ಆಧುನಿಕತೆಗೆ ತೆರಳುತ್ತಿರುವ ಹಳ್ಳಿಯ ಜನರು : ವಿಷಕಾರಕ ಗಾಳಿಗೆ ಆಹುತಿಯಾಗುತ್ತಿವೆ ನಮ್ಮ ಸ್ವಚ್ಛಂದ ಪರಿಸರ..!
ಹಳ್ಳಿ ಅಂದ ತಕ್ಷಣವೇ ಅಚ್ಚ ಹಸಿರಿನಿಂದ ಕಂಗೊಳಿಸುವ ಪ್ರಕೃತಿ ಸೊಬಗು ಎತ್ತಿನ ಬಂಡಿ ಜನಪದಗಳು ನಾಟಕಗಳು ಬಜನಿ ಪದಗಳು ಲಗಾವರಿ, ಕುಂಟೆಬಿಲ್ಲೆ ಕಣ್ಣ ಮುಚ್ಚಾಲೆ ಕೋಲಾಟಗಳು ಗುಂಪು ಗುಂಪು ಆಟಗಳು ಕಣ್ಣ ಮುಂದೆ ಬರುತ್ತದೆ.
ಆಧುನಿಕತೆಯ ತೆರಳುತ್ತಿರುವ ಜನರು ಆಧುನಿಕತೆ ಬೆಳಗೆ ಬೆಳವಣಿಗೆಯನ್ನು ಕಂಡುಕೊಳ್ಳುತ್ತಿರುವುದರಿಂದ ಜನರು ಕೂಡ ಆಧುನಿಕತೆಗೆ ತೆರಳುತ್ತಿದ್ದಾರೆ ಹಳ್ಳಿಗಳು ಕೂಡ ತುಂಬಾ ಬದಲಾವಣೆಯನ್ನು ಕಂಡುಕೊಂಡಿದ್ದಾವೆ ಆಗ ಎತ್ತಿನ ಬಂಡಿಗಳು ಮಾತ್ರ ಹಳ್ಳಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವು ಆದರೆ ಈಗ ಎಲ್ಲಿ ನೋಡಿದರೂ ಸಹ ಮತ್ತು ಎಲ್ಲರ ಮನೆಯಲ್ಲೂ ವಿಷಕಾರಕ ಗಾಳಿಯನ್ನು ಬಿಡುವಂತ ಗಾಡಿಗಳೇ ಹೆಚ್ಚಾಗಿ ಬಳಸುತ್ತಿದ್ದಾರೆ.
ಉದಾಹರಣೆಗೆ ಟ್ಯಾಕ್ಟರ್ ಬೈಕ್ ಗದ್ದೆಗಳಿಗೂ ಕೂಡ ಮಿಷನ್ಗಳನ್ನ ಬಳಸ್ತಾ ಇದ್ದಾರೆ. ಹಳ್ಳಿಗಳು ಕೂಡ ಆಧುನಿಕತೆಗೆ ತೆರಳುತ್ತಿರುವುದರಿಂದ ಇವುಗಳೆಲ್ಲವೂ ಮರೆಮಾಚಿಕೊಳ್ಳುತ್ತಿದ್ದಾವೆ. ಈ ರೀತಿ ವಿಷಕಾರಕಾ ಗಾಳಿಯನ್ನು ಬಿಡುವಂತ ವಾಹನಗಳಿಂದ ವಾಯುಮಾಲಿನ್ಯವಾಗುತ್ತಿದೆ. ಹಾಗೆ ಹಳ್ಳಿ ಕಡೆಗಳನ್ನು ಕೂಡ ಕಾರ್ಖಾನೆಗಳು ಹೆಚ್ಚಾಗುತ್ತಲೇ ಇದ್ದಾವೆ ಇದರಿಂದಾಗಿ ಜನರಿಗೆ ಉಸಿರಾಡಲು ಶುದ್ಧವಾದ ಗಾಳಿ ಸಿಗುತ್ತಿಲ್ಲ, ಕಾರ್ಖಾನೆಗಳು ಬಿಡುವ ವಿಷಕಾರಕ ಹೊಗೆಯಿಂದಾಗಿ ಹಲವಾರು ಜನರ ಬೆಳೆ ಆಗಿದೆ ಮತ್ತು ಪ್ರಕೃತಿ ಸೌಂದರ್ಯ ಬತ್ತಿ ಹೋಗುತ್ತಿದೆ. ಯಾವುದೇ ಗಿಡವನ್ನು ವೀಕ್ಷಿಸಿದರು ಸಹಕಾರಿ ಬೂದಿಯೇ ಕಾಣಿಸಿಕೊಳ್ಳುತ್ತಿದೆ. ಆದ್ದರಿಂದ ಹಲವಾರು ರೋಗಗಳು ಬಂದು ಒಕ್ಕರಿಸಿಕೊಳ್ಳುತ್ತಿವೆ, ಎಷ್ಟೋ ಜನರು ಈ ವಿಷ ತಾರಕ ಧೂಳಿಗೆ ತುತ್ತಾಗಿದ್ದಾರೆ. ಈಗ ಹಳ್ಳಿಗಳ ಕಡೆ ಕೂಡ ಉಸಿರಾಡಲು ಶುದ್ಧ ಗಾಳಿ ಸಿಗುತ್ತಿಲ್ಲ ಎಂಬುವುದೇ ವಿಪರ್ಯಾಸವೇ ಸರಿ…!
ಇದರಿಂದಾಗಿ ಗಿಡಗಳು ಗಾಳಿಯನ್ನು ಬಿಸಿದೆ ಕಾರಣದಿಂದಾಗಿ ಎಲ್ಲೂ ಮಳೆ ಬರುತ್ತಿಲ್ಲ ಮಳೆಬಾರದ ಕಾರಣದಿಂದಾಗಿ ಎಲ್ಲಿ ಅಂದರು ಅಲ್ಲೇ ಬರಗಾಲ ಕಾಣಿಸಿಕೊಳ್ಳುತ್ತಿದೆ ಇದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ನಮಗೆ ನೀರು ಬಹಳಷ್ಟು ಮುಖ್ಯ ಅದನ್ನು ಉಳಿಸಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಈ ಬರಗಾಲವನ್ನು ಹೋಗಲಾಡಿಸಬೇಕಾದರೆ, ನಾವು ಏನು ಮಾಡಬೇಕು ಎಂಬುದನ್ನು ನಮಗೆಲ್ಲರಿಗೂ ಗೊತ್ತಿರಬೇಕು. ಆಗ ಸಾಲುಮರದ ತಿಮ್ಮಕ್ಕನಿಗೆ ಮಕ್ಕಳು ಆಗದೆ ಇಲ್ಲ ಕಾರಣಕ್ಕಾಗಿ ಮರಗಳನ್ನು ತನ್ನ ಮಕ್ಕಳೆಂದು ಭಾವಿಸಿಕೊಂಡು ಬೆಳೆಸಿದ್ದಾರೆ. ಆ ಮರಗಳು ಇವತ್ತು ಎಮ್ಮರವಾಗಿ ಬೆಳೆದು ನಿಂತಿದೆ ಇವತ್ತು ಅಷ್ಟು ಗಿಡಗಳಿಂದ ಬಂದ ಗಾಳಿ ಮತ್ತು ಮಳೆಗಳಿಂದ ಎಷ್ಟೋ ಬೆಳೆಗಳು ಬೆಳೆದು ನಿಂತಿವೆ ಮತ್ತು ಎಷ್ಟೋ ಜೀವಗಳು ಉಳಿದಿವೆ.
ನಾವು ಕೂಡ ಮರಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸುವುದು ಅನಿವಾರ್ಯವಾಗಿದೆ ಇಲ್ಲವಾದರೆ, ನಮ್ಮ ಮುಂದಿನ ಪೀಳಿಗೆಗೆ ಸ್ವಲ್ಪ ಶುದ್ಧವಾದ ಗಾಳಿ ಇರುವುದಿಲ್ಲ, ಆದ್ದರಿಂದ ನಾವು ತುಂಬಾ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಈ ವಿಷಕಾರಕ ಕಾರ್ಖಾನೆಗಳಿಂದ ಜನರು ತುಂಬಾ ತೊಂದರೆಯನ್ನು ಅನುಭವಿಸಿದ್ದಾರೆ ಮತ್ತು ಅನುಭವಿಸುತ್ತಿದ್ದಾರೆ.
ಉದಾಹರಣೆಗೆ,,,,,
ನಮ್ಮ ಕೊಪ್ಪಳ ತಾಲೂಕಿನ ಚಿಕ್ಕಬಗನಾಳ ಗ್ರಾಮದ ಸುತ್ತಮುತ್ತಲು ಹಲವಾರು ಕಾರ್ಖಾನೆಗಳು ಇರುವುದರಿಂದ ಚಿಕ್ಕಪಗನಾಳ ಗ್ರಾಮವೂ ಯಾವಾಗಲೂ ಕರಿಬೂದಿಯಿಂದ ಕಂಗೊಳಿಸುತ್ತಿರುತ್ತದೆ ಮತ್ತು ಗಿಡಗಳು ಕೂಡ ನೋಡಲು ಸ್ವಲ್ಪವೂ ಹೆಸರಿನಿಂದ ಕಾಣಿಸುವುದಿಲ್ಲ ಗಿಡಗಳು ಕೂಡ ಕರಿಭೂದಿಯಂತೆ ಕಾಣುತ್ತವೆ. ಅಲ್ಲಿಯ ನೀರು ಸಹ ಕುಡಿಯಲು ಶುದ್ಧವಾಗಿ ದೊರಕುವುದಿಲ್ಲ, ಆದ್ದರಿಂದಾಗಿ ಕೆಲವು ಸಲ ಇಡೀ ಗ್ರಾಮವೇ ಆಸ್ಪತ್ರೆ ಮೆಟ್ಟಿಲನ್ನು ಮುಟ್ಟಿದೆ.
ಚಿಕ್ಕಬಗನಾಳ ಹೆಣ್ಣು ಮಕ್ಕಳಿಗೆ ಒಂದು ದೊಡ್ಡ ಸಮಸ್ಯೆ ಎದುರಾಗಿದೆ ಅಲ್ಲಿ ಹೆಣ್ಣು ಮಕ್ಕಳಿಗೆ ಮದುವೆಯನ್ನ ಮಾಡಿಕೊಡುತ್ತಾರೆ ಆದರೆ ಬಾಣ್ಣೆತನಕ್ಕೆ ಅಂತ ಬರ ಹೆಣ್ಣು ಮಕ್ಕಳು ತುಂಬಾ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬೇರೆ ಊರುಗಳಿಂದ ಬಂದ ಸೊಸೆಯಂದಿರು ಬಾಣೆತನಕ್ಕೆ ಅಂತ ತಮ್ಮ ತವರು ಮನೆ ಹೋಗುತ್ತಾರೆ ಆದರೆ ಬೇರೆ ಊರುಗಳಿಂದ ಚಿಕ್ಕ ಮಗ ನಾಳೆಗೆ ಬಾಣತನಕ್ಕೆ ಅಂತ ಬರುವ ಹೆಣ್ಣು ಮಕ್ಕಳ ಸಮಸ್ಯೆ ಅಷ್ಟಿಷ್ಟಲ್ಲ.
ಮನೆ ಒಳಗೆ ಯಾವಾಗಲೂ ತುಂಬಾ ಕರಿಬೂದಿಯೇ ಇರುತ್ತದೆ ಅಷ್ಟೇ ಅಲ್ಲ ನೀರು ಊಟ ಮಾಡುವ ಆಹಾರದಲ್ಲೂ ಕರಿಬೂದಿಗೆ ಕಾಣಿಸುತ್ತದೆ. ಇದರ ಜೊತೆಗೆ ಚಿಕ್ಕ ಮಕ್ಕಳ ಆರೈಕೆ ಸರಿಯಾಗಿ ನಡೆಯುತ್ತಿಲ್ಲ, ಕರಿ ಬೂದಿ ತುಂಬಿಕೊಂಡಿರುವಂತಹ ಆಹಾರ ಸೇವನೆಯಿಂದ ಬಾಣಂತಿಯರು ಚಿಕ್ಕ ಮಕ್ಕಳ ಆರೋಗ್ಯದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಷ್ಟೇ ಅಲ್ಲ ಕೊಪ್ಪಳದ ಸುತ್ತಮುತ್ತ ವಿಷ ಕಾರ್ಯಕರ್ತ ಗಾಳಿ ಬಿಡುವ ಕಾರ್ಖಾನೆಗಳು ಹೆಚ್ಚು ಹೆಚ್ಚಾಗಿ ಕಾಣುತ್ತೇವೆ.
ಇದರಿಂದ ನಮ್ಮ ಜನಗಳಿಗೆ ತೊಂದರೆಗಳಾಗುತ್ತಿದ್ದಾವೆ. ಇವೆಲ್ಲ ದಾರಿಂದಲೂ ಮಳೆ ಆಗುತ್ತಿಲ್ಲ ನಮಗೆಲ್ಲರಿಗೂ ಸರಿಯಾದ ನೀರಿನ ವ್ಯವಸ್ಥೆ ಇಲ್ಲ, ಮುಖ್ಯವಾಗಿ ರೈತನಿಗೆ ಬೆಳೆ ಬೆಳೆಯುವುದಕ್ಕೆ ಬೇಕು ರೈತ ಬೆಳೆಯನ್ನು ಬೆಳೆದಿಲ್ಲ ಅಂದರೆ ಹೇಗೆ ಅನ್ನೋದನ್ನ ನಾವು ಯೋಚನೆ ಮಾಡಬೇಕಾಗುತ್ತದೆ. ನಾವು ನಮಗೆ ಇಷ್ಟವಾದ ಆಹಾರ ತಿನ್ನುತ್ತಿದ್ದೇವೆ ಅಂದರೆ ಅದಕ್ಕೆ ನಮ್ಮ ರೈತನ ಪರಿಶ್ರಮ ಎಲ್ಲರಿಗೂ ತಿಳಿದಿರುವುದೇ ಆದರೆ ಈಗ ಬೆಳೆಯನ್ನು ಬೆಳೆಯುವುದಕ್ಕೆ ನೀರು ಇಲ್ಲವಾದರೆ ಹೇಗೆ ಎಲ್ಲಾ ಸಮಸ್ಯೆಗಳಿಗೆ ನಮ್ಮ ಯುವ ಜನತೆ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ಇಲ್ಲವಾದರೆ ನಮ್ಮ ಪ್ರಕೃತಿಯನ್ನು ನಾವು ನಮಗೆ ಗೊತ್ತಿಲ್ಲದ ರೀತಿಯಲ್ಲಿ ಹಾಳು ಮಾಡುತ್ತಿದ್ದೇವೆ. ಈಗಲಾದರೂ ಎಚ್ಚತ್ತುಕೊಳ್ಳಬೇಕು.
ಹಸಿರೇ ಉಸಿರು…
“ಈ ಭೂಮಿಯಲ್ಲಿ ಎಲ್ಲಾ ಜೀವಿ ಗಳೂ ನೆಮ್ಮದಿ ಯಿಂದ ಸುರಕ್ಷಿತ ವಾಗಿ ಬಾಳಬೇಕಾದರೆ ಹಸಿರಿರಬೇಕು. ಹಸಿದಿದ್ದರೆ ಮಾತ್ರ ಉಸಿರಾಡಬಲ್ಲರು. ಭೂಮಿಯ ಬಹುಭಾಗ ಜಲಾವೃತವಾಗಿರುವುದರಿಂದ ,ಇರುವ ಸ್ವಲ್ಪ ಜಾಗದಲ್ಲಿ ಮನುಷ್ಯ,ಪ್ರಾಣಿ,ಪಕ್ಷಿಗಳು, ಮತ್ತು ಲಕ್ಷಾಂತರ ಜೀವಜಂತುಗಳು ಬದುಕುತ್ತಿವೆ”
ವಿಶೇಷ ವರದಿ : ರಾಧಿಕಾ ಕರ್ಕಿಹಳ್ಳಿ