ಕುಕನೂರು : ತಾಲೂಕಿನಲ್ಲಿ ಈಗಾಗಲೇ 300 ಹೆಚ್ಚು ಗ್ರಾನೈಟ್ ಉದ್ಯಮಗಳು ಆರಂಭವಾಗುವುದು, ಹಲವು ಉದ್ಯೋಗ ಸೃಷ್ಟಿ ಆಗಿದ್ದರೂ ಕೂಡ ಜೊತೆಗೆ ಪರಿಸರಕ್ಕೂ ಅಷ್ಟೇ ಹಾನಿಕಾರಕವಾಗಿ ಮಾರ್ಪಟ್ಟಿದೆ ಎಂಬ ಸಾರ್ವಜನಿಕರ ಅಭಿಪ್ರಾಯವೂ ಇದೆ.
ನವೆಂಬರ್.17/ಶುಕ್ರವಾರದಂದು ಗಾವರಾಳ ಗ್ರಾಮದ ಸಮೀಪದಲ್ಲಿರುವ ಬಿ.ಬಿ. ಗ್ರಾನೆಟ್ಸ್ ನಲ್ಲಿ ನೂತನ ಗ್ರಾನೆಟ್ ಉದ್ಯಮ ಆರಂಭಿಸುವುದಕ್ಕಾಗಿ ಇಂದು ಜಿಲ್ಲಾ ಆಡಳಿತ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೊಪ್ಪಳ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ‘ಪರಿಸರ ಸಾರ್ವಜನಿಕ ಸಭೆ’ ನಡೆಯಿತು.
ಈ ಸಭೆಯ ಮುಖ್ಯ ವೀಕ್ಷಕರಾಗಿ ಆಗಮಿಸಿದ್ದ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ ಕಡಿ ಅವರು ಪರಿಸರ ಸಾರ್ವಜನಿಕರ ಅಭಿಪ್ರಾಯವನ್ನು ಆಲಿಸಿದರು.
*ಮಿಶ್ರ ಪ್ರತಿಕ್ರಿಯೆ*
ಪರಿಸರ ಪರಿಣಾಮಗಳ ಸಾರ್ವಜನಿಕ ಸಭೆಯಲ್ಲಿ ಈ ಗ್ರಾನೈಟ್ ಆರಂಭವಾಗುವುದರಿಂದ ಸಾಕಷ್ಟು ಪರಿಸರಕ್ಕೆ ಹಾನಿ ಉಂಟಾಗಲಿದೆ ಹಾಗೂ ಅಲ್ಲಿ ಸುತ್ತಮುತ್ತ ನೆಲೆಸಿರುವ ಪ್ರಾಣಿ ಪಕ್ಷಿಗಳಿಗೆ ಅಪಾಯ ಒದುಗಿ ಬರಲಿದೆ ಜೊತೆಗೆ ಈ ವ್ಯಾಪ್ತಿಗೆ ಬರುವ ಗೌರರಾಳ ಗ್ರಾಮದ ಸುತ್ತಲೂ ಇರುವ ಗ್ರಾನೆಟ್ ಗಳಿಂದ ಯಾವುದೇ ಅಭಿವೃದ್ಧಿ ಆಗಿಲ್ಲ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ತಗೊಂಡಿಲ್ಲ, ಅದರಿಂದ ರೈತರ ಬೆಳೆಗೆ ಹಾನಿಯಾಗಿ ಅದಕ್ಕೆ ಪರಿಹಾರ ಸಹ ನೀಡಿರುವುದಿಲ್ಲ, ಈ ಮೈನಿಂಗ್ಗಳಿಂದ ಕುಡೀಕರಣಾದಂತಹ ತೆರಿಗೆ ಹಣದಲ್ಲಿ ಇಂತಿಷ್ಟು ಶೇಕಡವಾರು ಅಂ ಅಂತ ನಿಯಮವಿದ್ದರೂ ಸಹ ಕೇವಲ ಕಾಗದ ಪತ್ರ ರೂಪದಲ್ಲಿ ತೋರಿಸುತ್ತಾರೆ ಹೊರತು ಯಾವುದೇ ಅಧಿಕಾರಿ ಇಲ್ಲಿವರೆಗಾದರೂ ಗ್ರಾಮದ ಅಭಿವೃದ್ಧಿಗೆ ಅನುದಾನ ನೀಡಿರುವುದಿಲ್ಲ ಎಂದು ಅಲ್ಲಿ ನಡೆದಂತ ಕೆಲ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಕೆಲವರು ಈ ಬಿಬಿ ಗ್ರಾನೈಟ್ ಮಾಲಿಕತ್ವದ ಗ್ರೇ ಗ್ರಾನೆಟ್ ಕ್ಯಾರಿ ಆರಂಭವಾಗುವುದರಿಂದ ಕೆಲ ಸ್ಥಳೀಯರಿಗೆ ಉದ್ಯೋಗ ಸೃಷ್ಟಿ ಹಾಗೂ ಕೆಲ ಸಾಮಾಜಿಕ ಜವಾಬ್ದಾರಿ ವಹಿಸಲಿದೆ ಎಂದು ಅಭಿಪ್ರಾಯ ಪಟ್ಟರು. ಬಿ.ಬಿ. ಗ್ರಾನೆಟ್ ಮಾಲಿಕತ್ತದ ನೂತನ ಕಲ್ಲು ಕ್ಯಾರಿ “ಗ್ರೇ ಗ್ರಾನೆಟ್ ಕ್ಯಾರಿ” ಸ್ಥಾಪನೆವಾಗುತ್ತಿದ್ದು, ಗೌವಾರಳ ಗ್ರಾಮದ ಸರ್ವೆ ನಂಬರ್ 31/3 ರಲ್ಲಿ ಆರಂಭವಾಗುತ್ತಿದೆ.
ಗಾವರಾಳ ಗ್ರಾಮಕ್ಕೆ ಸಂಬಂಧಪಟ್ಟಂತ ಮಸಬಹಂಚಿನಾಳ ಗ್ರಾಮ ಪಂಚಾಯತ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯತ್ ಕಾರ್ಯದರ್ಶಿ ಇವರುಗಳ ಅನುಪಸ್ಥಿತಿಯಲ್ಲಿ ಇದ್ದರು ಹಾಗೂ ಬಿ.ಬಿ. ಗ್ರಾನೆಟ್ ಸುತ್ತಮುತ್ತಲಿನ ರೈತರ ಗಮನಕ್ಕೆ ಬಂದಿಲ್ಲ ಎನ್ನುವ ಆರೋಪವು ಇದೆ. ಕೇವಲ ಪತ್ರಿಕಾ ಪ್ರಕಟಣೆ ಕೊಟ್ಟು, ಯಾವುದೇ ಒಬ್ಬ ಸ್ಥಳೀಯ ಪತ್ರಕರ್ತರನ್ನು ಆಹ್ವಾನಿಸಿಲ್ಲ. ಇದು ಅನುಮಾನಕ್ಕೆ ಕಾರಣವಾಗಿದೆ.
ಆದರೇ, ಪರಿಸರ ಪರಿಣಾಮಗಳ ಸಾರ್ವಜನಿಕ ಈ ಸಭೆಯಲ್ಲಿ ಈ ಬಿಬಿ ಗ್ರಾನೆಟ್ ಸಂಬಂಧಪಟ್ಟ ವ್ಯಕ್ತಿಗಳು ತಮಗೆ ಬೇಕಾದ ತಮ್ಮ ಪರವಾಗಿ ಮಾತನಾಡುವ ಅಂತ ಜನರಿಗೆ ಕರೆಸಿ ಈ ಸಭೆಯಲ್ಲಿ ಮಾತನಾಡಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಸ್ಥಳೀಯ ಮಟ್ಟದ ಮಾಧ್ಯಮದ ಹಾಗೂ ಪತ್ರಕರ್ತರಿಗೆ ಅವನ ನೀಡದೇ, ತಮಗೆ ಬೇಕಾದ ರೀತಿಯಲ್ಲಿ ಕಾರ್ಯಕ್ರಮದ ಆಯೋಜನೆಯನ್ನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಾರ್ವಜನಿಕ ಸಭೆಯಲ್ಲಿ ತಹಸಿಲ್ದಾರ್ ಎಚ್ ಪ್ರಾಣೇಶ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಹಾಗೂ ಗಾವರಾಳ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ಹಾಗೂ ಕೆಲ ಜನ ಸಾರ್ವಜನಿಕರು, ಗ್ರಾನೈಟಿನ ಸಿಬ್ಬಂದಿ ವರ್ಗದವರು ಕೆಲಸಗಾರರು ಇದ್ದರು.