LOCAL NEWS : ಬಿ.ಇಡಿ ಪರಿಕ್ಷಾರ್ಥಿಗಳಿಗೆ 5E ಕಾರ್ಯಗಾರ

You are currently viewing LOCAL NEWS : ಬಿ.ಇಡಿ ಪರಿಕ್ಷಾರ್ಥಿಗಳಿಗೆ 5E ಕಾರ್ಯಗಾರ

ಯಲಬುರ್ಗಾ : ಪಟ್ಟಣದ ಎಸ್.ಎ.ನಿಂಗೋಜಿ ಬಿಎಡ್ ಕಾಲೇಜಿನಲ್ಲಿ ಎರಡನೇ ಮತ್ತು ನಾಲ್ಕನೇ ಸೆಮಿಸ್ಟರಿನ ಪ್ರಶಿಕ್ಷಣಾರ್ಥಿಗಳಿಗೆ ಸಂಸ್ಥೆ ವತಿಯಿಂದ 5ಇ ಆಧಾರಿತ ಬೋಧನಾ ಪದ್ಧತಿ ಕುರಿತು ಎರಡು ದಿನಗಳ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಗಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಿಂಗಪ್ಪ.ಕೆ.ಟಿ ಉದ್ಘಾಟಿಸಿ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ವೃತ್ತಿ ಮಾರ್ಗದರ್ಶನವನ್ನು ಮಾಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ಅವರು ಹಣೆಬರಹವನ್ನು ನಂಬಿ ಕುಳಿತರೆ ಏನೂ ಸಾಧನೆ ಮಾಡಲು ಆಗುವುದಿಲ್ಲ. ಹಣೆಯನ್ನು ಬಿಟ್ಟು, ಬರಹವನ್ನು ಹೆಚ್ಚು ರೂಡಿಗತ ಮಾಡಿಕೊಂಡರೆ ಉತ್ತಮ ಭವಿಷ್ಯ ನಿರ್ಮಾಣವಾಗುತ್ತದೆ ಎಂದು ಹೇಳಿದರು.


ಸಂಪನ್ಮೂಲ ವ್ಯಕ್ತಿಗಳಾದ ಬಸವರಾಜ.ಎಸ್.ಅಂಗಡಿ ಪ್ರಶಿಕ್ಷಣಾರ್ಥಿಗಳಿಗೆ ಉಪನ್ಯಾಸ ನೀಡಿದರು.

*ಪಾಠ ಯೋಜನೆ ಎಂದರೇನು?
ಪಾಠ ಯೋಜನೆಯ ಮಹತ್ವ.
ಉತ್ತಮ ಪಾಠ ಯೋಜನೆಯ ಲಕ್ಷಣಗಳು.
ಪಾಠ ಯೋಜನೆಯನ್ನು ಸಿದ್ಧಪಡಿಸುವಾಗ ಶಿಕ್ಷಕ ತಿಳಿದುಕೊಂಡಿರಬೇಕಾದ ಅಂಶಗಳು.
ಮಕ್ಕಳಲ್ಲಿ ಕಲಿಕೆ ಹೇಗೆ ಉಂಟಾಗುತ್ತದೆ?
ಶಿಕ್ಷಕರಿಗೆ ಶೈಕ್ಷಣಿಕ ಮನೋವಿಜ್ಞಾನದ ಜ್ಞಾನ ಏಕೆ ಅವಶ್ಯಕ ?
ಎಂಬ ವಿಷಯಗಳ ಕುರಿತು ಪ್ರಶಿಕ್ಷಣಾರ್ಥಿಗಳೊಂದಿಗೆ ಚರ್ಚಿಸಿದರು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾದ ಕಾಂತರಾಜ್ ಶೆಟ್ಟರ್ ಐದು ಇ ಗಳನ್ನು ಬಳಸಿ ಪಾಠಯೋಜನೆ ಹೇಗೆ ಸಿದ್ಧಪಡಿಸಬೇಕು ಎಂಬುದನ್ನು ವಿವರಿಸಿದರು.

5ಇ ಗಳು ಈ ಕೆಳಗಿನಂತಿವೆ.
Engage ತೊಡಗಿಸಿಕೊಳ್ಳುವಿಕೆ
Explore ಪರಿಶೋಧಿಸುವಿಕೆ
Explain ವಿವರಣೆ
Explore ವಿಸ್ತರಿಸುವಿಕೆ
Evaluation  ಮೌಲ್ಯಮಾಪನ
ಸಂಸ್ಥೆಯ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸನ್ಮಾನಿಸಿದರು.


ಈ ಸಂದರ್ಭದಲ್ಲಿ ಪ್ರಮುಖರಾದ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ಪ್ರಮುಖರು, ಶಿಕ್ಷಕರು ಹಾಗೂ ಪ್ರಶಿಕ್ಷಣಾರ್ಥಿಗಳಿದ್ದರು.

Leave a Reply

error: Content is protected !!