ಕುಕನೂರು : ಇಂದು “ಕುಕನೂರು ಬಂದ್” ಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ತಾಲೂಕು ಕೇಂದ್ರ ಸಂಪೂರ್ಣ ಸ್ತಬ್ಧವಾಗಿದೆ. ನಿನ್ನೆ ಕುಕುನೂರು ತಾಲೂಕಿನ ವಿವಿಧ ಸಂಘಟನೆಗಳಿಂದ ಕುಕನೂರು ಬಂದ್ ಗೆ ಕರೆ ನೀಡಲಾಗಿತ್ತು.
ತಾಲೂಕು ಆಡಳಿತ ಕಛೇರಿ, ತಾಲೂಕಾ ಕ್ರೀಡಾಂಗಣ, ತಾಲೂಕ ನ್ಯಾಯಾಲಯ ಸಂಕೀರ್ಣ, ಬುದ್ಧ ಬಸವ ಅಂಬೇಡ್ಕರ ಭವನ ಕಟ್ಟಡಗಳು ಕುಕನೂರು ಪಟ್ಟಣ ವ್ಯಾಪ್ತಿಯ ಸರಕಾರಿ ಜಾಗೆಯಲ್ಲಿಯೇ ನಿರ್ಮಿಸಲು ಒತ್ತಾಯಿಸಿ ಇಂದು (ಬುಧವಾರ 11-10-2023)”ಕುಕನೂರ ಬಂದ್” ಅನ್ನು ಕುಕನೂರು ತಾಲೂಕಿನ ನಾಗರಿಕರಿಂದ ಕರೆ ನೀಡಲಾಗಿದೆ.
ಇಂದು ಬೆಳಗ್ಗೆ 7 ಗಂಟೆಯಿಂದ ಮದ್ಯಾಹ್ನ 2 ಗಂಟೆಯವರೆಗೆ ಕುಕನೂರು ಪಟ್ಟಣದ ರಾಷ್ಟ್ರೀಯ ಹೆದ್ದಾರಿ 367 ರ ಅಕ್ಕ ಪಕ್ಕದಲ್ಲಿರುವ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಬಂದಾಗಿವೆ. ಸಾರಿಗೆ ಹಾಗೂ ಬ್ಯಾಂಕ್, ಬಾರ್ ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿವೆ.
ಪಟ್ಟಣದ ಸಂತಿ ಬಜಾರ್, ಯಲಬುರ್ಗಾ ಕೊಪ್ಪಳ ಮೇನ್ ರಸ್ತೆ, ವೀರಭದ್ರಪ್ಪ ಸರ್ಕಲ್, ಅಂಬೇಡ್ಕರ್ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್, ಹಾಗೂ ಮಹಾಮಾಯ ತೇರಿನ ಗಡ್ಡೆಯಲ್ಲಿ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣವಾಗಿ ಬಂದಾಗಿದೆ. ಈ ಬಂದ್ ಗೆ ಪ್ರಮುಖ ಕಾರಣ, ಕುಕನೂರು ತಾಲೂಕಿನ ವಿವಿಧ ಅಭಿವೃದ್ಧಿ ಕೆಲಸ ಕಾರ್ಯಕಗಳನ್ನು ತ್ವರಿತಗತಿಯಲ್ಲಿ ಮಾಡುವುದರ ಕುರಿತು ಹಾಗೂ ಆಡಳಿತಾತ್ಮಕ ಕಚೇರಿಗಳ ನಿರ್ಮಾಣಕ್ಕಾಗಿ ಸಾಂಕೇತಿಕವಾಗಿ ಕುಕನೂರು ತಾಲೂಕಿನ ನಾಗರೀಕರು, ವಿವಿಧ ಸಂಘಟನೆಗಳು ಹಾಗೂ ಕುಕನೂರು ಪಟ್ಟಣದ ವಿರ್ತಕರ ಸಂಘ ಬಂದ್ ಗೆ ಕರೆ ಕೊಟ್ಟಿವೆ.