ಇಂದು ರಾಜ್ಯದಲ್ಲಿ ವಿವಿಧ ಟೆಲಿಕಾಂ ನೆಟ್ವರ್ಕ್ ಸಿಮ್ಕಾರ್ಡ್ ಬಳಕೆದಾರರಿಗೆ ವಿಚಿತ್ರ ಸೈರನ್ ಅಲರ್ಟ್ ಶಬ್ದ ಕೇಳಿ ಭಯ ಭೀತಾರಾಗಿರುವ ಘಟನೆ ಎಲ್ಲೆಡೆ ನಡೆದಿದೆ.
ಇಂದು ಬೆಳಗ್ಗೆ ಸುಮಾರು 8:00 ಗಂಟೆ ಹೊತ್ತಿಗೆ ಮತ್ತು ಮಧ್ಯಾಹ್ನ 12.12ರ ಹೊತ್ತಿಗೆ ಪ್ರತಿಯೊಬ್ಬರಿಗೆ ಎರಡೆರಡು ಬಾರಿ ಮೊಬೈಲ್ಗೆ ಬೀಪ್ ಸೌಂಡ್ ಜತೆಯಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಎಚ್ಚರಿಕೆ ಸಂದೇಶವೊಂದು ಬಂದಿದ್ದು, ಅಚ್ಚರಿ ತಂದಿದೆ. ಇದರಿಂದ ಹಲವರು ಗಾಬಾರಿಯ ಯಾಗಿದ್ದಾರೆ. ಆದ್ರೆ ಯಾರು ಕೂಡ ಭಯ ಪಡುವ ಅವಶ್ಯಕತೆ ಇಲ್ಲ.
ಈ ಸೈರನ್ ಸಂದೇಶದ ಅಸಲಿಯತ್ತು ಇಲ್ಲಿದೆ ನೋಡಿ, ಕುರಿತು ಈ ಮೊದಲೇ ವಿವಿಧ ನೆಟ್ವರ್ಕ್ ನ ಮೊಬೈಲ್ ಬಳಕೆದಾರರಿಗೆ ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ ವತಿಯಿಂದ ಸಂದೇಶ ಬಂದಿತ್ತು. ಈ ಸಂದೇಶದಲ್ಲಿ ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್ ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸೈರನ್ ಅಲರ್ಟ್ ಸಂದೇಶ ಇದಾಗಿದೆ ಎಂದು ತಿಳಿದು ಬಂದಿದೆ.
ಈ ಸಂದೇಶ ಕ್ಕೆ ಗ್ರಾಹಕರ ಕಡೆಯಿಂದ ಯಾವುದೇ ಕ್ರಿಯೆಯ ಅಗತ್ಯವಿಲ್ಲದ ಕಾರಣ ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಾರಿಗೊಳಿಸುತ್ತಿರುವ ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸಲು ಈ ಸಂದೇಶವನ್ನು ಕಳುಹಿಸಲಾಗಿದೆ.
ಹಾಗಾಗಿ ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಸಂದೇಶ ಮೆಸೇಜ್ನಲ್ಲಿದೆ. ಸಿಸ್ಟಮ್‌ನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದು ನಮ್ಮ ಬದ್ಧತೆಯೂ ಹೌದು ಎಂದು ದೂರಸಂಪರ್ಕ ಇಲಾಖೆ ಸಂದೇಶದ ಮೂಲಕ ತಿಳಿಸಿದೆ.