿಸುವುದರ ಮೂಲಕ ದಲಿತ ಸಮುದಾಯದ ವಿದ್ಯಾರ್ಥಿಗಳಿಗೆ ಕಳೆಪೆ ಆಹಾರ ಕೊಡುವುದರ ಮೂಲಕ ಕೇವಲ ಜೀವಂತವಾಗಿರಲು ಮಾತ್ರ ಊಟ ಮಾಡಬೇಕಾಗಿದೆ.


ಈ ಪರಿ ವಿದ್ಯಾರ್ಥಿ ವಿರೋಧಿ ನೀತಿಯನ್ನು ಖಂಡಿಸಿ ಎರಡು ದಿನಗಳ ಕಾಲ ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಸಂಘಟನೆಯ ನಿಯೋಗ ವಿದ್ಯಾರ್ಥಿಗಳ ಜೊತೆ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಹೋರಾಟ ಮಾಡಲಾಗಿದೆ ಹಾಗೂ ಸಂಬಂಧಿಸಿದ ಜಿಲ್ಲಾ ಹಂತದ ಅಧಿಕಾರಿಗಳ ಗಮನಕ್ಕೆ ತಂದರು ಜಾಣ ಮೌನ ವಹಿಸಿತವುದನ್ನು SFI ಸಂಘಟನೆ ಖಂಡಿಸುತ್ತದೆ.

ಈ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಇಲ್ಲಿವರಿಗೆ ಹೇರ್ ಕಟಿಂಗ್ ಮಾಡಿಸಿರಿವುದಿಲ್ಲ, ಕಿಟ್ ವಿತರಣೆ ಮಾಡಿಲ್ಲ, ಇಲ್ಲಿನ ವಿದ್ಯಾರ್ಥಿಗಳಿಗೆ ಸ್ನಾನ ಮಾಡಲು ಬಕೆಟ್‌ ಸಹ ನೀಡಿಲ್ಲ, ಇನ್ನೂ ಊಟ ಮಾಡಲು ಬೇಕಾದ ಪ್ಲೇಟ್ ಅನ್ನು ವಿದ್ಯಾರ್ಥಿಗಳು ಮನೆಯಿಂದ ತಂದಿದ್ದಾರೆ ವಿದ್ಯಾರ್ಥಿಗಳಿಗೆ ಬೇಕಾದ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಸಮಾಜ ಕಲ್ಯಾಣ ಇಲಾಖೆ ಒದಗಿಸುವಲ್ಲಿ ಸಂಪೂರ್ಣವಾಗಿ ವಿಪುಲವಾಗಿದೆ, ವಿದ್ಯಾರ್ಥಿಗಳಿಗೆ ಬೇಡ್,ಕಾಟ್, ಸ್ಲಿಪ್ಪರ್ ಸ್ಟ್ಯಾಂಡ್, ಶೂ, ಸಾಕ್ಸು, ಓದಲು ಬೇಕಾದ ದಿನಪತ್ರಿಕೆಗಳು, ಮ್ಯಾಗ್ಜಿನ ಇವು ಯಾವು ಕೂಡ ಈ‌ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಕೊಡುತ್ತಿಲ್ಲ ಹಾಗಾದರೆ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯಿಂದ ವಸತಿ ಹೋಯಿತು ಸೌಲಭ್ಯಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿರುವ ಹಣ ಎಲ್ಲಿ ಹೋಲುತ್ತದೆ.

SFI ಸಂಘಟನೆ ನಿಯೋಗ ಸಮಸ್ಯೆ ಪರಿಹಾರ ಮಾಡಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಇಲ್ಲದ್ದಿರೆ ಸಂಘಟನೆವತಿಯಿಂದ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಹೇಳಲಾಯಿತ್ತು ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಅಮರೇಶ ಕಡಗದ, ತಾಲೂಕ ಕಾರ್ಯದರ್ಶಿ ಶಿವಕುಮಾರ, ಪ್ರಮುಖರಾದ ಮೌನೇಶ, ರಾಜಭಕ್ಷಿ, ಪ್ರಶಾಂತ, ಶಂಕರ ಇತರರು ಇದ್ದರು.

Leave a Reply

error: Content is protected !!