ತಹಸೀಲ್ದಾರ್ ಕಾರ್ಯಾಲಯದಲ್ಲಿ ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಣೆ.

ತಹಸೀಲ್ದಾರ್ ಕಾರ್ಯಾಲಯದಲ್ಲಿ ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಣೆ.


ಕುಕನೂರು : ಕನ್ನಡ ನಾಡಿನ ವೀರ ನಾರಿ, ಚಿತ್ರದುರ್ಗ ಕೋಟೆಯ ವೀರ ವನಿತೆ ಒನಕೆ ಓಬವ್ವ ಅವರ ಜಯಂತಿಯನ್ನು ತಹಸೀಲ್ದಾರ್ ಕಾರ್ಯಾಲಯದಲ್ಲಿ ಆಚರಣೆ ಮಾಡಲಾಯಿತು.

ಕುಕನೂರು ತಾಲೂಕು ತಹಸೀಲ್ದಾರ್ ಎಚ್ ಪ್ರಾಣೇಶ್ ಅವರು ಒನಕೆ ಓಬವ್ವನವರ ಭಾವಚಿತ್ರ ಕ್ಕೆ ಗೌರವ ಸಲ್ಲಿಸಿ ನಂತರ ಮಾತನಾಡಿ, ವೀರ ನಾರಿ ಒನಕೆ ಓಬವ್ವನವರು ವೈರಿಗಳನ್ನು ಸೆದೆಬಡಿದು ದುರ್ಗದ ಕೋಟೆಯ ಜನರನ್ನು ರಕ್ಷಿಸಿದರು, ಕೆಚ್ಚೆದೆಯ ವೀರ ವನಿತೆ ಒನಕೆ ಓಬವ್ವ ಎಂದು ಹೇಳಿದರು.

ಈ ಸಂದರ್ಭದಲ್ಲಿ ಛಲವಾದಿ ಸಮಾಜದ ಪ್ರಮುಖರಾದ ರಾಮಣ್ಣ ಬಂಕದಮನಿ, ಶರಣಪ್ಪ ಕಾಳಿ, ಶರಣಪ್ಪ ಛಲವಾದಿ, ಫಕೀರಪ್ಪ ಸಾಲ್ಮನಿ, ಲಕ್ಷ್ಮಣ್ ಕಾಳಿ, ಬಸಪ್ಪ ಘಾಟಿ, ಮರಿಯಪ್ಪ ಛಲವಾದಿ, ಶಂಕರ್ ಸಾಲ್ಮನಿ, ಲಕ್ಷ್ಮಣ್ ಮಂಡಲಗಿರಿ ಸೇರಿದಂತೆ ಕಂದಾಯ ಇಲಾಖೆಯ ಸಿಬಂದಿಗಳು, ಇತರರು ಉಪಸ್ಥಿತರಿದ್ದರು.

Leave a Reply

error: Content is protected !!