ಕುಕನೂರು : ಇದೇ ತಿಂಗಳ 23 ರಂದು ಇರುವ ವೀರಮಾತೆ ಕಿತ್ತೂರು ಚೆನ್ನಮ್ಮ ಜಯಂತ್ಯೋತ್ಸವ ಪ್ರಯುಕ್ತ ಇಂದು ಕುಕನೂರು ತಹಸೀಲ್ದಾರ್ ಕಛೇರಿಯಲ್ಲಿ ಪೂರ್ವಿ ಭಾವಿ ಸಭೆ ನಡೆಯಿತು.
ದಿನಾಂಕ 23 ರಂದು ತಾಲೂಕಿನ ಎಲ್ಲ ಸರ್ಕಾರಿ ಕಚೇರಿಯಲ್ಲಿ ವೀರ ಮಾತೇ ಚೆನ್ನಮ್ಮ ಅವರ ಜಯಂತ್ಯೋತ್ಸವವನ್ನು ಆಚರಿಸಲಾಗುತ್ತದೆ. ಚೆನ್ನಮ್ಮ ನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಾಂಕೇತಿಕ ಜಯಂತಿ ಆಚರಿಸಲಾಗುತ್ತದೆ. ಅನಂತರ ದಿನದಲ್ಲಿ ದಿನಾಂಕ ಗೊತ್ತುಪಡಿಸಿ ಅಂದು ತಾಲೂಕು ಪಂಚಮಸಾಲಿ ಸಂಘದಿಂದ ಅದ್ದೂರಿ ಜಯಂತಿ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಪೂರ್ವಿಭಾವಿ ಸಭೆಯಲ್ಲಿ ತಹಸೀಲ್ದಾರ್ ಪ್ರಾಣೇಶ್ ಎಚ್, ಕುಕನೂರು ಪಟ್ಟಣ ಪಂಚಾಯತ್ ಮುಖ್ಯಧಿಕಾರಿ ಪಿ ಸುಬ್ರಮಣ್ಯ, ಗ್ರೇಡ್ 2 ತಹಸೀಲ್ದಾರ್ ಮುರಳೀಧರ ಕುಲಕರ್ಣಿ, ತಾಲೂಕು ಪಂಚಮಸಾಲಿ ಸಂಘದ ಅಧ್ಯಕ್ಷ ವೀರಣ್ಣ ಅಣ್ಣಿಗೇರಿ, ವಿವಿಧ ಇಲಾಖೆಯ ಪ್ರತಿನಿಧಿಗಳು, ಪಂಚಮಸಾಲಿ ಸಮಾಜದ ಪ್ರಮುಖರಾದ ಮಲ್ಲಪ್ಪ ಕೂಡ್ಲುರು, ವಿರೇಶ್ ಸಬರದ, ಶರಣಪ್ಪ ಅರಕೇರಿ, ಇತರರು ಉಪಸ್ಥಿತರಿದ್ದರು.