ತಳಕಲ್‌ನಲ್ಲಿ ವೀರ ಜ್ಯೋತಿ ಯಾತ್ರೆಗೆ ಪೂಜೆ ಸಲ್ಲಿಕೆ

You are currently viewing ತಳಕಲ್‌ನಲ್ಲಿ ವೀರ ಜ್ಯೋತಿ ಯಾತ್ರೆಗೆ ಪೂಜೆ ಸಲ್ಲಿಕೆ

ಕುಕನೂರು: ಕಿತ್ತೂರಿನ ವೀರ ರಾಣಿ ಚನ್ನಮ್ಮರ ಜಯಂತಿಯ ಅಂಗವಾಗಿ ಕಿತ್ತೂರು ಉತ್ಸವ ಹಮ್ಮಿಕೊಳ್ಳಲಗಿದ್ದು, ಉತ್ಸವದ ಪ್ರಯುಕ್ತ ವೀರ ಜ್ಯೋತಿ ಎಂಬ ರಥಯಾತ್ರೆಯು ತಳಕಲ್ ಗ್ರಾಮಕ್ಕೆ ಆಗಮಿಸಿದಾಗ ಗ್ರಾಮಸ್ಥರು ವೀರ ಜ್ಯೋತಿ ಯಾತ್ರಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ವೀರನಗೌಡ ಮಾಲಿಪಾಟೀಲ ಮಾತನಾಡಿ ಇದೇ ಅ.೨೩ ರಂದು ಕಿತ್ತೂರು ರಾಣಿ ಚನ್ನಮ್ಮರ ಜಯಂತಿ ಅಂಗವಾಗಿ ಕಿತ್ತೂರಿನಲ್ಲಿ ಕಿತ್ತೂರು ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ನಿಮಿತ್ಯವಾಗಿ ಅ.೧೩ ರಂದು ಬೆಂಗಳೂರಿನಿ0ದ ಮುಖ್ಯಮಂತ್ರಿಗಳು ಹಾಗೂ ಸರ್ಕಾರದಿಂದ ವೀರ ಜ್ಯೋತಿ ಯಾತ್ರೆಗೆ ಚಾಲನೆ ದೊರೆತಿದೆ. ವೀರ ಜ್ಯೋತಿ ಯಾತ್ರೆಯು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ ಹಾಗೂ ತಾಲೂಕ ಕೇಂದ್ರ ಹಾಗೂ ಪ್ರಮಖ ಪಟ್ಟಣಗಳಲ್ಲಿ ಹಾದು ಹೋಗಲಿದ್ದು, ಅ.೨೩ರಂದು ವೀರ ಜ್ಯೋತಿ ಯಾತ್ರೆಯು ಕಿತ್ತೂರು ತಲುಪಿ ವೀರ ರಾಣಿ ಚನ್ನಮ್ಮರ ಜಯಂತೋತ್ಸವ ಹಾಗೂ ವಿಜಯೋತ್ಸವವನ್ನು ಆಚರಿಸಲಾಗುತ್ತದೆ. ಕಿತ್ತೂರು ಚನ್ನಮರ ವೀರ ಜ್ಯೋತಿ ಯಾತ್ರೆಯು ನಮ್ಮ ಗ್ರಾಮಕ್ಕೆ ಆಗಮಿಸಿದ್ದು ನಮಗೆ ಋಷಿ ತಂದಿದೆ ಎಂದರು.
ಈ ಸಂಧರ್ಭದಲ್ಲಿ ಪ್ರಮುಖರಾದ ಲಿಂಬನಗೌಡ ಪೋಲಿಸ್ ಪಾಟೀಲ, ನೀಲನಗೌಡ ಮಾಲಿಪಾಟೀಲ, ತಾತನಗೌಡ ಪಿಡ್ಡನಗೌಡ್ರ, ಬಸನಗೌಡ ಹಿರೇಗೌಡ್ರ, ಉಮೇಶ ಹಾಗೂ ತಳಕಲ್ ಮತ್ತು ತಳಬಾಳ ಗ್ರಾಮದ ಪಂಚಮಶಾಲಿ ಸಮಾಜದ ಇತರರು ಇದ್ದರು.

Leave a Reply

error: Content is protected !!