LOCAL NEWS : ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರಿಗೆ ಸರ್ಕಾರದ ಸಹಾಯ ಹಸ್ತ ಅಗತ್ಯ : ಸುನೀಲ್ ಕುಮಾರ್ ಮಠದ

You are currently viewing LOCAL NEWS : ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರಿಗೆ ಸರ್ಕಾರದ ಸಹಾಯ ಹಸ್ತ ಅಗತ್ಯ : ಸುನೀಲ್ ಕುಮಾರ್ ಮಠದ

ಕುಕನೂರು : ಮೂಲಭೂತ ಸೌಕರ್ಯದಿಂದ ವಂಚಿತರಾಗಿರುವ ರಾಜ್ಯದ ಪತ್ರಕರ್ತರ ಪರವಾಗಿ ನಾಡಿನ ಕರ್ನಾಟಕ ಕಾರ್ಯನಿರತ ಪತ್ರಕರ್ತ ಧ್ವನಿ ಸಂಘದ ಕುಕನೂರು ತಾಲೂಕು ಘಟಕದ ಸದಸ್ಯರು ರಕ್ತದಿಂದ ಸಹಿ ಮಾಡಿರುವ ಬಹಿರಂಗ ಪತ್ರವನ್ನು ಸಿಎಂ ಸಿದ್ದರಾಮಯ್ಯ ನವರಿಗೆ ಇಂದು ಕುಕನೂರು ತಹಶೀಲ್ದಾರ್ ಮುಖಾಂತರ ಬಹಿರಂಗ ಪತ್ರದ ಮನವಿ ಸಲ್ಲಿಸಲಾಯಿತು.

ಈ ವೇಳೆಯಲ್ಲಿ ಮಾತನಾಡಿದ ಕಾನಿಪ ಧ್ವನಿ ಅಧ್ಯಕ್ಷ ಸುನೀಲ್ ಕುಮಾರ್ ಮಠದ, “ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯದ ಪತ್ರಕರ್ತರಿಗೆ ಕನಿಷ್ಠ ಮೂಲಭೂತ ಸೌಲಭ್ಯ ಇಲ್ಲದಿರುವುದು ವಿಪರ್ಯಾಸ, ಹಾಗಾಗಿ ಈ ಕೂಡಲೇ ಎಲ್ಲ ಪತ್ರಕರ್ತರಿಗೆ ಸರ್ಕಾರದಿಂದ ವಿಶೇಷ ಯೋಜನೆಗಳನ್ನು ರೂಪಿಸಿ ಅವರ ಜೀವನಕ್ಕೆ ಸರ್ಕಾರದ ಸಹಾಯ ಹಸ್ತ ಚಾಚಬೇಕು” ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರವೀಂದ್ರ ತೋಟದ, ವಿರೇಶ್ ಹಿರೇಮಠ, ನಿಂಗರಾಜ್, ಮಹೇಶ್ ಕಲ್ಮನಿ, ರಮೇಶ್, ಲೋಕೇಶ್, ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.

ಬಹಿರಂಗ ಪತ್ರದ ಜೊತೆಗೆ ಕೆಲ ಪ್ರಮುಖ ಮನವಿಗಳು.

ಮಾದ್ಯಮ ರಾಮಯ್ಯ:- ಸ್ವಾತಂತ್ರ ದೊರೆತು 77ನೇ ವರ್ಷಕ್ಕೆ ಸಾಗುತ್ತಿರುವ ಈ ಸಂದರ್ಭದಲ್ಲಿ ಇದವರೆಗೂ ನಾಡಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಹುತೇಕ ಅಂದರೆ 90% ಪತ್ರಕರ್ತರಿಗೆ ಮೂಲಭೂತ ಸೌಕರ್ಯಗಳು ಸರ್ಕಾರದಿಂದ ಹಾಗೂ ಪತ್ರಿಕೆ ನಡೆಸುವ ಬಂಡವಾಳ ಶಾಹಿಗಳಿಂದ ಮರೀಚಿಕೆಯಾಗಿರುವುದು ನೋವಿನ ಸಂಗತಿ. ಹಗಲು-ರಾತ್ರಿಯೆನ್ನದೆ ಸರ್ಕಾರ ಹಾಗೂ ಸಾರ್ವಜನಿಕರ ಮಧ್ಯ ಸಂಪರ್ಕ ಸೇತುವೆಯ ಜೊತೆಗೆ ಪ್ರಾಣದ ಹಂಗನ್ನು ತೊರೆದು ಭ್ರಷ್ಟಚಾರಗಳನ್ನು ಬಯಲಿಗಳೆಯುವುದಲ್ಲಿ ಪತ್ರಕರ್ತನ ಪಾತ್ರ ಪ್ರಮುಖವಾಗಿದ್ದರೂ ಸಹ ತುತ್ತಿನ ಚೀಲ ತುಂಬಿಸಿಕೊಳ್ಳುವುದಕ್ಕೂ ಪತ್ರಕರ್ತರು ಪರದಾಡುತ್ತಿರುವುದು ವಿಷಾದಕರ. ಸರ್ಕಾರದ ಕೈಯಲ್ಲಿರುವ ಕಾರ್ಮಿಕ ಇಲಾಖೆಯು ಕೂಡ ಇದ್ದು ಇಲ್ಲ್ಲದಂತಾಗಿರುವ ಪರಿಸ್ಥಿತಿಯನ್ನು ವರದಿಗಾರರು ಪ್ರಸ್ತುತ ರಾಜ್ಯದಲ್ಲಿ ಅನುಭವಿಸುತ್ತಿದ್ದಾರೆ. ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ 800 ಪತ್ರಿಕೆಗಳು ಇದುವರೆಗೂ ಕಾರ್ಮಿಕ ಇಲಾಖೆಯಡಿಗೆ ಒಳಪಡದೆ ನೊಂದಣಿಯಾಗದೇ ಆಯಾ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸುತ್ತಿರುವ (ವರದಿಗಾರರಿಗೆ) ಕಾರ್ಮಿಕರಿಗೆ PF, E.S.I, ಪೇಸ್ಲಿಫ್, ವಾರದ ರಜೆ, ಮೀಡಿಯಾ ಕಿಟ್ ಹಾಗೂ ಇನ್ನೀತರ ಸೌಲಭ್ಯಗಳಿಂದ ಇಂದಿನವರೆಗೂ ವಂಚಿತರಾಗಿರುವುದಕ್ಕೆ ಸರ್ಕಾರದ ಮೃದು ದೊರಣೆಯೇ ಈ ಸ್ಥಿತಿಗೆ ಕಾರಣ. ಇನ್ನೂ ಮುಂದಾದರೂ ಸರ್ಕಾರ ಎಚ್ಚುತ್ತು ಕೊಂಡು ಪತ್ರಿಕೆ ನಡೆಸುವ ಬಂಡವಾಳಶಾಹಿಗಳ ಮೇಲೆ ಕಠಿಣ ನಿಲುವನ್ನು ತಾಳಿ ಕಾರ್ಮಿಕ ಇಲಾಖೆಗೆ ನೊಂದಣಿಯಾಗುವಂತೆ ಕ್ರಮ ಕೈಗೊಂಡರೆ ನಾಡಿನ 10 ಸಾವಿರ ಮೇಲ್ಪಟ್ಟು ವರದಿಗಾರರ ಜೀವನ ಹಸನಾಗುವುದರ ಜೊತಗೆ ಪ್ರತಿಯೊಬ್ಬ ವರದಿಗಾರರ ಕುಟುಂಬದಲ್ಲಿ ಮಂದಹಾಸ ಜೊತೆಗೆ ತಮ್ಮನ್ನು ನಾಡಿನ ಪತ್ರಕರ್ತರು “ಮಾಧ್ಯಮ ರಾಮಯ್ಯ” ರೆಂದು ಕೊಂಡಾಡುವ ಕಾಲ ಸನ್ನಿಹಿತವಾಗಬಹುದು.

ಸಾಮಾಜಿಕ ಹರಿಕಾರ:- ಸಮಾಜದ ಕಟ್ಟೆ ಕಡೆಯ ವ್ಯಕ್ತಿಗೂ ತಮ್ಮ ಅಧಿಕಾರವಧಿಯಲ್ಲಿ ನ್ಯಾಯ ಒದಗಿಸಿರುವ ತಾವುಗಳು, 2023/24 ರ ಬಡ್ಜಟ್ ನಲ್ಲಿ 52 ಸಾವಿರ ಕೋಟಿ ರೂ ಗಳ ಹಣವನ್ನು 5 ಗ್ಯಾರೆಂಟಿಗಳಿಗೆ ಮೀಸಲಿರಿಸಿರುವ ತಾವುಗಳು ಅನೇಕ ವರ್ಷಗಳಿಂದ ಸಾರ್ವಜನಿಕರಿಗಾಗಿ ಸೇವೆ ಒದಗಿಸಲು ಉಚಿತ ಬಸ್-ಪಾಸ್ ಗಾಗಿ ಹೋರಾಟ ನಡಸುತ್ತಾ ಬಂದಿದ್ದರೂ ಕೇವಲ ಹತ್ತು ಸಾವಿರ ಮೇಲ್ಪಟ್ಟಿರುವ ಪತ್ರಕರ್ತರ ಬಗ್ಗೆ ತಮಗ್ಯಾಕೆ ಉದಾಸೀನ ಎಂಬ ಪ್ರಶ್ನೆ ಪ್ರತಿಯೊಬ್ಬ ನಾಡಿನ ಪತ್ರಕರ್ತರಲ್ಲಿ ಕಾಡುತ್ತಿದೆ. ಇನ್ನು ವಾರ್ತಾ ಇಲಾಖೆಯಂತೂ ಅಕ್ರಿಡೇಷನ್ ನೆಪದಲ್ಲಿ ತಾರತಮ್ಯ ಮಾಡುತ್ತ ಬಂಡವಾಳ ಶಾಹಿಗಳಿಗೆ ಮಣೆ ಹಾಕಿ ಮಾಲಿಕರಿಗೆ ಅವರ ಹೆಂಡತಿಗೆ ಮಕ್ಕಳಿಗೆ ಹಾಗೂ ಅಳಿಯಂದಿರಿಗೆ ಮೀಸಲಾಗಿರುವ ಅಕ್ರಿಡೇಷಿನ್ ಕಾರ್ಡ್ ಗಳು, ಕೇವಲ 400 ಜನ ವರದಿಗಾರರಿಗೆ ಮಾತ್ರ ಮಾಧ್ಯಮ ಮಾನ್ಯತಾ ಕಾರ್ಡ್ ದೊರೆತಿದೆ. ಮಾನ್ಯತೆಯಲ್ಲಿ ಖಾಯಂ ನೇಮಕಾತಿ ಆದೇಶ ಹೊಂದಿ ಪೂರ್ಣಾವಧಿಯಾಗಿ ಕಾರ್ಯ ನಿರ್ವಹಿಸುವ ಪತ್ರಕರ್ತರಿಗೆ ಮಾತ್ರ ಅಂತ ನಿಯಮವಿದ್ದರೂ ಈ ನಿಯಮವನ್ನು ಪ್ರಸ್ತುತ ಗಾಳಿಗೆ ತೂರಿ ಖಾಯಂ ನೇಮಕಾತಿ ಆದೇಶ ವಿಲ್ಲದಂತವರಿಗೆ ಅಕ್ರಿಡೇಷನ್ ಒದಗಿಸಿರುವುದು ಅಕ್ಷಯ್ಯ ಅಪರಾಧ. ಖಾಯಂ ನೇಮಕಾತಿ ಆದೇಶ ನೀಡದೇ ವಂಚಿಸುವ ಬಂಡವಾಳಶಾಹಿಗಳು ಮುಂದಿನ ಮಾಸಾಶನಕ್ಕೂ ಇದು ಪತ್ರಕರ್ತರಿಗೆ ಮಾರಕವಾಗಿದ್ದರಿಂದ ಇಂದು ಕೇವಲ 178 ಜನ ಪತ್ರಕರ್ತರು ಮಾತ್ರ ಮಾಸಾಶನ ಪಡೆಯುತ್ತಿದ್ದಾರೆ.

ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಮನವಿ

1.ಸರ್ಕಾರ ಹಾಗೂ ಸಾರ್ವಜನಿಕರ ಮಧ್ಯ ಸಂಪರ್ಕ ಸೇತುವೆಯಾಗಿ ಪ್ರಾಣದ ಹಂಗನ್ನು ತೊರೆದು ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ಪತ್ರಕರ್ತರುಗಳಿಗೆ ಸರ್ಕಾರ ಪತ್ರಕರ್ತರ ರಕ್ಷಣಾ ಕಾಯ್ದೆ ಶೀಘ್ರ ಜಾರಿಗೊಳಿಸಬೇಕು.

 

2.ವಾರ್ತಾ ಇಲಾಖೆಯಲ್ಲಿ ಖಾಲಿ ಇರುವ 3೦೦ ಕ್ಕೂ ಅಧಿಕ ಸಿಬ್ಬಂದಿಯವರನ್ನು ಸರ್ಕಾರ ಕೂಡಲೇ ನೇಮಕಗೊಳಿಸಿ ಪತ್ರಕರ್ತರ ಕಾರ್ಯಗಳನ್ನು ತ್ವರಿತವಾಗಿ ಆಗುವಂತೆ ಕ್ರಮ ವಹಿಸಬೇಕು.

3. ಅಕ್ರಿಡೇಟ್ ಹಾಗೂ ನಾನ್ ಅಕ್ರಿಡೇಟ್ ಜರ್ನಲಿಸ್ಟ್ ಎನ್ನುವ ತಾರತಮ್ಯವನ್ನು ಸರ್ಕಾರ ಈ ಕೂಡಲೇ ಕೈ ಬಿಡಬೇಕು:- ಸರ್ಕಾರ ವಾರ್ತಾ ಇಲಾಖೆ ಮೂಲಕ KSRTC ನಿಗಮದಿಂದ ಅಕ್ರಿಡೇಟ್ ಜರ್ನಲಿಸ್ಟ್ ಗಳಿಗೆ ಮಾತ್ರ ಉಚಿತ ಬಸ್ ಪಾಸ್ ರಾಜ್ಯಾಧ್ಯಂತ ಓಡಾಡಲು ಅವಕಾಶ ಕಲ್ಪಿಸಿಕೊಟ್ಟರೆ ಅದೇ ರೀತಿ ನಾನ್- ಅಕ್ರಿಡೇಟ್ ಜರ್ನಲಿಸ್ಟ್ ಗಳಿಗೆ (ಅಂದರೆ ಆರ್.ಎನ್.ಐ. ಹೊಂದಿರುವಂತ ಪತ್ರಕರ್ತರುಗಳಿಗೆ) ಬಿ.ಎಂ.ಟಿ.ಸಿ. ಕಾರ್ಪೋರೇಷನ್ ವತಿಯಿಂದ ವರ್ಷಕ್ಕೆ 6೦೦ ರೂ ಗಳನ್ನು ಪಾವತಿಸಿದರೆ ವರ್ಷ ಪೂರ್ತಿ ಬಿ.ಎಂ.ಟಿ.ಸಿ ಯಲ್ಲಿ ಪತ್ರಕರ್ತರಿಗೆ ಓಡಾಡಲು ಅವಕಾಶ ಕಲ್ಪಿಸಿದ್ದು ತಾರತಮ್ಯಕ್ಕೊಂದು ಸ್ಪಷ್ಟ ಪುರಾವೆಯಂತಿದೆ. ಈ ರೀತಿಯಾಗಿ ಸರ್ಕಾರ ಅಕ್ರಿಡೇಟ್ ಹಾಗೂ ನಾನ್ ಅಕ್ರಿಡೇಟ್ ಅಂತ ತಾರತಮ್ಯ ಪತ್ರಕರ್ತರಲ್ಲಿ ಮೂಡಿಸಿರುವುದು ಕಾನೂನು ಬಾಹಿರವಾಗಿರುವ ಹಿನ್ನೆಲೆಯಲ್ಲಿ ಇದನ್ನು ಕೂಡಲೇ ಸರಿಪಡಿಸ ಬೇಕು.

4. ಇನ್ನೂ ಸಂಕಷ್ಟದಲ್ಲಿರುವ ಪತ್ರಕರ್ತರ ಮಸಾಶನ ನಿಯಮ 7 ರಲ್ಲಿ , ವಾರ, ಪಾಕ್ಷಿಕ, ಮಾಸಿಕ ಹಾಗೂ ಇನ್ನೀತರ ಪತ್ರಿಕೆಗಳ ಪ್ರತಿನಿಧಿಗಳು ಮಾಸಾಶನ ಪಡೆಯಲು ಅರ್ಹತೆ ಹೊಂದಿರುವುದಿಲ್ಲವೆಂದು ಸ್ಪಷ್ಟವಾಗಿ ನಿಬಂಧನೆ ಹೊರಡಿಸಿರುವುದು ಕೂಡ ಕಾನೂನು ಬಾಹಿರ. ದಿನ ಪತ್ರಿಕೆಗಳ ರೀತಿಯಲ್ಲೇ ನಿಯತಕಾಲಿಕೆಗಳು ಕೂಡ Registrar of News paper India ವತಿಯಿಂದ ಪರವಾನಗೆ ಹೊಂದಿ ಪತ್ರಿಕೆಗಳನ್ನು ಹೊರತರುವ ಹಿನ್ನೆಲೆಯಲ್ಲಿ ಈ ಪತ್ರಕರ್ತರಿಗೂ ಮಾಸಾಶನ ದೊರೆಯಲೇಬೇಕು.

5. ಜಿಲ್ಲಾ ವ್ಯಾಪ್ತಿಯಲ್ಲಿರುವ ಪತ್ರಿಕಾ ಭವನಗಳನ್ನು ಯಾವೊಂದು ಪತ್ರಿಕಾ ಸಂಘಟನೆಗಳಿಗೆ ನೀಡದೆ ಆಯಾ ಜಿಲ್ಲಾಧಿಕಾರಿಗಳ ಸುಪರ್ಧಿಯಲ್ಲಿ ವಾರ್ತಾ ಇಲಾಖೆಯ ಅಧಿಕಾರಿಗಳ ಮೂಲಕ ನಿರ್ವಹಣೆಗೆ ಆದೇಶಿಸಬೇಕು.

6. ನಾಡಿನ ಪತ್ರಕರ್ತರ ಹಿತಕ್ಕಾಗಿ ಪತ್ರಕರ್ತರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು.

7. ಪತ್ರಕರ್ತರು ಕರ್ತವ್ಯ ನಿರ್ವಹಿಸುವಾಗ ಸಹಜ ಸಾವು ಹಾಗೂ ಅಪಘಾತದಿಂದ ಮೃತ ಪಟ್ಟರೆ ಆ ಪತ್ರಕರ್ತರ ಕುಟಂಬಕ್ಕೆ ಸರ್ಕಾರದಿಂದ 10 ಲಕ್ಷ ರೂಗಳ ಪರಿಹಾರ ಒದಗಿಸಬೇಕು.

8. 2018 -19 ರ ಅಯವ್ಯಯದಲ್ಲಿ ದಿನ ಪತ್ರಿಕೆ ಹಂಚುವವರ (ಪತ್ರಿಕಾ ವಿತರಕರು) ಕ್ಷೇಮಾಭಿವೃದ್ದಿಗೆ 2 ಕೋಟಿಯ ಕ್ಷೇಮನಿಧಿ ಅಂದಿನ ಸಿದ್ದರಾಮಯ್ಯ ನವರ ಸರ್ಕಾರದಲ್ಲಿ ಘೋಷಣೆಯಾಗಿದ್ದರು ಹೇಳಿಕೆಗೆ ಮಾತ್ರ ಸೀಮಿತವಾದ ಈ ನಿಧಿಯನ್ನು ಕೂಡಲೆ ಪತಿಕಾ ವಿತರಕರ ಕ್ಷೇಮಾಭಿವೃದ್ದಿಯ ಖಾತೆಗೆ ಸರ್ಕಾರ ಜಮಾವಣೆ ಮಾಡಬೇಕು.

Leave a Reply

error: Content is protected !!