ಕೊಪ್ಪಳ : ತಾಲೂಕಿನ ಚಿಕ್ಕಬಗನಾಳ ಗ್ರಾಮದಲ್ಲಿ ಮಂಗಳವಾರದಂದು ಕುಣಿಕೇರಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲಾತ್ಸೋವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಯ್ಯ, ‘ಪ್ರತಿಭಾ ಕಾರಂಜಿಯು ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರ ಹಾಕುವ ಮುಖ್ಯ ವೇದಿಕೆಯಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳಲ್ಲಿರುವ ಭಯವನ್ನು ಹೋಗಲಾಡಿಸಲು ಸಹಾಯಕವಾಗುತ್ತದೆ ಎಂದರು.
ಇದೇ ವೇಳೆಯಲ್ಲಿ ಕುಣಿಕೇರಿ ಪ್ರಾಥಮಿಕ ಶಾಲಾ ಶಾಲೆಗೆ ಭೂಮಿ ಧಾನ ನೀಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಹುಚ್ಚಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕರ್ಕಿಹಳ್ಳಿ ಮತ್ತು ಚಿಕ್ಕಬಗನಾಳ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ವಿಜಯಕುಮಾರ್ ಫೈನಾನ್ಸ್ ಡಿ ಪಾರ್ಟಿ ವೋಟ್ ಎಕ್ಸ್ಇಂಡಿಯಾ ಅವರಿಗೂ ಈ ವೇಳೆ ಸನ್ಮಾನಿಸಿ ಗೌರವಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರಿಗೆ ಹಾಗೂ ಚಿಕ್ಕಬಗನಾಳ ಗುರು ಹಿರಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾರುತಿ ಡಿ ಪೂಜಾರ್ ಹಾಗೂ ಎಸ್‌ಡಿಎಂ ಸಿ ಅಧ್ಯಕ್ಷರು ಸರಸ್ವತಿ ಬಸವರಾಜ್ ಪೊಲೀಸ್ ಪಾಟೀಲ್ ಎಸ್‌ಡಿಎಂಸಿ ಉಪಾಧ್ಯಕ್ಷರು ಅಧ್ಯಕ್ಷತೆ ರಾಮಣ್ಣ ಎನ್ ಚೌಡಕಿ ಗ್ರಾಮ ಪಂಚಾಯಿತಿ ಸದಸ್ಯರು, ಪ್ರಜಾವೀಕ್ಷಣೆಯ ನಿರ್ದೇಶಕ ಕನಕಪ್ಪ ಕೆ. ತಳವಾರ, ಲಲಿತಾ ಕುಮಾರಸ್ವಾಮಿ ಗ್ರಾಮ ಪಂಚಾಯಿತಿ ಸದಸ್ಯರು ಪೋಲಿಸ್ ಪಾಟೀಲ್ ಗ್ರಾಮ ಪಂಚಾಯಿತಿ ಸದಸ್ಯರು, ಲಕ್ಷ್ಮವ್ವ ಮಾರುತಿ ಪೂಜಾ ಗ್ರಾಮ ಪಂಚಾಯಿತಿ ಸದಸ್ಯರು, ವಿ ಎಸ್ ಎಸ್ ಏನ್ ಅಧ್ಯಕ್ಷರು ಹಿರೇಮಠ ಅಂದಮ್ಮ ಗುರುಪಾದಯ್ಯ ಹಿರೇಮಠ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಶ್ರೀ ಆರ್ ವಿ ಓಂಕಾರ ಸಿಇಒಡಿ ಎಂ. ಎಸ್. ಪಿ ಜೆಡ್ ಹಿರೇಬಗನಾಳ & ಚಿಕ್ಕಬಗನಾಳ, ವಿಜಯ್ ಕುಮಾರ್ ಫೈನಾನ್ಸ್ ಡಿ ಪಾರ್ಟಿ ಎಕ್ಸ್ಇಂಡಿಯಾ, ಶರಣಬಸವನಗೌಡ ಪಾಟೀಲ್ ಅಧ್ಯಕ್ಷರು ಸಹ ಶಿಕ್ಷಕರು, ಮುಖ್ಯ ಅತಿಥಿಗಳು, ಬನ್ನಪ್ಪ ಗೌಡ ಜಿಲ್ಲಾ ಸಂಸದರು ಕೇಪ್ ಪೊಲೀಸ್ ಪಾಟೀಲ್, ಜಿಲ್ಲಾ ಒಬಿಸಿ ಅಧ್ಯಕ್ಷರು ಕಾಂಗ್ರೆಸ್ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಬಸವರಾಜ್ ಇನ್ ಬಂಗಾಳಿ ಇದ್ದರು.
ವರದಿ : ರಾಧಿಕಾ ಕರ್ಕಿಹಳ್ಳಿ