LOCAL EXPRESS : ಜೀ ಕನ್ನಡ ಸ್ಟಾರ್ ಗಳಿಂದ ಅದ್ದೂರಿ ಸಂಗೀತ ಸಂಜೆ ಕಾರ್ಯಕ್ರಮ

You are currently viewing LOCAL EXPRESS : ಜೀ ಕನ್ನಡ ಸ್ಟಾರ್ ಗಳಿಂದ ಅದ್ದೂರಿ ಸಂಗೀತ ಸಂಜೆ ಕಾರ್ಯಕ್ರಮ

ಕುಕನೂರು : ಪಟ್ಟಣದ ಯಮನೂರಸ್ವಾಮಿ ಯುವಕ ಸಂಘದ ವತಿಯಿಂದ 26ನೇ ಬಾರಿಗೆ ಪ್ರತಿಷ್ಠಾಪನೆಗೊಂಡ ಗಜಾನನನೋತ್ಸವ ಪ್ರಯುಕ್ತ ಜೀ ಕನ್ನಡದ ಕಲಾವಿದರಿಂದ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಪೂಜ್ಯ ಮಹಾದೇವ ಮಹಾಸ್ವಾಮಿಗಳು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಕಲಾವಿದರಾದ ಧ್ನಾನೇಶಶ್ವರ, ಶ್ರೀನಿಧಿ ಶಾಸ್ತ್ರಿ, ಪೃಥ್ವಿಭಟ್, ಗಿಣಿರಾಮ ಧಾರಾವಾಹಿಯ ಮಹತಿ, ಕಾಮಿಡಿ ಕಿಲಾಡಿಯ ದೀಪಿಕಾಗೌಡ, ಹಾಗೂ ವಿವಿಧ ನೃತ್ಯ ಕಲಾವಿದರಿಂದ ಕಾರ್ಯಕ್ರಮಗಳು ನಡೆಯಲಿವೆ.

ಈ ಸಂದರ್ಭದಲ್ಲಿ ಸಂಘಟನೆಗಾಗಿ ದುಡಿದ ಹಾಗೂ ಸಂಘಕ್ಕೆ ಕೊಡುಗೆ ಮಹನೀಯರಿಗೆ ಗೌರವಿಸಿ ಸನ್ಮಾನಿಸಲಾಯಿತು. ನೆಚ್ಚಿನ ಕಲಾವಿದರನ್ನು ನೋಡಲು ಮಹಿಳೆಯರು ಮಕ್ಕಳು ಸೇರಿದಂತೆ ಯುವಕರ ದಂಡು ನಾನು ಮುಂದು ತಾ ಮುಂದು ಎಂದು ಮುಗಿಬಿದ್ದಿದ್ದು ಸಾಮಾನ್ಯವಾಗಿತ್ತು.

ಈ ಸಂದರ್ಭದಲ್ಲಿ ಪ್ರಮುಖರಾದ ಸಚಿನ ಆಚಾರ, ಹನಮಂತಪ್ಪ ಕಲಾಲ, ಪಟ್ಟಣ ಪಂಚಾಯತ ಮುಖ್ಯಾದಿಕಾರಿ ಸುಬ್ರಮಣ್ಯ, ಜೆಸ್ಕಾಂ ಅಧಿಕಾರಿ ಶರಣಪ್ಪ, ಹಿರಿಯರಾದ ಹಮಜಪ್ಪ ಬೆದವಟ್ಟಿ ವೀರೇಶ ಯಲಬುರ್ಗಿ, ಬಸವರಾಜ ಹಾಳಕೇರಿ, ಶಿವಯ್ಯ ಹಿರೇಮಠ, ನಾಗರಾಜ ಬೆಣಕಲ್, ಕರಬಸಯ್ಯ ಬೀನ್ನಾಳ ಹಾಗೂ ಯಾಮನೂರಸ್ವಾಮಿ ಯುವಕ ಸಂಘದ ನೂರಾರು ಯುವಕರು ಇದ್ದರು.

 

Leave a Reply

error: Content is protected !!