Local Express : ಮಸಬಹಂಚಿನಾಳದಿಂದ ಅಭಿವೃದ್ದಿ ಪರ್ವ ಪ್ರಾರಂಭ : ಶಾಸಕ ರಾಯರಡ್ಡಿ

You are currently viewing Local Express  : ಮಸಬಹಂಚಿನಾಳದಿಂದ ಅಭಿವೃದ್ದಿ ಪರ್ವ ಪ್ರಾರಂಭ : ಶಾಸಕ ರಾಯರಡ್ಡಿ

ಮಸಬಹಂಚಿನಾಳ ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜು ಉದ್ಘಾಟಿಸಿದ ಎಸ್ ಮಧು ಬಂಗಾರಪ್ಪ

ಕುಕನೂರು : ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಬಳಿ ದುಡ್ಡು ಇಲ್ಲ ಹೀಗಾಗಿ ಅಭಿವೃದ್ದಿ ಅಗಲ್ಲ ಅಂತಾ ಹೇಳಿದ್ದಾರೆ ಅದು ಸುಳ್ಳು ಮಸಬಹಂಚಿನಾಳ ಗ್ರಾಮದಿಂದ ಕ್ಷೇತ್ರದಲ್ಲಿ ಅಭಿವೃದ್ದಿ ಪರ್ವ ಪ್ರಾರಂಭ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಶನಿವಾರ ನೆಡೆದ ಪದವಿ ಪೂರ್ವ ಕಾಲೇಜಿನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ನಾನು ಐದರಿಂದ ಆರು ಜನ ಮುಖ್ಯಮಂತ್ರಿಗಳ ಜೊತೆ ಹಾಗೂ ಎರಡು ಮೂರು ಜನ ಪ್ರಧಾನ ಮಂತ್ರಿಗಳ ಜೊತೆ ಕೆಲಸ ಮಾಡಿದ್ದೇನೆ. ಅವರೆಲ್ಲರಲ್ಲಿ ಸಿದ್ದರಾಮಯ್ಯನವರು ಒಬ್ಬ ಉತ್ತಮ ಮುಖ್ಯಮಂತ್ರಿಗಳಾಗಿದ್ದಾರೆ. ಬಂಗಾರಪ್ಪನವರ ನಂತರ ಬಡವರ ಪರ ಕಾಳಜಿವುಳ್ಳ ಒಬ್ಬ ನಾಯಕನೆಂದರೆ ಅದು ಸಿದ್ದರಾಮಯ್ಯನವರು. ತಾಲೂಕಿನ ಇಂಜಿನಿಯರಿಂಗ್ ಹಾಗೂ ಕೌಶಲ್ಯ ಅಭಿವೃದ್ದಿ ಕೇಂದ್ರಕ್ಕೆ 30ಕೋಟಿ ಹಣ ಬಿಡುಗಡೆಗೊಳಿಸಿದ್ದೇನೆ. ಆದಷ್ಟೂ ಬೇಗ ಅಲ್ಲಿ ಮೂಲಭೂತ ಸೌಲಭ್ಯಗಳು ದೊರೆಯಲಿವೆ. ಅದರೆ ರೀತಿ ಕ್ಷೇತ್ರಕ್ಕೆ ಒಟ್ಟು ಈ ವರ್ಷ ೩ ಪದವಿ ಪೂರ್ವ ಕಾಲೇಜುಗಳು ಹಾಗೂ ೬ ಪ್ರೌಢ ಶಾಲೆಗಳನ್ನು ಮಂಜೂರು ಮಾಡಿಸಿದ್ದೇನೆ. ಸರ್ಕಾರದಿಂದ ಅನುದಾನ ಬರುವವರೆಗೂ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯು ಶಾಲೆ ನೆಡೆಸಲು ಅನುದಾನವನ್ನು ನೀಡಲಿದೆ ಎಂದ ಅವರು, ಗ್ಯಾರಂಟಿ ಯೋಜೆನೆಯಿಂದಾಗಿ ಅಭಿವೃದ್ದಿ ಅಸಾಧ್ಯ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಆದ್ದರಿಂದ ಇಲ್ಲಿಂದಲೇ ಅಭಿವೃದ್ದಿಯ ಪರ್ವ ಪ್ರಾರಂಭವಾಗಲಿದೆ ಎಂದರು.

ಬಳಿಕ ಪದವಿ ಪೂರ್ವ ಕಾಲೇಜು ಕೊಠಡಿಯನ್ನು ಉದ್ಘಾಟಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಸಚಿವರಾದ ಎಸ್ ಮಧು ಬಂಗಾರಪ್ಪ ಮಾತನಾಡಿ ನಾನು ಶಿಕ್ಷಣ ಸಚಿವನಾದ ಮೇಲೆ ಇದೆ ಮೊದಲ ಬಾರಿಗೆ ಕಾಲೇಜುಗಳನ್ನು ಮಂಜೂರು ಮಾಡಿ ಉದ್ಘಾಟನೆಯನ್ನು ಮಾಡುತ್ತಿದ್ದೇನೆ. ಇದಕ್ಕೆಲ್ಲಾ ನನ್ನ ಅಣ್ಣನ ಸ್ಥಾನದಲ್ಲಿರುವ ಬಸವರಾಜ ರಾಯರಡ್ಡಿಯವರೇ ಕಾರಣ. ಅವರು ಒಬ್ಬ ಅನುಭವಿ ರಾಜಕಾರಣಿಗಳಾಗಿದ್ದಾರೆ ನಮ್ಮ ತಂದೆಯೊಂದಿಗೆ ಕೆಲಸ ಮಾಡಿದ ಅವರೊಂದಿಗೆ ನಾನು ಕೆಲಸ ಮಾಡುತ್ತಿರುವುದು ನನಗೆ ಋಷಿ ತಂದಿದೆ ಎಂದರು. ರೈತರಿಗಾಗಿ ನಮ್ಮ ತಂದೆ ಜಾರಿಗೆ ತಂದ ರೈತರಿಗೆ ಉಚಿತ ವಿದ್ಯತ್ ವ್ಯವಸ್ಥೆಯಿಂದ ಇಂದು ರಾಜ್ಯದ ರೈತರು ಜೀವನ ಹಸನಾಗಿದೆ ಎಂದರು.

ಈ ಸಂದರ್ಭದಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಕೌನ್ಸಲಿಂಗ್ ಮಾಡದೆ ಅನ್ಯಾಯ ಮಾಡಲಾಗುತ್ತಿದ್ದೆ ಎಂದು ಕಾರ್ಯಕ್ರಮದ ವೇದಿಕೆ ಮುಂದೆ ಬಿಸಿಲಿನಲ್ಲಿಯೇ ಕುಳಿತ ಅಭ್ಯರ್ಥಿಗಳ ಮನವಿಯನ್ನು ಸ್ವೀಕರಿಸಿ ಆದಷ್ಟೂ ಬೇಗ ಈ ಕುರಿತು ಅಧಿಕಾರಿಗಳೊಂದಿಗೆ ಮತನಾಡಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ಡಿಡಿಪಿಐ ಶ್ರೀಶೈಲ ಬಿರದಾರ, ತಹಶೀಲ್ದಾರ್ ಎಚ್.ಪ್ರಾಣೇಶ್, ಇಓ ಸಂತೋಷ ಬಿರದಾರ, ಜಗದೀಶ ಎಚ್, ಯಂಕಣ್ಣ ಯರಾಶಿ, ಹನಮಂತಗೌಡ ಪಾಟೀಲ, ಬಸವರಾಜ ಉಳ್ಳಾಗಡ್ಡಿ, ಸತ್ಯನಾರಾಯಣಪ್ಪ ಹರಪನಹಳ್ಳಿ, ಚಂದ್ರಶೇಖರಯ್ಯ ಹಿರೇಮಠ, ರಾಘವೇಂದ್ರ ಜೋಷಿ, ಕಾಶೀಮಸಾಬ ತಳಕಲ್, ಬಸವರಾಜ ಅಂಗಡಿ ಹಾಗೂ ತಾಲೂಕ ಮಟ್ಟದ ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗ ವರ್ಗದರು ಹಾಗೂ ಸಾರ್ವಜನಿಕರು ಇದ್ದರು.

Leave a Reply

error: Content is protected !!