Local News : ನರೇಗಾ ಯೋಜನೆಯ ಕಾಮಗಾರಿಯನ್ನು ಸಕಾಲದಲ್ಲಿ ಪೂರ್ಣಗೊಳಿಸಿಕೊಳ್ಳಿ : ಮಹೇಶ ಗೌಡರ

You are currently viewing Local News : ನರೇಗಾ ಯೋಜನೆಯ ಕಾಮಗಾರಿಯನ್ನು ಸಕಾಲದಲ್ಲಿ ಪೂರ್ಣಗೊಳಿಸಿಕೊಳ್ಳಿ : ಮಹೇಶ ಗೌಡರ

ಕುಕನೂರು : ನರೇಗಾ ಯೋಜನೆಯಡಿಯಲ್ಲಿ ಅನುಮೋದನೆಗೊಂಡ ಕಾಮಗಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಿಕೊಳ್ಳಿ ಎಂದು ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಮಹೇಶ ಗೌಡ ಹೇಳಿದರು.
       ತಾಲೂಕಿನ ಬಳಗೇರಿ ಗ್ರಾಮದಲ್ಲಿ ಸೋಮವಾರ ಗ್ರಾಮದ ಗಣೇಶ ಕಟ್ಟಿಯಲ್ಲಿ ನೆಡೆದ ೨೦೨೪-೨೫ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟಿಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕ್ರಿಯಾ ಯೋಜನೆಯ ತಯಾರಿಕೆ ಮತ್ತು ಕೂಲಿ ಬೇಡಿಕೆ ಅರ್ಜಿ ಸ್ವೀಕಾರದ ಪ್ರಯುಕ್ತ ನಡೆದ ಗ್ರಾಮ ಸಭೆಯನ್ನು ಉದ್ದೇಶಿ ಮಾತನಾಡಿದ ಅವರು ನರೇಗಾ ಯೋಜನೆಯಡಿಯಲ್ಲಿ ೨೦೨೪-೨೫ ನೇ ಸಾಲಿನಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳ ಬೇಡಿಕೆಯನ್ನು ಹಾಗೂ ನರೇಗಾದಲ್ಲಿ ಗ್ರಾಮೀಣ ಪ್ರದೇಶದಲ್ಲಿನ ಕೂಲಿ ಕೆಲಸ ಕೇಳುವ ಕೂಲಿಕಾರರಿಗೆ ಕೂಲಿ ಕೆಲಸ ನೀಡುವ ಮುಂದಿನ ಆರ್ಥಿಕ ವರ್ಷದಲ್ಲಿ ಕೂಲಿಕಾರರಿಗೆ ಕೆಲಸ ನೀಡಲು ಮತ್ತು ವೈಯಕ್ತಿಕ ಫಲಾನುಭವಿಗಳನ್ನು ಆಯ್ಕೆ ಮಾಡಬೇಕಿದೆ. ನರೇಗಾ ಯೋಜನೆಯಡಿ ಶೇಕಡಾ ೬೫% ಕಾಮಗಾರಿಗಳನ್ನು ನೈಸರ್ಗಿಕ ಸಂಪನ್ಮೂಲ ಅಭಿವೃದ್ಧಿಗೆ ಆಧ್ಯತೆ ನೀಡಲಾಗಿದೆ.
        ಅಲ್ಲದೇ ವೈಯಕ್ತಿಯ ಕಾಮಗಾರಿಗಳಾದ ಕೃಷಿ ಹೊಂಡ, ಬದು ನಿರ್ಮಾಣ, ಇಂಗು ಗುಂಡಿ, ದನದ ದೊಡ್ಡಿ, ಕುರಿ ದೊಡ್ಡಿ, ಅಜೋಲ್ಲಾ ತೊಟ್ಟಿ, ಬಯೋಗ್ಯಾಸ್, ಎರೆಹುಳು ತೊಟ್ಟಿ, ಅರಣ್ಯ, ರೇಷ್ಮೇ, ಕೃಷಿ ಮತ್ತು ತೋಟಗಾಗಿಕೆ ಇಲಾಖೆಯಿಂದ ಕಾಮಗಾರಿಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಅಲ್ಲದೇ ಗ್ರಾಮದ ಸಣ್ಣ, ಅತೀ ಸಣ್ಣ ಮತ್ತು ದೊಡ್ಡ ರೈತರನ್ನು ಗುರುತಿಸಿದ್ದು ಅಂಥ ರೈತರ ಹೊಲಗಳಲ್ಲಿ ಬದು ನಿರ್ಮಾಣ ಮಾಡುವುದರಿಂದ ಮಣ್ಣಿನ ಸವಕಳಿ ತಡೆಗಟ್ಟಿ ಅಂತರ್ಜಲ ಹೆಚ್ಚಿಸಲು ಸಹಾಯವಾಗಿತ್ತದೆ. ಇದರೊಂದಿಗೆ ಕಾಮಗಾರಿಯಲ್ಲಿ ದುಡಿದ ರೈತರಿಗೆ ನರೇಗಾ ಯೋಜನೆಯಿಂದ ಕೂಲಿ ಹಣವು ಸಿಗುತ್ತದೆ, ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರು ಕೆಲಸಕ್ಕೆ ಬಂದಲ್ಲಿ ಸಮುದಾಯ ಕಾಮಗಾರಿಗಳಾದ ನಾಲಾ ಅಭಿವೃದ್ಧಿ, ಕೆರೆ ಹೂಳೆತ್ತುವುದು, ಜಲಸಂಜೀವಿನಿ ಮಾದರಿಯ ಬದು ನಿರ್ಮಾಣ, ಕೂಲಿಕಾರರಿಗೆ ೧೦೦ ದಿನಗಳ ಕೆಲಸ ಒದಗಿದಲು ಕಾಮಗಾರಿಗಳನ್ನು ಆಧ್ಯತೆ ಮೇರೆಗೆ ಗುರುತಿಸುವುದು ಮುಖ್ಯವಾಗಿ ಶಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಸಂಪೂರ್ಣವಾಗಿ ಮುಕ್ತಾಯ ಮಾಡುವುದು, ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಶೇ ೧೦% ವರೆಗೆ ಅವಕಾಶವಿದ್ದು ಗ್ರಾಮಸ್ಥರು ತಮ್ಮ ಬೇಡಿಕೆಗಳನ್ನು ಸಲ್ಲಿಸಿ ಯೋಜನೆಗಳ ಲಾಭ ಪಡೆದುಕೊಳ್ಳಬೇಕು, ಹಾಗೂ ಹಿಂದಿನ ವರ್ಷದಲ್ಲಿ ಅನುಮೋದನೆಗೊಂಡ ಕಾಮಗಾರಿಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಿ ಯೋಜನೆಯ ಲಾಭ ಪಡೆದುಕೊಳ್ಳಿ ಎಂದರು.


ಶಾಲೆಯಲ್ಲಿ ಶೌಚಾಲಯವಿಲ್ಲದೆ ವಿದ್ಯಾರ್ಥಿನಿಯರು ಕಷ್ಟ ಅನುಭವಿಸುತ್ತಿದ್ದೇವೆ. ಶಾಲೆಯಲ್ಲಿ ಶೌಚಾಲಯವನ್ನು ನಿರ್ಮಿಸಿಕೊಡುವಂತೆ ವಿಧ್ಯಾರ್ಥಿನಿಯರು ಮನವಿ ಸಲ್ಲಿಸಿದಾಗ ಸಭೆಯಲ್ಲಿ ಸೇರಿದ್ದ ಕೆಲ ಗ್ರಾಮ ಪಂಚಾಯತಿ ಸದಸ್ಯರು, ಕೋಪಗೊಂಡು “ಚನ್ನಾಗಿದ್ದ ಶೌಚಾಲಯವನ್ನು ಕೆಡವಿದ್ದು ನಿಮ್ಮ ಶಿಕ್ಷಕರು ಅವರನ್ನು ಹೋಗಿ ಕೇಳಿ “ ಎಂದು ನೆರದಿದ್ದ ಜನರಲ್ಲಿಯೇ ವಿದ್ಯಾರ್ಥಿನಿಯರಿಗೆ ಗದಿಸಿದ ಪ್ರಸಂಗ ನೆಡೆಯಿತು.

          ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಗೌರಮ್ಮ.ವಿ.ಕುರ್ತಕೋಟಿ, ಸದಸ್ಯರಾದ ನಿಂಗಪ್ಪ ಮಾಳೆಕೊಪ್ಪ, ಶರಣಪ್ಪ ಕುಕನೂರ, ಸುಶೀಲಾ ವಿರುಪಾಕ್ಷಯ್ಯ ವಿರಕ್ತಿಮಠ, ಹಾಲವ್ವ ಬಸಪ್ಪ ಟಂಗುAಟಿ, ಅಕ್ಕವ್ವ ಶರಣಪ್ಪ ಚಾಕರಿ, ಯಮನೂರಪ್ಪ ಕಟ್ಟಿಮನಿ, ಯಮನೂರಪ್ಪ ಹಿರೇಮನಿ, ರುದ್ರಪ್ಪ ಸರವಿ, ಹನಮಕ್ಕ ಗೌಡ್ರ, ಶಿವಶರಣಗೌಡ್ರ ಗ್ರಾಮ ತಾಲೂಕ ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ. ಬಿ.ಎಫ್.ಟಿ ಶರಣಪ್ಪ ಮೂಲಿಮನಿ, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಗೂ ಇತರರಿದ್ದರು.

Leave a Reply

error: Content is protected !!