ಕುಕನೂರು : ಕಳೆದ ಒಂದು ವರ್ಷದಿಂದ ಸರ್ಕಾರದ ಮಹತ್ವಕಾಂಕ್ಷೆಯ ಈ ಆಡಳಿತದ ಕರ್ನಾಟಕ ಒನ್ ಸಮಗ್ರ ನಾಗರಿಕ ಸೇವಾ ಕೇಂದ್ರವು ಕುಕನೂರು ಪಟ್ಟಣದಲ್ಲಿ ಕಾರ್ಯನಿರ್ವಹಿಸಬೇಕೆಂಬ ಪಟ್ಟಣದ ಜನರಲ್ಲಿ ಬಹಳಷ್ಟು ನಿರೀಕ್ಷೆ ಇತ್ತು, ಇಂದು ಆ ನಿರೀಕ್ಷೆ ಸಫಲವಾಯಿತು.
ಕುಕನೂರು ಬಸ್ ನಿಲ್ದಾಣದ ಹಿಂದುಗಡೆ ಹಾಗೂ ಕುಕನೂರು ಬಸ್ ನಿಲ್ದಾಣದಲ್ಲಿ ಏಕಕಾಲದಲ್ಲಿ “ಕರ್ನಾಟಕ ಒನ್” ಕಾರ್ಯರಂಭವಾಗಿದೆ.
“ಕರ್ನಾಟಕ ಒನ್” ಸಮಗ್ರ ನಾಗರಿಕ ಸೇವಾ ಕೇಂದ್ರವನ್ನು ಕುಕನೂರು ತಹಶೀಲ್ದಾರ್ ಹೆಚ್ ಪ್ರಾಣೇಶ್ ಉದ್ಘಾಟಿಸಿದರು. ಅವರೊಂದಿಗೆ ಗ್ರೇಡ್ 2 ತಹಸೀಲ್ದಾರ್ ಮುರುಳಿಧರ್ ರಾವ್ ಕುಲಕರ್ಣಿ ಅವರು ಸಾಥ್ ನೀಡಿದರು.
ಸುಮಾರು ಒಂದು ವರ್ಷದಲ್ಲಿ ಪಟ್ಟಣದ ಜನರು ಸರ್ಕಾರಿ ಯೋಜನೆಗಳಿಗಾಗಿ ಆನ್ಲೈನ್ ಅಪ್ಲಿಕೇಶನ್ ಗೆ ಪರದಾಡುತ್ತಿದ್ದರು. ಇದೀಗ ಒಂದೇ ಪಟ್ಟಣಕ್ಕೆ ಎರಡೆರಡು ಕರ್ನಾಟಕ ಒನ್ ಕೇಂದ್ರವನ್ನು ಬಂದಿರುವುದು ಸ್ಥಳೀಯರಿಗೆ ಖುಷಿಯ ವಿಚಾರವೇ ಸರಿ.
“ಕರ್ನಾಟಕ ಒನ್” ಸಮಗ್ರ ನಾಗರಿಕ ಸೇವಾ ಕೇಂದ್ರ ಫ್ರಾಂಚೈಸಿ ಅನ್ನು ರೇಣುಕಾ ಉರ್ಫ ಕಾವ್ಯ ಅವರು ಪಡೆದರೇ, ಇನ್ನೊಂದು ಕೇಂದ್ರವನ್ನು ರಘುನಾಥ್ ವಿಶ್ವಕರ್ಮ ಎಂಬುವರು ಪಡೆದ್ದಿದ್ದಾರೆ.
“ಕರ್ನಾಟಕ ಒನ್” ಸಮಗ್ರ ನಾಗರಿಕ ಸೇವಾ ಕೇಂದ್ರ ದಲ್ಲಿ ದೊರೆಯುವ ಸೇವೆಗಳು.
1.ಜಾತಿ ಮತ್ತು ಆದಾಯ,
2. ವಾಸಸ್ಥಳ,
3. ಪಹಣಿ,
4. ಸಣ್ಣ ಹಿಡುವಳಿ,
5. ಭೂ ಹಿಡುವಳಿ,
6. ಬೆಳೆ ದೃಡೀಕರಣ,
7. ಆಧಾರ್ ಸೇವೆಗಳು,
8. ರೇಷನ್ ಕಾರ್ಡ್,
9. ಪಾನ್ ಕಾರ್ಡ್,
10. ಲೇಬರ್ ಕಾರ್ಡ್,
11. ಬಸ್ ಪಾಸ್,
12. ಹಿರಿಯ ನಾಗರೀಕ ಸೇವೆಗಳು