ಕುಕನೂರು : ಕೈಕೊಟ್ಟ ಮಳೆ ಟ್ಯಾಂಕರ್ ಮೂಲಕ ಬೆಳೆಗಳಿಗೆ ನೀರುಣಿಸುತ್ತಿರುವ ರೈತರು.
ಕುಕನೂರು : ತೀವ್ರ ಬರಗಾಲ ಎದುರಿಸುತ್ತಿರುವ ಕುಕನೂರು ತಾಲೂಕಿನ ರೈತರು ಮಳೆಯ ಕೊರತೆಯಿಂದ ಅಲ್ಪ ಸ್ವಲ್ಪ ಬೆಳೆದ ಮೆಣಸಿನಕಾಯಿ, ಈರುಳ್ಳಿ, ಗೋದಿ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಟ್ಯಾಂಕರ್ ನೀರಿಗೆ ಮೊರೆ ಹೋಗಿದ್ದಾರೆ.
ತಾಲೂಕಿನ ಯೆರೆಹಂಚಿನಾಳ, ಬಿನ್ನಾಳ್, ಮಳೆಕೊಪ್ಪ, ಚಿಕ್ಕೇನಕೊಪ್ಪ ಸೇರಿದಂತೆ ಕೆಲ ಹಳ್ಳಿಗಳ ರೈತರು ತಾವು ಬಿತ್ತಿದ ಈರುಳ್ಳಿ, ಮೆಣಸಿನಕಾಯಿ, ಗೋದಿ ಬೆಳೆಗಳು ನೀರಿಲ್ಲದೆ ಒಣಗುತ್ತಿದ್ದು ಬೆಳೆ ಉಳಿಸಿಕೊಳ್ಳುವ ಸಲುವಾಗಿ ರೈತರು ಇನ್ನಿಲ್ಲದ ಕಷ್ಟ ಪಡುತ್ತಿದ್ದಾರೆ,
ಬಾಡಿ ಹೋಗುತ್ತಿರುವ ಬೆಳೆಗಳಿಗೆ ದೂರದ ಊರುಗಳಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ಟ್ಯಾಂಕರ್ ಮೂಲಕ ನೀರು ಹಾಯಿಸುತ್ತಿದ್ದಾರೆ. ಟ್ಯಾಂಕರ್ ನಿಂದ ನೀರು ತಂದು ಇಂಗು ಗುಂಡಿ ಮಾಡಿ, ಸ್ಟ್ರಿoಕ್ಲ್ ರ್ ಮೂಲಕ ಸಿಂಪಡಿಸುತ್ತಿದ್ದೇವೆ ಎಂದು ರೈತ ಮಹಿಳೆ ಲೀಲಾವತಿ ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ಸರ್ಕಾರ ಮೋಡ ಬಿತ್ತನೆ ಕಾರ್ಯ ಮಾಡಬೇಕು, ಬರ ಪರಿಹಾರ ಕೈಕೊಳ್ಳಬೇಕು, ರೈತರ ಸಾಲ ಮನ್ನಾ ಮಾಡಲು ರೈತರಾದ ಮುತ್ತಪ್ಪ ರಾವಣಕಿ,ನಾಗಪ್ಪ ಅಸೂಟಿ, ಬಸಪ್ಪ ಕಮತರ, ಶರಣಪ್ಪ ಕಟ್ಟಿ ಇತರರು ಒತ್ತಾಯಿಸಿದ್ದಾರೆ.